ಶಿವಮೊಗ್ಗ,ಶ್ರೀ ಯುತ ಸನ್ಮಾನ್ಯ KSRTC DC ಯಾದ ನವೀನ್ ಅವರೇ ನೀವು ಮಾಧ್ಯಮದ ಪ್ರತಿನಿಧಿಯೊಂದಿಗೆ ಮಾತನಾಡಿದ ರೀತಿಯ ಕುರಿತು ನಿಮಗೆ ನಮ್ಮ ಮಾಧ್ಯಮ ಮುಖೇಣ ತಿಳಿಸುವ ವಿಚಾರವೇನೆಂದರೆ ತಾವು ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸರಿ ಅಷ್ಟೇ. ಹಾಗಾಗಿ ತಮ್ಮ ಅಧಿಕಾರಾದ ಹಪಾಹಪಿ ವ್ಯಾಪ್ತಿಯಲ್ಲಿ ನಗರ ಹಾಗೂ ಜಿಲ್ಲೆಯಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಮಸ್ಯೆಗಳ ಕುರಿತು ಮಾಧ್ಯಮವಾಗಿ ನಮ್ಮ ಕರ್ತವ್ಯ ನಿಮಗೆ ತಿಳಿಸುವುದು ಆಗಿರತ್ತೆ ಅದಕ್ಕೆ ತಾವು ಸ್ಪಂದಿಸುವುದುನ್ನ ನಾವು ಗೌರವ ಪೂರ್ಣವಾಗಿ ಸ್ವೀಕರಿಸುತ್ತೇವೆ ಹಾಗಂತ ತಾವು ಹೇಗೇಗೋ ಮಾತನಾಡುವುದನ್ನ ಕೂಡ ನಾವು ಸಾರ್ವಜನಿಕರಿಗೆ ತಿಳಿಸಬೇಕಾಗುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಆಗಿರುತ್ತೆ.
ಹಾಗಾಗಿ ಈ ಮೂಲಕ ತಮ್ಮ ಮಾಹಿತಿಗಾಗಿ ನಾವು ನಿಮ್ಮನ್ನ ಸಂಪರ್ಕಿಸಿ ಮಾಹಿತಿ ಕೇಳಿದಾಗ ತಾವು ದರ್ಪದಿಂದ ವರ್ತಿಸಿರುತ್ತೀರ! ನಗರದಲ್ಲಿ ಆಗುತ್ತಿರುವ ಸಮಸ್ಯೆ ಹಾಗೂ ತಮ್ಮ ಇಲಾಖೆಯ ಸಿಬ್ಬಂದಿ ಸಾಗರದಲ್ಲಿ ಆತ್ಮಹತ್ಯೆ ವಿಚಾರ ಕೇಳಿದಾಗಲು ಸಹ ತಮ್ಮಿಂದ ನಿರೀಕ್ಷಿತ ಸ್ಪಂದನೆ ದೊರಕಿರುವುದಿಲ್ಲ ಮತ್ತು ನಗರದಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಇಲ್ಲದಂತೆ ನಗರದೊಳಗೆ ಬೇರೆ ಜಿಲ್ಲೆಗೆ ತೆರಳುವ ಬಸ್ ಗಳು ತಡೆಗಟ್ಟುವಲ್ಲಿ ವಿಫಲರಾಗಿದ್ದಿರೋ, ಇಲಾಖೆಯಲ್ಲಿ ನಿಮಗೆ ಹಿಡಿತ ವಿಲ್ಲವೋ ನಮಗೆ ತಿಳಿಯದ ವಿಷಯವಾಗಿದೆ ಅಥವಾ ತಮಗೆ ತಾವು ಶಿವಮೊಗ್ಗ ಜಿಲ್ಲಾಧಿಕಾರಿ ಅವರಿಗಿಂತ ದೊಡ್ಡವರಂತೆ ವರ್ತಿಸುತ್ತಿದ್ದೀರೊ ಗೊತ್ತಿಲ್ಲ ಎಲ್ಲದು ಅತಿರೇಕದ ವಿಚಾರವಾಗಿ ಸಾರ್ವಜನಿಕರಲ್ಲಿ ಕಾಡುತ್ತಿದೆ.
