ಶಿವಮೊಗ್ಗ | ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ INTUC Congressನ ಮಕ್ಬುಲ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ, ಹೊರವಲಯದ ಸೋಮಿನಕೊಪ್ಪ ಹಳೇ ಊರು ಇಲ್ಲಿಗೆ ಸಾರ್ವಜನಿಕ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಈ ಹಿಂದೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜವಾಗಿರುವುದಿಲ್ಲವಾದ್ದರಿಂದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಅಮರಾಂಣಾಂತಿಕ ಧರಣಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಾವೆಲ್ಲರೂ ವಾರ್ಡ್ ನಂ. 1 ರ ನಿವಾಸಿಗಳಾಗಿದ್ದು, ನಮ್ಮ ಶಿವಮೊಗ್ಗ ನಗರವನ್ನು ಸ್ಮಾರ್ಟ್‌ ಸಿಟಿ ಮಾಡಿದ್ದರೂ ಸಹ ಶಿವಮೊಗ್ಗ ನಗರದ 1ನೇ ವಾರ್ಡಿಗೆ ಸೇರಿರುವ ನಮ್ಮ ಬಡಾವಣೆಗೆ ಮೂಲಭೂತ ಸಾರ್ವಜನಿಕ ಸೌಕರ್ಯಗಳಾದ ಕುಡಿಯುವ ನೀರಿನ ಸೌಲಭ್ಯ, ರಸ್ತೆ ದೀಪ, ರಸ್ತೆ, ಒಳಚರಂಡಿ ಇಲ್ಲದೇ ಸಿಟಿ ಬಸ್ ಇಲ್ಲದೇ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ.

ಚರಂಡಿಗಳಲ್ಲಿ ನೀರು ನಿಂತು ಇದರ ಸೊಳ್ಳೆಯ ಕಾಟದಿಂದ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವದೇ ಅನುಮಾನವಿಲ್ಲಾ ಎಂದು ತಿಳಿಸಿದ್ದಾರೆ. ಚರಂಡಿ ನೀರು ನಿಂತು ಕೆಟ್ಟ ವಾಸನೆ ಬರುತ್ತಿದೆ.

ಈ ನಮ್ಮ ತೊಂದರೆಗಳನ್ನು ಹೇಳಿಕೊಳ್ಳಲು ಇತ್ತ ಕಡೆ ಸ್ಥಳೀಯ ಶಾಸಕರಾಗಲೀ ಮಹಾನಗರಪಾಲಿಕೆ ಆಯುಕ್ತರಾಗಲೀ, ಮಾಜಿ ಸದಸ್ಯರಾದ ಆಶ ಚಂದ್ರಪ್ಪ ಇವರಾಗಲೀ ಇತ್ತ ಕಡೆ ತಿರುಗಿ ನೋಡಿರುವುದಿಲ್ಲ.

ಈ ಬಗ್ಗೆ ನಾವು ಈ ಹಿಂದೆ ದಿನಾಂಕ: 29-11-2021 ರಂದು ಮತ್ತು ದಿನಾಂಕ: 22-02-2022 ರಂದು ಹಾಗೂ ಇನ್ನೂ ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿವಾಗಿರುವುದಿಲ್ಲ ಎಂದು ದೂರಿದ್ದಾರೆ.

ನಾವು ಅನೇಕ ಬಾರಿ ಮಹಾನಗರ ಪಾಲಿಕೆಯ ತಮ್ಮ ಇಲಾಖೆಯ ಮುಂದೆ ಧರಣಿ ನಡೆಸಿ ಮನವಿಯನ್ನು ಸಲ್ಲಿಸಿರುತ್ತೇವೆ.

ನಮ್ಮ ಸ್ಥಳೀಯ ಶಾಸಕರು. ನಮ್ಮ ವಾರ್ಡಿಗೆ ಬಂದ ಅನುದಾನವನ್ನು ದುರುಪಯೋಗ ಪಡಿಸಿಕೊಂಡು ಬೇರೆ ಕಡೆ ಅನುದಾನವನ್ನು ಹಾಕಿಸಿಕೊಂಡು ದ್ವಿಮುಖ ನೀತಿಯನ್ನು ಅನುಸರಿಸಿರುತ್ತಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿ ಕೂಲಿ ಕಾರ್ಮಿಕರು, ಬಡವರು, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುತ್ತಾರೆ. ಆದರೂ ಸಹ ಇತ್ತಿ ಕಡೆ ಎಂದಿಗೂ ಒಂದು ಸಲವಾದರೂ ಬಂದು ಸ್ಪಂದಿಸಿರುವುದಿಲ್ಲ.

ಆದ್ದರಿಂದ ಇಂದು ಸೋಮವಾರ ಬೆಳಿಗ್ಗೆ ನಾವು ನಮ್ಮ ಗ್ರಾಮಸ್ಥರುಗಳು ಸೇರಿ ಸೋಮಿನಕೊಪ್ಪ ಸರ್ಕಲ್‌ನಲ್ಲಿ ರಸ್ತೆ ತಡೆ ಚಳುವಳಿ ಹಾಗೂ ಪ್ರತಿಭಟನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಹಾಗೂ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

ಆದ್ದರಿಂದ ಮಾನ್ಯ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ನಮ್ಮ ಕುಂದು ಕೊರತೆಗಳನ್ನು ಕೇಳಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಡ ಜನರ ಏಳಿಗೆಗೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇವೆ.

ಇಲ್ಲವಾದಲ್ಲಿ ತಮ್ಮ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಅಮರಾಂಣಾಂತಿಕ ಧರಣಿ ನಡೆಸಲು ಅನುಮತಿ ಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಸಮಿತಿಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ INTUC ಕಾಂಗ್ರೆಸ್ ನ ಅಧ್ಯಕ್ಷರಾದ ಮಕ್ಬುಲ್ ಅಹ್ಮದ್ ತಿಳಿಸಿದ್ದಾರೆ.

Author