ಶಿವಮೊಗ್ಗ | ಆಟೋ ಚಾಲಕನ ಮೇಲೆ ಪುಡಿ ರೌಡಿ ಹಲ್ಲೆ

ಶಿವಮೊಗ್ಗ

ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಆಟೋ ಚಾಲಕ ಕಿರಣ್ (34) ಎಂಬುವವರ ಮೇಲೆ ಪುಡಿ ರೌಡಿ ಯಿಂದ ಹಲ್ಲೆ ರೌಡಿ ಶೀಟರ್ ಸೀಗೆಹಟ್ಟಿ ಬಾಬು ಎಂಬಾತನಿಂದ ಕಿರಣ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ರೌಡಿಶೀಟರ್ ಬಾಬು ಎಂಬಾತನು ಈ ಮೊದಲು ಕಿರಣ್ ನಿಂದ 3 ಲಕ್ಷ ರೂ ಸಾಲ ಪಡೆದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಿರಣ್ ಪಡೆದ ಸಾಲ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಸಿಟ್ಟಿಗೆದ್ದ ಬಾಬು ಆಟೋ ಚಾಲಕ ಕಿರಣ್ ಮುಖ ಮುಸುಡಿ ಮೇಲೆಲ್ಲಾ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿಯಾಗಿದೆ.

ಆಟೋ ಚಾಲಕ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕಿರಣ್ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾನೆ ಎಂದು ತಿಳಿದುಬಂದಿದೆ.

ಆಟೋ ಚಾಲಕ ಕಿರಣ್ ಮೇಲೆ ಹಲ್ಲೆಯಾಗಿದ್ದರೂ ದೊಡ್ಡಪೇಟೆ ಪೊಲೀಸರಿಂದ ಪುಡಿ ರೌಡಿ ಬಾಬು ಮೇಲೆ ಇಲ್ಲಿಯವರೆಗೆ ಯಾವದೇ ಕ್ರಮವಾಗಿಲ್ಲ ಎಂಬ ಮಾಹಿತಿಯಾಗಿದೆ .

ಈ ಹಿಂದೆ 2004ರಲ್ಲಿ ಸೀಗೆಹಟ್ಟಿಯಲ್ಲಿ ನಡೆದ ರಮ್ಮಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಬಾಬು ಬಿಡುಗಡೆಯಾಗಿದ್ದ ಎನ್ನಲಾಗಿದೆ.

ಇದಾದ ಬಳಿಕ ತನ್ನ ಹವಾ ಮೇಂಟೈನ್ ಮಾಡಲು ಸೀಗೆಹಟ್ಟಿ ಭಾಗದಲ್ಲಿ ಗಲಾಟೆಯಲ್ಲಿ ಮುಳುಗಿರುತ್ತಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಸೀಗೆಹಟ್ಟಿ ಭಾಗದಲ್ಲಿ ಇಂತಹ ಪುಡಿ ರೌಡಿಗಳ ಹಾವಳಿಯಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುತ್ತಿದೆ ಎಂಬುದಾಗಿದೆ.

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರವಿ ಪಾಟೀಲ್ ಹಾಗೂ ಸಬ್ಇನ್ಸ್ಪೆಕ್ಟರ್ ನಾರಾಯಣ ಮಧುಗಿರಿಯಂತಹ ಪ್ರಾಮಾಣಿಕ ದಕ್ಷ ಅಧಿಕಾರಿಗಳು ಇಂತಃ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪುಡಿ ರೌಡಿಗಳ ಹೆಡೆಮುರಿ ಕಟ್ಟುವ ಮೂಲಕ ನಗರದಲ್ಲಿ ಶಾಂತಿ ಸುವ್ಯವಸ್ತೇ ಕಾಪಾಡಬೇಕಿದೆ.

Author