ಶಿವಮೊಗ್ಗ,ರಾಷ್ಟ್ರೀಯ ಸೇವಾ ಯೋಜನೆ ಸಮಾಜ ಸೇವೆಯ ಮೂಲಕ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಒಂದು ಮಹತ್ವದ ವೇದಿಕೆ. ಎನ್ ಎಸ್ ಎಸ್. ನಮ್ಮಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ, ಶಿಸ್ತು ಮತ್ತು ಸಮಾಜದ ಮೇಲಿನ ಜವಾಬ್ದಾರಿಯನ್ನು ಬೆಳೆಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಶಿವಮೊಗ್ಗ ಪ್ರಾಂಶುಪಾಲರಾದ ಡಾ. ರಂಗನಾಥ ರಾವ್ ಎಚ್ ಕರಾಡ್ ರವರು ತಿಳಿಸಿದರು.
ಮತ್ತೂರು ಗ್ರಾಮ ಪಂಚಾಯಿತಿಯ ಸಿದ್ದರಹಳ್ಳಿ ಗ್ರಾಮದಲ್ಲಿ ದಿನಾಂಕ 17-2-2026 ರಿಂದ 23-2-2026 ರ ವರೆಗೆ ಶಿವಮೊಗ್ಗ ನಗರದ ಬಿ ಎಚ್ ರಸ್ತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಎನ್.ಎಸ್.ಎಸ್.ನ ಮಹತ್ವವನ್ನು ಕುರಿತು ತಿಳಿಸಿದರು.
ದಿನಾಂಕ 17-02-2026 ರಂದು ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯನ್ನು ಗ್ರಾಮದ ಹಿರಿಯ ಮುಖಂಡರಾದ ಕೆ.ಪಿ.ತಿಮ್ಮೇಗೌಡ (ರಾಜಣ್ಣ) ಕೆ.ಮಂಜೇಶ್, ಎಂ. ಸಿ. ಕೆಂಪೇಗೌಡರವರು, ಮತ್ತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಶ್ರೀ.ರಾಜೇಗೌಡ, ಶ್ರೀ.ಎಸ್.ಎಂ. ಮಂಜುನಾಥ, ಗ್ರಾಮದ ಮುಖಂಡರಾದ ಧನಂಜಯ ಎಸ್ ಎಂ. ತೊರೆಗೌಡ್ರು, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಾದ ಬೆಟ್ಟೇಗೌಡ್ರು,

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಮಂಜುನಾಥ ಟಿ ಮತ್ತು ಶ್ರೀಮತಿ ಜಯಶೀಲಾ ರವರು ಶಾಲೆಯ ಮುಖ್ಯೋಪಧ್ಯಾಯರಾದ ಹೇಮಾಂಜನಿರವರು ಹಾಗೂ ಎನ್ ಎಸ್.ಎಸ್ ಘಟಕ 1 ಮತ್ತು 2ರ ಅಧಿಕಾರಿಗಳಾದ ಉಮಾಶಂಕರ್ ಮತ್ತು ಡಾ ವರದರಾಜ್ ಹಾಗೂ ಸಹ ಶಿಬಿರಾಧಿಕಾರಿಗಳಾದ ಡಾ. ಬಸವಣ್ಯಪ್ಪ ಎಂ. ಮಹೇಂದ್ರ ಜಿ. ಹಾಗೂ ಅಧ್ಯಾಪಕರುಗಳಾದ ಡಾ. ಉಮಾಪತಿ ಡಾ. ಜಗದೀಶ್ ಬಿದರಕೊಪ್ಪ, ಅರುಣ್ ಕುಮಾರ್ ಆರ್.ಬಿ., ಡಾ. ಸೈಯದಾ ರಿಹಾನಾ ಬಾನುರವರು ಉಪಸ್ಥಿತಿರಿದ್ದರು.



