KSRTC ಬಸ್ ನಲ್ಲಿ ಮಂಗಳಮುಖಿಯರು ಹೀಗೆ ಯಾಕೆ ಮಾಡಿದರು?

ಬೆಂಗಳೂರು

ಕೆಲವು ಮಂಗಳಮುಖಿಯರು ಇತರರಂತೆ ಬೇರೆ ಮಾರ್ಗ ಹಿಡಿಯದೇ ಸ್ವಾವಲಂಬಿಯಾಗಿ ಜೀವನವನ್ನು ನಡೆಸುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ಸಿನಿಮಾ, ಸಾಮಾಜಿಕ ಕಾರ್ಯ, ಆಟೋ ವ್ಯವಹಾರನ್ನು ಪ್ರಾರಂಭಿಸಿದ್ದಾರೆ. ಮಂಗಳಮುಖಿಯರ (transgender) ಬಗ್ಗೆ ತಪ್ಪು ಕಲ್ಪನೆಗಳಿವೆ. ಸಮಾಜವು ಇವರನ್ನು ಬೇರೆಯದೇ ರೀತಿಯಲ್ಲಿ ಸ್ವೀಕರಿಸುತ್ತಿದೆ. ಅಲ್ಲದೇ ತೃತೀಯ ಲಿಂಗಿಗಳನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳುವ ಕಾಲವೊಂದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರು ಸ್ವಾವಲಂಬಿ ಜೀವನವನ್ನು ನಡೆಸಲು ಮುಂದಾಗುತ್ತಿದ್ದಾರೆ.

ಆದರೆ ದುರದೃಷ್ಟ ಸಂಗತಿಯೊಂದನ್ನ ನಾವು ನಿಮ್ಮ ಮುಂದೆ ತೆರಡಿಡುತ್ತಿದ್ದೇವೆ ಅಂದು ಮಕರ ಸಂಕ್ರಾಂತಿ ಹಬ್ಬ ಶಿವಮೊಗ್ಗ ನಗರದ ಮುಖ್ಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ರಾತ್ರಿ 8 ಗಂಟೆ ಸಮಯದಲ್ಲಿ ಶಿವಮೊಗ್ಗ ದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಂಪು ಬಸ್.

ಈ ವೇಳೆ ಶಿವಮೊಗ್ಗ ದಿಂದ ಮಂಗಳಮುಖಿಯೊಬ್ಬರು ಬಸ್ ಹತ್ತಿದರು ಬಸ್ ತೆರಳುತ್ತಿದ್ದ ವೇಳೆಯಲ್ಲಿ ಭದ್ರಾವತಿ ಬರುವ ವೇಳೆ ಮಾಚೇನಹಳ್ಳಿ ಬಳಿ ಮಂಗಳಮುಖಿ ಮೊಬೈಲ್ ನಲ್ಲಿ ವಿಪರೀತ ಜೋರಾಗಿ ಹಾಡು ಹಾಕಿದ್ದಾರೆ, ಈ ಸಂಬಂಧ ಪ್ರಯಾಣಿಕರಿಗೆ ಕಿರಿ ಕಿರಿ ಉಂಟಾಗಿದೆ, ಇದರಿಂದ ನಿರ್ವಾಹಕ ಶಬ್ದ ಕಡಿಮೆ ಮಾಡುವಂತೆ ತಿಳಿಸಿದ್ದಾರೆ, ಇದರಿಂದ ಜಗಳ ಪ್ರಾರಂಭವಾಗಿದೆ ನಂತರ, ಭದ್ರಾವತಿ ಬಾರಂದೂರು ಬಳಿ ಮತ್ತೆ ಶಬ್ದ ಕಡಿಮೆ ಮಾಡಿ ಅಂತ ನಿರ್ವಾಹಕ ತಿಳಿಸಿದ್ದಾರೆ, ತದ ನಂತರ ತರೀಕೆರೆ ಬಳಿ ಮತ್ತೆ ಜೋರಾಗಿ ಜಗಳವಾಗಿದೆ, ಈ ಸಂಬಂಧ ನಿರ್ವಾಹಕ Ear Phone ಬಳಸಿ ಎಂದಿದ್ದಾರೆ ಹಾಗೂ ಬಸ್ ನಲ್ಲಿ ಹಾಕಿರುವ ನಾಮ ಫಲಕ ತೋರಿಸಿದ್ದಾರೆ ಪ್ರಯಾಣಿಕರಿಗೆ ಕಿರಿ ಕಿರಿ ಆಗುವಂತೆ ಜೋರಾಗಿ ಹಾಡು ಹಾಕಬಾರದು ಎಂದು ಈ ವೇಳೆ ಮಂಗಳಮುಖಿ, ನಿರ್ವಾಹಕನಿಗೆ ತೀರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಇದರಿಂದ ಬೇಸತ್ತ ನಿರ್ವಾಹಕ ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟೆಲ್ಲಾ ಆದ ನಂತರ ಬಸ್ ಬೀರೂರು ದಾಟಿ ಕಡೂರು ಕಡೆ ಪ್ರಯಾಣ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಂಗಳಮುಖಿ ತನ್ನ ತಂಡಕ್ಕೆ ಕರೆ ಮಾಡಿ ಬಸ್ ಕಡೂರು ಕಡೆ ಚಲಿಸುತ್ತಿದೆ ಬನ್ನಿ ಎಲ್ಲರೂ ಅಂತ ತಿಳಿಸಿದ್ದಾರೆ. ಈ ವೇಳೆ ಕಡೂರು ಹತ್ತಿರ ಬಸ್ಸು ತಲುಪುತ್ತಿದ್ದಂತೆ 17 ಮಂಗಳಮುಖಿಯರಿದ್ದ ತಂಡ ಬಸ್ ಅನ್ನು ರಸ್ತೆಯಲ್ಲಿ ತಡೆದಿದೆ.