ನಗರದಲ್ಲಿ ಶೀಘ್ರದಲ್ಲಿ KSRTC ಬಸ್ ಸ್ಟಾಂಡ್ ಮುಖ್ಯ ನಿಲ್ದಾಣದಲ್ಲಿ ಚಾಲನೆಗೆ ಬರಲಿರುವ ಪ್ರಿಪೇಯ್ಡ್ ಆಟೋ ಸಂಬಂಧ ಟ್ರಾಫಿಕ್ ಪೊಲೀಸ್ ಇಲಾಖೆಗೆ ತಮ್ಮಿಂದ ಸಹಕಾರ ಸಿಗುತ್ತಿಲ್ಲವೆಂಬ ಮಾಹಿತಿ ತಿಳಿಸಿದಾಗಲು ಸಹ ತಾವುಗಳು ನಮ್ಮ ಮಾಧ್ಯಮಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಮುಖ್ಯವಲ್ಲ ನಾನು ಆಡಿಷನಲ್ ಎಸ್ಪಿ ಬಳಿ ಮಾತಾಡಿಕೊಳ್ಳುತ್ತೇನೆ ನಮ್ಮ ಅಪ್ಡೇಟ್ ಏನಿದ್ದರೂ ಆಡಿಷನಲ್ ಎಸ್ಪಿ ಅವರೊಂದಿಗೆ ಎಂದು ತಿಳಿಸುವ ಮೂಲಕ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ಹುದ್ದೆಗೆ ಅವಮಾನ ಮಾಡುವಂತೆ ಪ್ರತಿಕ್ರಿಯೆ ನೀಡಿರುತ್ತೀರ!
ಈ ರೀತಿಯಲ್ಲಿ ತಾವು ತಮ್ಮ ದರ್ಪ ತೋರಿಸುವ ಮೂಲಕ ತಾವು ಸರ್ಕಾರಿ ಅಧಿಕಾರಿಯಾಗಿ ಮುಂದುವರೆಯುತ್ತಿರುವುದು ನೋಡಿದರೆ ತಾವು ಒಬ್ಬ ಸರ್ಕಾರಿ ಅಧಿಕಾರಿ ಎಂಬುದನ್ನೇ ಮರೆತಿದ್ದೀರಾ? ಹಾಗೂ ಯಾರು ಕೂಡ ನಿಮ್ಮನ್ನ ಪ್ರಶ್ನೆ ಮಾಡಬಾರದು ತಾವೊಬ್ಬ ಪ್ರಶ್ನಿತೀತ ಅಧಿಕಾರಿಯಂತೆ ವರ್ತಿಸುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ, ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರ ಬಳಿ ನಾನೆ ಮಾತಾಡಿಕೊಳ್ಳುತ್ತೇನೆ, ನನಗೆ ಆಡಿಷನಲ್ ಎಸ್ಪಿ ಸಹಕಾರವಿದೆ ಎಂಬಂತ ನಿಮ್ಮ ಮಾತುಗಳು ಅತಿರೇಕದ ವರ್ತನೆವೆಂಬಂತೆ ಅನಿಸುತ್ತೆ. ಬೇರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ, ಸಹಕಾರ ನೀಡುವ ಮೂಲಕ ನಗರದಲ್ಲಿ ಇರುವ ಸಮಸ್ಯೆ ಬಗೆಹರಿಸಿ ಕೊಡುವ ಮೂಲಕ ಪರಿಹಾರ ಒದಗಿಸುವುದು ನಿಮ್ಮಂತ ಅಧಿಕಾರಿಗಳ ಕರ್ತವ್ಯವಾಗಿದೆ.
