ಶಿವಮೊಗ್ಗ, ಮೈಸೂರುನಲ್ಲಿ ಪ್ರಸಿದ್ಧವಾಗಿ ಹೆಸರು ಮಾಡಿರುವ ಮಹಾಲಕ್ಷ್ಮಿ ಸ್ವೀಟ್ಸ್ ರಾಜ್ಯದ್ಯಾಂತ ಉತ್ತಮ ಹೆಸರುಗಳಿಸಿದ್ದಾರೆ ಆದರೆ ಶಿವಮೊಗ್ಗದಲ್ಲಿ ತಮ್ಮ ಶಾಖೆ ಕೇಂದ್ರ ತೆರೆದಿರುವ ಸಮಯದಲ್ಲಿ ಸಮಸ್ಯೆ ಮಾಡಿಕೊಂಡರಾ ಎಂಬ ಪ್ರಶ್ನೆ ಎದ್ದಿದೆ?!
ಮಹಾಲಕ್ಷ್ಮಿ ಸ್ವೀಟ್ಸ್ ಅಂಗಡಿ ತೆರೆಯುವ ಮುನ್ನ ತಮ್ಮ ಕಂಪನಿಯ ಸಿಬ್ಬಂದಿಗಳಿಂದ ನಗರದಲ್ಲಿ ಪ್ರಸಿದ್ಧ ಪತ್ರಿಕೆಗಳು ಯಾವುದೆಂದು ಸಮೀಕ್ಷೆ ಮಾಡಿ ಎಂದು ಕಳಿಸಿದ್ದರಂತೆ ಅದರಂತೆ ಸಿಬ್ಬಂದಿಗಳು ನಗರದಲ್ಲಿ ಸಂಜೆ ಪತ್ರಿಕೆಗಳಿವೆ ಅವುಗಳು ಸಹ ಕೇವಲ 4 ಪ್ರಸಿದ್ಧ ಎಂದು ತಿಳಿಸಿದ್ದಾರಂತೆ ಅದರಂತೆ ನಂಬಿದ ಕಂಪನಿ ಅವರು ಕೇವಲ 4 ಪತ್ರಿಕೆ ಜಾಹಿರಾತು ನೀಡಿದರೆ ಖರ್ಚು ವೆಚ್ಚ ಮುಗಿಯಲಿದೆ ಎಂದು ಭಾವಿಸಿದ್ದರಂತೆ!
ಆದರೆ ವಾಸ್ತವದಲ್ಲಿ ಅಂಗಡಿ ತೆರೆಯುವ ಮುನ್ನ ಒಬ್ಬ ಪತ್ರಕರ್ತರು ಪರಿಚಯವಾಗಿ ಇಲ್ಲಿ ನಮ್ಮ ಪ್ರೆಸ್ ಅಸೋಸಿಯೇಷನ್ ಇದೆ ಇಲ್ಲಿ ಬಂದು ಮಾತನಾಡಿ ಎಂದರಂತೆ ಅದರಂತೆ ಮಹಾಲಕ್ಷ್ಮಿ ಸ್ವೀಟ್ಸ್ ಅವರು ಬಂದಾಗ ಪ್ರೆಸ್ ಅಸೋಸಿಯೇಷನ್ ಅವರು ಪ್ರತಿಯೊಬ್ಬರಿಗೂ ಜಾಹೀರಾತು ನೀಡಬೇಕು ಪ್ರತಿ ಜಾಹಿರಾತಿಗೆ 20,000₹ ಬೇಡಿಕೆ ಇಟ್ಟರಂತೆ ಕೊನೆಗೆ ಇದು 8,000₹ ಕೊಟ್ಟರೆ ಸಾಕು ಜಾಹಿರಾತು ಎಂಬ ಫೈನಲ್ ಮಾತು ಆಗಿದೆ ಅಂತೆ ಆದರೆ ವಾಸ್ತವದಲ್ಲಿ ಮಹಾಲಕ್ಷ್ಮಿ ಸ್ವೀಟ್ಸ್ ಅವರಿಗೆ ಶಿವಮೊಗ್ಗ ನಗರದಲ್ಲಿ ಎಷ್ಟು ಪತ್ರಕರ್ತರಿದ್ದಾರೆ ಯಾವುದೇ ಮಾಹಿತಿ ಇಲ್ಲದಾಗಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ಅಸೋಸಿಯೇಷನ್ ಮೂಲಕ ಸ್ವೀಟ್ಸ್ ಬಾಕ್ಸ್ ಹಾಗೂ ಜಾಹಿರಾತು ನೀಡುತ್ತೇವೆ ನಾವು ಎಲ್ಲವನ್ನು ಸಹಕಾರ ಮಾಡುತ್ತೇವೆ ಎಂದರಂತೆ ಅದರಂತೆ ಮಹಾಲಕ್ಷ್ಮಿ ಸ್ವೀಟ್ಸ್ ನ ಜಾಹಿರಾತು ಹಾಗೂ ಮಾರ್ಕೆಟಿಂಗ್ ವಿಭಾಗದವರು ಅದರಂತೆ ಒಪ್ಪಿದ್ದಾರೆ ಹಾಗೂ ತಲುಪಿಸಿದ್ದಾರಂತೆ ಈಗ ವಾಸ್ತವದಲ್ಲಿ ಅವರಿಗೆ ನಗರದ ಪರಿಚಯ ಆಗುತ್ತಿದೆ ವಾಸ್ತವ ವಿಚಾರಗಳು ಅರಿವಾಗುತ್ತಿದೆ.
