ಬೆಂಗಳೂರು/ ಶಿವಮೊಗ್ಗ, ತೀರ್ಥಹಳ್ಳಿ ಮೂಲದ ಮಹಿಳೆಯೊಬ್ಬರು ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನಲ್ಲಿ ರಾಯ್ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಯಾಗಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು ಇವರ ಪರಿಚಯವಿದ್ದ ಮತ್ತು ಸಂಪರ್ಕದಲ್ಲಿದ್ದ ಅಮರಪಾಲಿ ಸುರೇಶ (ತೀರ್ಥಹಳ್ಳಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ) ಸದರಿ ಮಹಿಳೆಗೆ ನಂಬಿಸಿ ಅವರು ಟ್ರಸ್ಟಿ ಆಗಿರುವ ಸಂಸ್ಥೆಗೆ ನೂರು ಕೋಟಿ ರೂಪಾಯಿಗಳ ಡೊನೇಷನ್ ಕೊಡಿಸುವುದಾಗಿ ನಂಬಿಸಿದ್ದು,
ತೀರ್ಥಹಳ್ಳಿಯ ವೆಂಕಟರಮಣ ಭಟ್ ಮತ್ತು ಹೈದರಾಬಾದಿನ ಅತುಲ್ ಕುಮಾರ್ ಶರ್ಮ ಇತರರು ಸೇರಿ ಸಂಚು ನಡೆಸಿ ಬೆಂಗಳೂರಿನ ಮಹಿಳೆಯಿಂದ ವಿವಿಧ ಹಂತಗಳಲ್ಲಿ ಸುಮಾರು 35 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿ ಮೋಸ ಮಾಡಿದ್ದಾರೆಂದು ವಂಚಿತ ಮಹಿಳೆಯು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಠಾಣಾಧಿಕಾರಿಯವರು 35 ಲಕ್ಷ ರೂಪಾಯಿಗಳ ಮೋಸ ಮತ್ತು ವಂಚನೆಗೆ ಒಳಪಟ್ಟ ಮಹಿಳೆ ನೀಡಿದ ದೂರನ್ನು ಸ್ವೀಕರಿಸಿ ಅಮರ ಪಾಲಿ ಸುರೇಶ A1 ಮುಖ್ಯ ಆರೋಪಿಯಾಗಿ ಮತ್ತು ಇತರರ ಐದು ಜನರು ಸೇರಿ ಒಟ್ಟು ಆರು ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಿ ಬೆಂಗಳೂರಿನ 6ನೇ ಹೆಚ್ಚುವರಿ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಎಫ್ ಐ ಆರ್ ಸಲ್ಲಿಸಿದ್ದಾರೆ.
ಬಿಎನ್ಎಸ್ ಕಾಯಿದೆ 2023ರ ಕಲಂ 3(5).,318(4). ಅಡಿಯಲ್ಲಿ ಪ್ರಕರಣ ವನ್ನು ದಾಖಲೆ ಮಾಡಿದ್ದು . ಅಮರಪಾಲಿ ಸುರೇಶ ಪೊಲೀಸರ ಬಂಧನದಿಂದ ತಲೆಮರಿಸಿಕೊಂಡಿದ್ದು ,ಪೊಲೀಸರು ಬಂಧನಕ್ಕಾಗಿ ಹುಡುಕಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಅಮರಪಾಲಿ ಸುರೇಶ ನನ್ನು ಬಂಧಿಸಲು ತೀರ್ಥಹಳ್ಳಿಯಲ್ಲೂ ಸಹ ಒಂದು ಹುಡುಕಿ ಪತ್ತೆ ಆಗದೆ ಕಾರಣ ವಾಪಾಸ್ ಹೋಗಿದ್ದಾರೆ ಎಂದು ಬಲ್ಲ ಮೂಲಗಳಿಂದ ಗಳಿಂದ ತಿಳಿದು ಬಂದಿರುತ್ತೆ.
ಪ್ರಾಮಾಣಿಕ ರಾಜಕಾರಣಿ ಆಗಿರುವ ಕಿಮ್ಮನೆ ರತ್ನಾಕರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಅಮರಪಾಲಿ ಸುರೇಶ್ ಸದಾ ತಮ್ಮ ವಾಟ್ಸಪ್ ಡಿಪಿಯಲ್ಲಿ ಕಿಮ್ಮನೆ ರತ್ನಾಕರ್ ಅವರೊಂದಿಗೆ ಇರುವ ಫೋಟೋ ಹಾಕಿಕೊಳ್ಳುವುದರಿಂದ, ಕಿಮ್ಮನೆ ರತ್ನಾಕರ್ ಅವರಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಹಾಗಾಗಿ ನಾವು ಕೂಡ ಸುದ್ದಿಯಲ್ಲಿ ಕಿಮ್ಮನೆ ರತ್ನಾಕರ್ ಆಪ್ತರೆಂದು ಬರಿಯಬೇಕಾದ ಪರಿಸ್ಥಿತಿಯಾಗಿದೆ.