ಹಾಗಾಗಿ ಈ ಮೂಲಕ ನಮ್ಮ ಮಾಧ್ಯಮ ಮುಖೇಣ ಸಾರಿಗೆ ಸಚಿವರು ಹಾಗೂ ಸಾರಿಗೆ ಇಲಾಖೆಯಲ್ಲಿ ಒಂದು ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸುವ ಮೂಲಕ ಸಾರಿಗೆ ಸಚಿವರಾಗಿ ಹಾಗೂ ಶಕ್ತಿ ಯೋಜನೆಗೆ ಶಕ್ತಿ ತುಂಬುತ್ತಿರುವ ಹಲವಾರು ಪ್ರಶಸ್ತಿಗಳನ್ನು KSRTC ಇಲಾಖೆಗೆ ಪಡೆಯುವಲ್ಲಿ ಯಶಸ್ವಿಯಾಗಿ ಮಾಡಿರುವಂತ ಪ್ರಾಮಾಣಿಕ ಸಚಿವರಾಗಿರುವ ರಾಮಲಿಂಗ ರೆಡ್ಡಿ ಯವರೇ ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಇಂತಃ ಹುಳುಕು ಹಾಗೂ ದರ್ಪದ KSRTC ಡಿಸಿ ನವೀನ್ ಅಂತಃ ವರ ಕ್ರಮ ಜರುಗಿಸುವ ಮೂಲಕ ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕಾಪಾಡಿಕೊಳ್ಳಬೇಕಾಗಿದೆ.
ಕೊನೆಯದಾಗಿ KSRTC ಡಿಸಿ ನವೀನ್ ಅವರೇ ನೀವು ಎಷ್ಟೇ ಪ್ರಭಾವಿಯಾಗಿದ್ದರು ಸಹ ತಾವು ಒಬ್ಬ ಸರ್ಕಾರಿ ಅಧಿಕಾರಿ ಹಾಗಾಗಿ ನಿಮ್ಮ ವ್ಯಾಪ್ತಿಯ ಕರ್ತವ್ಯ ನಿರ್ವಹಿಸುವ ಮೂಲಕ ಜನಸಾಮಾನ್ಯರ ಮನಸನ್ನ ಗೆಲ್ಲಿ ನೀವು ಶಿವಮೊಗ್ಗದಲ್ಲಿ ಸೇವೆ ಮಾಡಿದಷ್ಟು ದಿನ ಪ್ರಜ್ಞಾವಂತ ಜನರು ಒಬ್ಬ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿ ನವೀನ್ ಎಂಬುವವರು ಇದ್ದರು ಎಂಬ ನೆನಪಿಸುವಂತೆ ನಿಮ್ಮ ಕರ್ತವ್ಯ ನಿರ್ವಹಿಸಿ.
ಮಾಧ್ಯಮದವರ ಮೇಲೆ ನಿಮ್ಮ ದರ್ಪ ತೋರಿಸಿದ್ದಲ್ಲಿ ನಾವು ಬಗ್ಗಲ್ಲ, ಜಗ್ಗಲ್ಲ ಹಾಗೂ ನಿಮ್ಮ ಪರಿಮಿತಿಯಲ್ಲಿರುವ ಅಧಿಕಾರವನ್ನು ಬಳಸುವ ಮೂಲಕ ನಿಮ್ಮ ಅಮೂಲ್ಯ ಸೇವೆಯನ್ನ ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಒಳ್ಳೆಯ ಅಧಿಕಾರಿಯೊಬ್ಬರು ಸಹಕಾರ ಮಾಡಿಕೊಟ್ಟರು ಎಂಬಂತೆ ಗುರುತಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂಬುದು ನಮ್ಮ ಮಾಧ್ಯಮ ಮುಖೇಣ ಬಯಸುವುದಾಗಿದೆ.
ಇನ್ನು ಮುಂದುಕ್ಕಾದರೂ ಒಳ್ಳೆಯ ರೀತಿಯ ಕೆಲಸ ಮಾಡಲು ಸಾಧ್ಯವಾದರೆ ಮಾಡಿ ಇಲ್ಲವಾದರೆ ದಯವಿಟ್ಟು ತೊಂದರೆ ಉಂಟಾಗುವಂತೆ ಮಾಡಬೇಡಿ ಎಂಬುದು ನಾಗರಿಕರ ಪರವಾಗಿ ನಮ್ಮ ಆಶಯ