ಈಗ ದಿಗ್ಬ್ರಮೆಗೆ ಒಳಗಾಗಿದ್ದಾರೆ, ಏನು ಮಾಡಬೇಕು ಎಂದು ತೋಚದ ಪರಿಸ್ಥಿತಿಯಲ್ಲಿದ್ದಾರೆ.ಯಾರಿಗೆ ತೃಪ್ತಿ ಪಡಿಸಬೇಕು ಯಾರಿಗೆ ಜಾಹಿರಾತು ನೀಡಬೇಕು. ಪತ್ರಿಕಾ ಮಾಧ್ಯಮದವರಿಗೆ ಎಂದು ಕೊಟ್ಟ ಸ್ವೀಟ್ ಬಾಕ್ಸ್ ಗಳು ಯಾಕೆ ಯಾರಿಗೂ ಸರಿಯಾಗಿ ತಲುಪಿಲ್ಲ ಇದರಿಂದ ಮುಂಬರುವ ದಿನಗಳಲ್ಲಿ ಏನೆಲ್ಲಾ ಹಾನಿಯಾಗಲಿದೆ ಎಂಬ ಆತಂಕದಲ್ಲಿದ್ದಾರೆ.
ನಾವು ನಮ್ಮ ಮಾಧ್ಯಮಕ್ಕೆ ಜಾಹಿರಾತು ಕೇಳಲು ತೆರಳಿದ ಸಂದರ್ಭದಲ್ಲಿ ನಮ್ಮೊಂದಿಗೆ ಮಾತನಾಡಿದ ಮಾರ್ಕೆಟಿಂಗ್ ಅಧಿಕಾರಿಯಾದ, ವಿಜಯ್ ಎಂಬುವವರು ಒಂದು ಪ್ರೆಸ್ ID ಕಾರ್ಡ್ ಅನ್ನು ತೋರಿಸಿದರು, ನಾನು ಕೂಡ ಪತ್ರಕರ್ತ ಎಂಬ ರೀತಿಯಲ್ಲಿ ನಮ್ಮ ಮಾಧ್ಯಮಕ್ಕೆ ನೀವು ಪತ್ರಕರ್ತರಾದರೆ ನಾವು ಪತ್ರಕರ್ತ ಎಂಬ ರೀತಿಯಲ್ಲಿ ID ತೋರಿಸಿದರು ಅದು ಬೇರೆ ವಿಷಯ ಆದರೆ ಮತ್ತೊಬ್ಬ ಮಾರ್ಕೆಟಿಂಗ್ ಅಧಿಕಾರಿ ಮಾತನಾಡಿ ಶಿವಮೊಗ್ಗ ಪೊಲೀಸ್ ಇಲಾಖೆ ಎಸ್ಪಿ ಕಚೇರಿಗೆ 10 ಬಾಕ್ಸ್ ಸ್ವೀಟ್ ಕಳಿಸಿದ್ದೇವೆ, ಹಾಗೂ ನಮ್ಮ ಅಂಗಡಿ ಮುಂಭಾಗವಿರುವ ಜೆಡಿಎಸ್ ಕಚೇರಿಗೆ ಬಾಕ್ಸ್ ಗಟ್ಲೆ ಸ್ವೀಟ್ ಕಳಿಸಿದ್ದೇವೆ ಇನ್ನು ಮುಂತಾದವರು ಕರೆ ಮಾಡಿ ನಾವು ಅವರ ಕಡೆ ಇವರ ಕಡೆ ಅಂತ ಸ್ವೀಟ್ಸ್ ಕೇಳುತ್ತಾರೆ ಹಾಗೂ ಅಂಗಡಿಗೆ ಬಂದಂತ ಗ್ರಾಹಕರಿಗೆ ಕೂಡ ರಿಯಾಯಿತಿ ದರದಲ್ಲಿ ಸ್ವೀಟ್ಸ್ ನೀಡಿದ್ದೇವೆ ನಾವು ವ್ಯಾಪಾರ ಮಾಡಬೇಕಾ ಅಥವಾ ಜಾಹಿರಾತು ಕೊಡಬೇಕಾ ಅಥವಾ ಉಚಿತ ಸ್ವೀಟ್ಸ್ ಕೊಡಬೇಕಾ ನಮ್ಮ ಮೇಲಿನ ಅಧಿಕಾರಿಗಳಿಗೆ ಏನು ಉತ್ತರ ನೀಡಬೇಕು ಜೊತೆಗೆ ನಾವು ಬಹಳಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ ಅದನ್ನ ಪ್ರಚಾರ ಮಾಡಲು ಬಯಸುವುದಿಲ್ಲ.
ನಾವು ಈಗ ಅಸಹಾಯಕ ಪರಿಸ್ಥಿತಿಗೆ ಬಂದಿದ್ದೇವೆ ಎಲ್ಲರನ್ನು ಸಂತೃಪ್ತಿಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಸುಮ್ಮನಾಗಿದ್ದೇವೆ ಎಂದು ತಿಳಿಸಿದ್ದಾರೆ. ಕೆಲವರು ಮಾಡುವ ಯಡವಟ್ಟಿನಿಂದ ಮಹಾಲಕ್ಷ್ಮಿ ಸ್ವೀಟ್ಸ್ ನವರು ತಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸುವಂಥಾಗಿದೆ ಇದು ಸರಿಯೇ..?



