ಶಿವಮೊಗ್ಗ | ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡುವಂತೆ ಸಂಸದರಿಗೆ ಮನವಿ

ಶಿವಮೊಗ್ಗ

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ರವರ ಹೆಸರನ್ನ ಕೇಂದ್ರ ಸರ್ಕಾರದಿಂದ ಉದ್ಯೋಷಣೆ ಮಾಡಿಸಲು ಶೀಘ್ರವೇ ಕ್ರಮಕೈಗೊಳ್ಳುವುದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರರವರು ನಮ್ಮ ಟ್ರಸ್ಟ್‌ಗೆ ಇಂದು ಭರವಸೆ ನೀಡಿದರು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿಯಾದ ಕಲ್ಲೂರು ಮೇಘರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದುವರೆದು ಮನವಿ ಪತ್ರದ ಕುರಿತಾಗಿ ಈ ಕೆಳಕಂಡ ಮಾಹಿತಿ ತಿಳಿಸಿದ್ದಾರೆ,ದಿನಾಂಕ:23-01-2026 ರ ಶುಕ್ರವಾರ ವಿನೋಬನಗರದ ಸಂಸದರ ನಿವಾಸದಲ್ಲಿ ಸಂಸದರನ್ನ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸದ ಸಂದರ್ಭದಲ್ಲಿ ನಮ್ಮ ಟ್ರಸ್ಟ್‌ನ ಮುಖಂಡರಿಗೆ ಈ ಭರವಸೆಯನ್ನು ನೀಡಿದರು.

1987 ರಲ್ಲಿ ರಾಷ್ಟ್ರಮಟ್ಟದ ಜ್ಞಾನಪೀಠ ಪ್ರಶಸ್ತಿಯನ್ನ ಮೊಟ್ಟಮೊದಲ ಬಾರಿಗೆ ಪಡೆದ ಹೆಗ್ಗಳಿಕೆ ಕುವೆಂಪುರವರಿಗೆ ಇದೆ. 1968 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯೂ ಸಹ ಸನ್ಮಾನ್ಯರಿಗೆ ಲಭಿಸಿದೆ. ಶ್ರೀಯುತರು ಶ್ರೀ ರಾಮಾಯಂ ದರ್ಶನಂ ಎಂಬ ಮಹಾ ಕಾವ್ಯವನ್ನ ರಚಿಸಿದ್ದಾರೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಶ್ರೇಷ್ಠಮಟ್ಟದ ಕಾದಂಬರಿಗಳನ್ನು ರಚಿಸಿದ್ದಾರೆ. “ಜಯ ಭಾರತ ಜನನಿಯ ತನುಜಾತೆ” ಎಂಬ ರಾಜ್ಯಗೀತೆಯನ್ನು ಸಹ ರಚಿಸಿದ್ದಾರೆ.

ಕುವೆಂಪುರವರು ಬಾವಗೀತೆ, ನಾಟಕ ಕ್ಷೇತ್ರಗಳಲ್ಲಿಯೂ ಸಹ ಕೃತಿಗಳನ್ನು ರಚಿಸಿದ್ದಾರೆ. ಕುವೆಂಪುರವರು ಮೈಸೂರಿನ ಮಹಾರಾಜ ಕಾಲೇಜ್‌ನಲ್ಲಿ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಮೈಸೂರು ವಿಶ್ವವಿದ್ಯಾಯಲದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಶ್ರೀಯುತರಿಗೆ ಇದೆ ಇವರ ಗೌರವಾರ್ಥ ಶಿವಮೊಗ್ಗದ ಹತ್ತಿರ ಶಂಕರಘಟ್ಟದಲ್ಲಿ ಕುವೆಂಪು ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಎಂದು ಸಂಸದರನ್ನ ಭೇಟಿಯಾಗಿ ಮನವಿ ಪತ್ರ ನೀಡಿದ ಸಂದರ್ಭದಲ್ಲಿ ಟ್ರಸ್ಟ್‌ನ ಮುಖಂಡ ಸಂಸದರಿಗೆ ವಿವರಿಸಿದರು.

ಆದ್ದರಿಂದ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಕೂಡಲೆ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಶ್ರೀ ಕುವೆಂಪು ರವರ ಹೆಸರನ್ನ ಘೋಷಣೆ ಮಾಡಿಸಲು ಕ್ರಮ ಕೈಗೊಳ್ಳಲು ಟ್ರಸ್ಟ್‌ನ ಮುಖಂಡರು ಸಂಸದರನ್ನ ಕೋರಿದರು.

ಹುಬ್ಬಳಿಯ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರವರ ಹೆಸರು, ವಿಜಾಪುರ ವಿಮಾನ ನಿಲ್ದಾಣಕ್ಕೆ ಜಗತ್‌ಜ್ಯೋತಿ ಬಸವಣ್ಣನವರ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನವರ ಹೆಸರನ್ನೂ ಸಹ ಉದ್ವೇಷಣೆ ಮಾಡುವುದು ಬಾಕಿ ಇದ್ದು, ಕೇಂದ್ರ ಸರ್ಕಾರ ಈ ನಾಲ್ಕು ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ಎರಡು ವರ್ಷ 6 ತಿಂಗಳ ಹಿಂದೆ ಶಿಫಾರಸ್ಸು ಮಾಡಿರುವಂತೆ ಕೂಡಲೆ ಈ ನಾಲ್ಕೂ ಹೆಸರುಗಳನ್ನ ಕೇಂದ್ರ ಸರ್ಕಾರದಿಂದ ಉದ್ಯೋಷಣೆ ಮಾಡಿಸಲು ಕ್ರಮ ಕೈಗೊಳ್ಳಲು ಟ್ರಸ್ಟ್‌ನ ಮುಖಂಡರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲ್ಲೂರು ಮೇಘರಾಜ ಶಂಕ್ರನಾಯ್ಕ, ಆಲೀಂ ಖಾನ್, ಬಸವರಾಜ್, ಕೆ. ಆರ್. ಶಿವಣ್ಣ, ಭ್ರಮೇಶ್ವರ ಯುವರಾಜ್ ಉಪಸ್ಥಿತರಿದ್ದರು.

Author