ಬಸ್ ನ ನಿರ್ವಾಹಕನ ಬಳಿ ಬಂದು ಜಗಳ ತೆಗೆದು ನಿರ್ವಾಹಕನ ಸುತ್ತುವರೆದು ಚಪ್ಪಾಳೆ ತಟ್ಟುತ್ತಾ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನಂತರ ನಿರ್ವಾಹಕನನ್ನ ಬಿಡಿಸಲು ಬಂದ ಚಾಲಕನ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ನಿರ್ವಾಹಕನಿಗೆ ಮುಖ ಮೂತಿ ಕಿತ್ತೊಗೋ ಹಾಗೆ ಹೊಡೆಯುತ್ತಿದ್ದಾಗ ಬಸ್ ನಲ್ಲಿ ಇದ್ದ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕ ಬಸ್ ಅನ್ನು ಪೊಲೀಸ್ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಇವರದು ಮಿತಿ ಮೀರುತ್ತಿದೆ ಎಂದು ಬಸ್ ಚಾಲಕನಿಗೆ ತಿಳಿಸಿದ್ದಾರೆ.

ಇದರಿಂದ ಸಿಟ್ಟಿಗಿದ್ದ ಮಂಗಳಮುಖಿಯರ ತಂಡ ಪ್ರಯಾಣಿಕನ ಮೇಲೂ ಮನಸೋ ಇಚ್ಚೆ ಹಲ್ಲೆ ಮಾಡಿದೆ.ಪ್ರಯಾಣಿಕನ ಜೆರ್ಕಿನ್ ಬಟ್ಟೆ ಹರಿದು ಹೋಗಿ ಒದೆ ತಿಂದು ಅಸ್ತವ್ಯಸ್ತ ಗೊಂಡಿದ್ದಾನೆ ಇದರಿಂದ ಉಳಿದಂತೆ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದಾರೆ. ನಿರ್ವಾಹಕ ಕೂಡ ತನ್ನ ಹಣ ಟಿಕೆಟ್ ಮುಂತಾದವುಗಳನ್ನ ರಕ್ಷಿಸಿಕೊಳ್ಳಲು ಅಲ್ಲಿಯೇ ಇದ್ದ ಚೆಕ್ ಪೋಸ್ಟ್ ಕಡೆ ಓಡಿ ಹೋಗಿದ್ದಾರೆ ಹಾಗೂ ಶಕ್ತಿ ಯೋಜನೆ ಇರುವುದರಿಂದ ಬಸ್ ನಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಇದ್ದರು ಎಂಬ ಮಾಹಿತಿಯಾಗಿದೆ. ಹಾಗಾಗಿ ಎಲ್ಲರೂ ಹೆದರಿ ತುಟಿಕ್ ಪಿಟಿಕ್ ಅನ್ನದೆ ಮೂಕ ಪ್ರೇಕ್ಷಕರಾಗಿ ಅಸಹಾಯಕರಾಗಿದ್ದಾರೆ. ನಂತರ ಮಂಗಳಮುಖಿಯರ ತಂಡ ಪೊಲೀಸ್ ಕಂಪ್ಲೇಂಟ್ ಕೊಟ್ಟು ನೋಡು ಅಂತ ಜೀವ ಬೆದರಿಕೆ ಸಹ ಹಾಕಿ ಅಲ್ಲಿಂದ ತೆರಳಿದ್ದಾರೆ. ಇದೆಲ್ಲ ಸುಮಾರು 1 ಗಂಟೆಗಳ ಕಾಲ ರಸ್ತೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಮಂಗಳಮುಖಿಯರು ತೆರಳಿದ ನಂತರ ಬಸ್ ಪ್ರಯಾಣಿಕರನ್ನ ಕರೆದುಕೊಂಡು ಮುಂದಕ್ಕೆ ಪ್ರಯಾಣ ಬೆಳೆಸಿದೆ.ಈ ಘಟನೆ ಸಂಬಂಧ ಈ ಮಂಗಳಮುಖಿಯರು ಯಾರು?ಹಾಗೂ ಇಲ್ಲಿವರೆಗೂ ಯಾಕೆ ಘಟನೆ ಸಂಬಂಧ ದೂರು ದಾಖಲಿಸಲು ಆಗಿಲ್ಲ, ಹಾಗೂ ಬಸ್ ನಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುವ ಮಹಿಳೆಯರು ಹಾಗೂ ಇತರೆ ಪ್ರಯಾಣಿಕರು ಸುರಕ್ಷತೆಗೆ ಆದ್ಯತೆ ನೀಡೋಲ್ಲವೇ? ಚಾಲಕ ಮತ್ತು ನಿರ್ವಾಹಕರ ರಕ್ಷಣೆಗೆ KSRTC ಇಲಾಖೆ ಮುಂದಿನ ದಿನಗಳಲ್ಲಿ ಏನು ಕ್ರಮ ಕೈಗೊಳ್ಳಲಿದೆ? ಶಿವಮೊಗ್ಗ ನಗರದಿಂದ ಜನವರಿ 15 ನೇ ತಾರೀಕು ರಾತ್ರಿ 8 ಗಂಟೆಗೆ ತೆರಳಿದ ಬಸ್ ಯಾವುದು ಎಲ್ಲವು ಪ್ರಶ್ನೆಯಾಗಿ ಉಳಿದಿದೆ! ಮತ್ತು ಈ ರೀತಿಯ ನಡವಳಿಕೆ ತೋರಿಸಿ ಹಲ್ಲೆ ನಡೆಸಿದ ಮಂಗಳಮುಖಿಯರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ಮುಂದೆಂದೂ ಈ ರೀತಿಯ ಘಟನೆಗಳು ನಡೆಯದಂತೆ ಏನೆಲ್ಲಾ ಬೆಳವಣಿಗೆ ಆಗಲಿದೆ ಎಂಬುದೆ ಈಗಿರುವ ಕುತೂಹಲ?

