ಶಿವಮೊಗ್ಗದ ಗಾಜನೂರುನಲ್ಲಿ ವ್ಯಕ್ತಿಯ ಕೊಲೆಯಾಗಿದೆ. ಗಾರೆ ಕೆಲಸಗಾರ ಶ್ರೀನಿವಾಸ್ (36) ಕೊಲೆಯಾದ ದುರ್ದೈವಿ.
ಶಿವಮೊಗ್ಗದ ಹೊಸಮನೆ ಬಡಾವಣೆಯ ಶ್ರೀನಿವಾಸ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿರುವ ದುಷ್ಕರ್ಮಿಗಳು.
ಕುಡಿತದ ಚಟ ಅಂಟಿಸಿಕೊಂಡಿದ್ದ ಶ್ರೀನಿವಾಸ್ ಪ್ರತಿದಿನ ಗಾರೆ ಕೆಲಸ ಮುಗಿದ ನಂತರ ಮಧ್ಯಪಾನ ಮಾಡುತ್ತಿದ್ದ, ನಿನ್ನೆ ರಾತ್ರಿ ಕೂಡ ಸ್ನೇಹಿತರೊಂದಿಗೆ ಕುಳಿತು ಮಧ್ಯಪಾನ ಸೇವಿಸಿದ್ದ ಎಂಬ ಮಾಹಿತಿಯಾಗಿದೆ.ಈ ಸಂದರ್ಭದಲ್ಲಿ ಗಲಾಟೆಯಾಗಿ ಶ್ರೀನಿವಾಸ್ ಕೊಲೆಯಾಗಿದೆ ಎನ್ನಲಾಗಿದೆ.
ಕೊಲೆ ಮಾಡಿ ಪರಾರಿಯಾಗಿರುವ ಸ್ನೇಹಿತರಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.



