ಶಿವಮೊಗ್ಗ | ಬಂಗಾರದ ಸರ ಸುಲಿಗೆ ; 48 ಗಂಟೆ ಒಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಕುವೆಂಪು ನಗರ (ಶಂಕರಘಟ್ಟ) ಗ್ರಾಮದ ಸಮೀಪದ ಶಿವಮೊಗ್ಗ–ತರಿಕೆರೆ ರಾಜ್ಯ ಹೆದ್ದಾರಿಯ ಟಾರ್ ರಸ್ತೆಯಲ್ಲಿ ನಡೆದ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ.

ದಿನಾಂಕ 30/01/2026 ರಂದು ಪಿರ್ಯಾದಿದಾರರಾದ ಜಯಂತ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ, ಮೋಟಾರು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಸುಮಾರು 14 ಗ್ರಾಂ (ಮೌಲ್ಯ ರೂ.1,50,000/-) ಬಂಗಾರದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.

ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 18/2026, ಕಲಂ 309(6) BNS ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಮನಗಂಡು ಶ್ರೀ ನಿಖಿಲ್ ಬಿ., ಐಪಿಎಸ್ – ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಎ.ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು–1, ಶ್ರೀ ರಮೇಶ್ ಕುಮಾರ್ ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು–2 ರವರ ಮಾರ್ಗದರ್ಶನದಲ್ಲಿ, ಶ್ರೀ ಪ್ರಕಾಶ್ ರಾಠೋಡ್, DySP ಭದ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು.

ಪೊಲೀಸ್ ಇನ್ಸ್‌ಪೆಕ್ಟರ್ ಚಿದಾನಂದ ಅವರ ನೇತೃತ್ವದಲ್ಲಿ, ಎ.ಎಸ್.ಐ ದಿವಾಕರ್ ರಾವ್, ಸಿಪಿಸಿ ಯದುನಂದನ ಹಾಗೂ ಸಂತೋಷಕುಮಾರ ರವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ,ಆರೋಪಿತರಾದ ಚಂದನ್ ನಾಯ್ಕ (20 ವರ್ಷ), ಮಲ್ಲಿಗೇನಹ ಕ್ಯಾಂಪ್ ಗ್ರಾಮ, ಭದ್ರಾವತಿ,ವೇಣುಗೋಪಾಲ (26 ವರ್ಷ), ಮಲ್ಲಿಗೇನಹಳ್ಳಿ ಕ್ಯಾಂಪ್ ಗ್ರಾಮ, ಭದ್ರಾವತಿ,ಎಂಬವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿತರಿಂದ ಸುಲಿಗೆ ಮಾಡಿದ 10 ಗ್ರಾಂ ಬಂಗಾರದ ಸರ (ಅಂದಾಜು ಮೌಲ್ಯ ರೂ.1,50,000/-) ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣವನ್ನು ಅಲ್ಪ ಸಮಯದಲ್ಲೇ ಭೇದಿಸಿ, ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಂಡ ತನಿಖಾ ತಂಡದ ಕಾರ್ಯಕ್ಷಮತೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Author