ಹಾಸನ | ರಾಜ್ಯದ ಹಿತದೃಷ್ಟಿಯಿಂದ, ಡಿಕೆಶಿ ಸಿಎಂ ಆಗಬೇಕು : ನಿರ್ಮಲಾನಂದ ಶ್ರೀ

ಹಾಸನ

ಹಾಸನ, ಕುಂದೂರು ಬಿಜಿಎಸ್ ಮಠದಲ್ಲಿ ಇಂದು ನಿರ್ಮಲಾನಂದ ಶ್ರೀಗಳು ಮಾತನಾಡಿ ಸದ್ಯ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ.ಸಿಎಂ ಆಕಾಂಕ್ಷಿ ಆಗಿರುವ ಡಿಕೆಶಿ, ಪ್ರಸ್ತುತ ಡಿಸಿಎಂ ಆಗಿದ್ದಾರೆ.

ಮುಖ್ಯಮಂತ್ರಿ ಆಗುವ ವಿಚಾರದ ಕುರಿತಾಗಿ ಡಿಕೆಶಿ ಅವರು ನಮ್ಮ ಜೊತೆ ಮಾತನಾಡಿಲ್ಲ.ಆದರೆ ಸಾವಿರಾರು ಭಕ್ತರು ನಮಗೆ ಕರೆ ಮಾಡುತ್ತಿದ್ದಾರೆ, ಡಿಕೆಶಿ ಸಿಎಂ ಆಗಬೇಕು ಎಂದು ಭಕ್ತರು ನಮ್ಮ ಜೊತೆ ಹೇಳಿಕೊಂಡಿದ್ದಾರೆ ಡಿಕೆಶಿ ಸಿಎಂ ಆಗಬೇಕೆಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ.

ಡಿಕೆಶಿಯವರು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ.ಹಾಗೆಯೇ ಎಲ್ಲಾ ಪಕ್ಷಗಳಲ್ಲೂ ಒಳ್ಳೆಯ ನಾಯಕರಿದ್ದಾರೆ.

ಆದರೆ ಈಗ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯವರು ಸಿಎಂ ಆಗುತ್ತಾರೆಂದುಕೊಂಡಿದ್ವಿ, ಹಾಗಾಗಿ

ಡಿಕೆಶಿಯವರು ಇನ್ನುಳಿದ ಎರಡೂವರೆ ವರ್ಷ ಸಿಎಂ ಆಗಬೇಕೆನ್ನುವ ಅಭಿಲಾಷೆ ನಮಗೂ ಇದೆ.

ಎರಡೂವರೆ ವರ್ಷ ಆದಮೇಲೆ ಅಧಿಕಾರ ಹಂಚಿಕೆ ವಿಚಾರ ಕುರಿತು ಜನರು ಸಹ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ.ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ,ಅಭಿವೃದ್ಧಿ ಮಾರಕವಾಗುತ್ತದೆ ಹೀಗಾಗಿ ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಹೈಕಮಾಂಡ್ ಸಮಸ್ಯೆ ಬಗೆಹರಿಸಲಿ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದರು.

Author