ತೀರ್ಥಹಳ್ಳಿ, ಬಹಳಷ್ಟು ಯುವಕರಲ್ಲಿಂದು ವಿಕೃತ ಮನಸ್ಥಿತಿ ವಿಜ್ರಂಭಿಸುತ್ತಿದೆ ಆದರೆ ಸಾಹಿತ್ಯ, ಸಂಸ್ಕೃತಿ, ದೇಶಭಕ್ತಿಯ ಮನೋಭಾವನೆಯನ್ನು ಇಂದಿನ ಯುವ ಪೀಳಿಗೆ ಹೆಚ್ಚು ಬೆಳೆಸಿಕೊಳ್ಳಬೇಕಾಗಿದೆ ಎಂದು ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಬಾಳೆಬಯಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮೇಶ್ವರ ದಸರಾ ಉತ್ಸವ, ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ ಕುಪ್ಪಳಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತಾಶ್ರಯದ ಅಂತರ ಜಿಲ್ಲಾ ದಸರಾ ಕವಿಗೋಷ್ಠಿ ೨೦೨೬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ನೆಡೆಯುತ್ತಿದೆ ಆದರೆ ಈ ಬಾರಿಯ ಕವಿಗೋಷ್ಟಿಯ ಎಲ್ಲಾಕವನಗಳನ್ನು ಪುಸ್ತಕ ರೂಪದಲ್ಲಿ ಕವನ ಸಂಕಲನ ವಾಗಿ ರೂಪಿಸುತ್ತಿದ್ದು,ದಸರಾ ಕಾರ್ಯಕ್ರಮದ ಕೊನೆಯ ದಿನವಾದ ಅಕ್ಟೋಬರ್ ೨೧ರಂದು ಪಟ್ಟಣದ ಕುಶಾವತಿಯ ದಸರಾ ವೇದಿಕೆಯಲ್ಲಿ ಬಿಡುಗಡೆಗೊಳಿಸಲಿದ್ದೇವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕೆ.ಸಿ.ಸೌಮ್ಯ ಮಾತನಾಡಿದರು.ವೇದಿಕೆಯಲ್ಲಿ ಕವಿಗೋಷ್ಠಿಯ ಅಧ್ಯಕ್ಷ ಶಿಕ್ಷಕ ಅಣ್ಣಪ್ಪ ಅರಬಗಟ್ಟೆ, ದಸರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಪ.ಪಂ.ಅಧ್ಯಕ್ಷ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗಡೆ, ಕಾಲೇಜಿನ ಸಂಚಾಲಕ ಗಣಪತಿ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ನಿರೂಪಿಸಿ, ಚೇತನ್ ನಿರೂಪಿಸಿದರು. ಕವಿಗೋಷ್ಢಿಯಲ್ಲಿ ೬೦ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಶಿಕ್ಷಕಿ ಲತಾ ರಾಜ್ಕುಮಾರ್ ಗೋಷ್ಠಿ ನಿರ್ವಹಿಸಿದರು.