ಮಂಗಳಮುಖಿಯರ ಸಂಘಟನೆ ಇದ್ದು ಈ ಸಂಬಂಧ ಯಾರು ಈ ರೀತಿ ವರ್ತಿಸಿದ್ದಾರೆ ಅವರನ್ನ ತಿದ್ದಬೇಕಾಗಿದೆ. ಸಮಾಜದ ಜೊತೆ ಜೊತೆಗೆ ಮಂಗಳಮುಖಿಯರು ಸಹ ಸಮಾಜದ ಭಾಗವಾಗಿ ಕೈಗೂಡಿಸಬೇಕಿದೆ, ಸಮಾಜಕ್ಕೆ ತದ್ವಿರುದ್ದವಾಗಿ ನಡೆಯುವರನ್ನ ತಿದ್ದಿ ಬುದ್ದಿ ಹೇಳುವ ಕೆಲಸವಗಬೇಕಿದೆ! ಯಾರೋ ಕೆಲವರು ಮಾಡುವ ತಪ್ಪಿನಿಂದ ಮತ್ತು ಇಂತಃ ಘಟನೆಗಳಿಂದ ಮಂಗಳಮುಖಿಯರ ಮೇಲೆ ಕೆಟ್ಟ ಅಭಿಪ್ರಾಯ ಬರತ್ತದೆ ಮುಂದಿನ ದಿನಗಳಲ್ಲಿ ಮಂಗಳಮುಖಿ ಸಂಘ ಸಹ ಇಂತಃ ಅಹಿತಕರ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ ಈ ಆಘಾತಕಾರಿ ಘಟನೆಯಿಂದ ಚಾಲಕರು, ನಿರ್ವಾಹಕರಲ್ಲಿ ಹಾಗೂ ಪ್ರಯಾಣಿಕರು ಭಯಭೀತರಾಗಿದ್ದಾರೆ.

ಮುಂದಿನ ದಿನಗಳಲ್ಲಿ ಇಂತಃ ಅಹಿತಕರ ಘಟನೆಗಳು ತಡೆಗಟ್ಟುವಲ್ಲಿ ಸುರಕ್ಷತೆ ದೃಷ್ಟಿಯಿಂದ ಈಗಿರುವ ಹೊಸ KSRTC ಬಸ್ ಗಳಲ್ಲಿ ಸಿಸಿಟಿವಿ ವ್ಯವಸ್ಥೆಯಿದೆ, ಹೀಗೆಯೇ ಹಳೆಯ ಬಸ್ ಗಳಲ್ಲಿ ಸಹ ಸಿಸಿಟಿವಿ ವ್ಯವಸ್ಥೆ ಅಳವಡಿಸಬೇಕಿದೆ, ಇದರಿಂದ ಅಹಿತಕರ ಘಟನೆಗಳು ನಡೆದಾಗ ಸಾಕ್ಷಿಗಳು ಸಿಗಲಿದೆ ಹಾಗೂ ತಪ್ಪಿತಸ್ತರಿಗೆ ಶಿಕ್ಷೆ ಆಗಲಿದೆ..!

Author