ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕ್ ಹರಿಗಿ ಗ್ರಾಮದಲ್ಲಿ ದಸರಾ ಪ್ರಯುಕ್ತ 9 ದಿನಗಳ ಕಾಲ ಈ ಶುಭ ನವರಾತ್ರಿಯಲ್ಲಿ ದೇವಿಯ ಪೂಜೆಯನ್ನು ಆರಾಧಿಸುವ ಮೂಲಕ,
ಇಂದು ಹರಗಿ ಭಜನೆ ಮಂಡಳಿ ಹಾಗೂ ಶ್ರೀ ಶ್ರೀ ಅವಧೂತ ಕಲ್ಲೇಶ್ವರ ಸ್ವಾಮೀಜಿಗಳ ಪರಮ ಶಿಷ್ಯರಾದ ಕೊಡಕಣಿ ಶರಣಪ್ಪಜ್ಜಾರ್ ಅವರ ನೇತೃತ್ವದಲ್ಲಿ

ಮತ್ತು ಶ್ರೀ ಶ್ರೀ ಗಣಪತಾನಂದ ಸ್ವಾಮೀಜಿಗಳ ಮಗನಾದ ಪುಂಡಲೀಕ ರವರ ನೇತೃತ್ವದಲ್ಲಿ,
ಈ ದಿನ ದೇವಿಯನ್ನು ಊರ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ದೇವಿಯ ವಿಜೃಂಭಣೆ ದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಭಕ್ತಾದಿಗಳು ದರ್ಶನ ಪಡೆದು ಪುನೀತರಾದರು.
