ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಸಂತಸದ ಕ್ಷಣಗಳನ್ನು ನೊಂದವರು ಸಂತ್ರಸ್ತರೊಡನೆ ಆಚರಿಸಿಕೊಳ್ಳುವುದರಿಂದ ಸಂತೋಷದ ಕ್ಷಣಗಳು ಅರ್ಥಪೂರ್ಣವಾಗಿರುತ್ತವೆ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ವಸತಿಯುತ ಶಾಲೆಯಲ್ಲಿ ಆಯೋಜಿಸಿದ್ದ ಹೊಸ ವರ್ಷಾಚರಣೆ ಹಾಗೂ ಬೆಳಗಾವಿಯ ಎಕ್ಸಂಬದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಗಳಿಸಿದ ಮಕ್ಕಳ ಅಭಿನಂದನಾ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದರು.
ಸಮಾಜದಲ್ಲಿ ಭಿನ್ನತೆಯಿಂದ ಕೂಡಿರುವ ಮಕ್ಕಳು ಸಂಸ್ಥೆಯ ಹಾಗೂ ಶಿಕ್ಷಕರ ತರಬೇತಿಯಿಂದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತರುವಲ್ಲಿ ಸಂಸ್ಥೆಯ ಹಾಗೂ ಶಾಲಾ ಶಿಕ್ಷಕರ ಪರಿಶ್ರಮ ಅಪರಿಮಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಸಮಾಜದಲ್ಲಿ ಯಾರು ಶ್ರೇಷ್ಠರು ಮತ್ತು ನಿಕೃಷ್ಟರು ಇರುವುದಿಲ್ಲ ಶಿಕ್ಷಣ ತರಬೇತಿ ಪ್ರೀತಿ ವಾತ್ಸಲ್ಯ ದೊರಕಿದ್ದಲ್ಲಿ ಉತ್ತಮ ಸಾಧಕರು ಉದಯಿಸುತ್ತಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಿ ಬಿ ರಾಮಪ್ಪ ಮಾತನಾಡಿ ಶಿಕ್ಷಕರು ಮತ್ತು ಪೋಷಕರ ಬೆಂಬಲ ಹಾಗೂ ಮಕ್ಕಳ ಪರಿಶ್ರಮದಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತಾಗಿದೆ ಎಂದರು.
ಮಕ್ಕಳಿಂದ ಕೇಕ್ ಕತ್ತರಿಸಿ ಹೊಸ ವರ್ಷಾಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿಬಿ ರಾಮಪ್ಪ, ಅತಿಥಿಗಳಾಗಿ ಪತ್ರಕರ್ತರಾದ ಎಚ್ ಕೆ ಬಿ ಸ್ವಾಮಿ,ನೋಪಿ ಶಂಕರ ಎಂ,ಎಲ್ ಕುಂದಗಸವಿಮುಖ್ಯ ಶಿಕ್ಷಕ ಎಸ್ ರವೀಂದ್ರ, ರಾಜಪ್ರಶಸ್ತಿ ವಿಜೇತ ಶಿಕ್ಷಕ ಪುಟ್ಟರಾಜು, ಶಿಕ್ಷಕಿಯರಾದ ಗಾಯಿತ್ರಿ ನಾಯ್ಕ್, ಮಂಗಳ ಪೂಜಾರ್, ಸುಮಂಗಲ, ಪಲ್ಲವಿ ಹಾಗೂ ಉಮೇಶ್, ಚಂದ್ರಪ್ಪ ಸೇರಿದಂತೆ ಮೊದಲಾದವರಿದ್ದರು.



