ಶಿವಮೊಗ್ಗz ಸಾಧು ಸಂತರ, ಮಠಾಧೀಶರಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವೀರಶೈವ ಲಿಂಗಾಯತ ಸಮಾಜ ಶಿವಮೊಗ್ಗ ಜಿಲ್ಲಾ ಒಕ್ಕೂಟ ಕ್ಷಮೆಯಾಚಿಸಲು ಆಗ್ರಹಿಸಿದೆ.
ಸೆಪ್ಟೆಂಬರ್ 27, 2026 ರಂದು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ತಮ್ಮ ಭಾಷಣದ ಸಂದರ್ಭದಲ್ಲಿ ಆಡಿರುವ ಕೆಲವು ಮಾತಗಳ ಬಗ್ಗೆ ಭಕ್ತರಲ್ಲಿ ಅಸಮಾಧಾನ ಮೂಡಿದೆ. ಈ ಭಾಷಣ ವಾಟ್ಸಪ್ ಸೇರಿದಂತೆ ಎಲ್ಲಾ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಭಾಷಣದ ಭರದಲ್ಲಿ ಮುಖ್ಯಮಂತ್ರಿಗಳು ಆಡಿರುವ ಮಾತುಗಳು ಭಕ್ತರ ಭಾವನೆಗೆ ನೋವನ್ನು ಉಂಟುಮಾಡಿದೆ. ಅದಕ್ಕಾಗಿ ಎಲ್ಲಾ ಸ್ವಾಮೀಜಿಗಳಲ್ಲಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಮಾನಕ್ಕೆ ತಕ್ಕುದಲ್ಲದ ಆ ಮಾತುಗಳಿಗೆ ಎಲ್ಲ ಗುರುಗಳಲ್ಲಿ ಕ್ಷಮೆ ಕೇಳಬೇಕು ಎಂದು ಸಮಾಜ ಒತ್ತಾಯಿಸಿದೆ. ಶತಮಾನಗಳಿಂದ ಜ್ಞಾನ, ಶಿಕ್ಷಣ, ದಾಸೋಹ, ಸಂಸ್ಕಾರ ಮತ್ತು ಸಮಾಜ ಸೇವೆಯ ಮೂಲಕ ಕೋಟ್ಯಂತರ ಜನರಿಗೆ ದಾರಿ ತೋರಿದ ಹರ-ಗುರು-ಚರ ಮೂರ್ತಿಗಳ ಕುರಿತು ಮಾತನಾಡುವಾಗ ರಾಜ್ಯದ ಮುಖ್ಯಮಂತ್ರಿಗಳ ಸ್ಥಾನದ ಘನತೆಯ ಜೊತೆಗೆ ಸ್ವಾಮೀಜಿಗಳ ಸ್ಥಾನಕ್ಕೆ ತಕ್ಕ ಗೌರವ ಮತ್ತು ಮಾತುಗಳಲ್ಲಿ ಸಂಯಮವನ್ನು ಕಾಯ್ದುಕೊಳ್ಳಬೇಕಿತ್ತು.
ಎಲ್ಲಾ ಮಠಾಧೀಶರ, ಹರ ಚರ ಮೂರ್ತಿಗಳ ಸ್ಥಾನಕ್ಕೆ ಧಕ್ಕೆ ತರುವ ಮಾತುಗಳು ವೀರಶೈವ-ಲಿಂಗಾಯತ ಸಮಾಜದ ಭಾವನೆಗಳಿಗೆ ನೋವುಂಟುಮಾಡಿವೆ ಎಂದರು.
“ನಮ್ಮ ಸಂಸ್ಕೃತಿಯಲ್ಲಿ ಗುರುಗಳಾಗಲಿ, ಮಠಾಧೀಶರಾಗಲಿ ಅಧಿಕಾರದ ಮುಂದೆ ತಲೆಬಾಗುವವರಲ್ಲ. ಅವರನ್ನು ನಿಮ್ಮ ರಾಯಭಾರಿಗಳೆನ್ನುವುದು, ನಮ್ಮ ಸೇವೆ ಮಾಡಬೇಕು, ಆಗ ಮಾತ್ರ ನಿಮ್ಮ ಅಭಿವೃದ್ಧಿ, ನಿಮ್ಮ ಮುಕ್ತಿ ಎನ್ನುವಂತಹ ಮಾತುಗಳು ಯಾವ ಸನ್ನಿವೇಶ, ಪ್ರಸಂಗದಲ್ಲೂ ಕೂಡ ಸರಿಯಾದ ಮಾತುಗಳಲ್ಲ. ಅದರಲ್ಲೂ ಸಂತರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ನಿಮ್ಮ ಮಾತುಗಳನ್ನು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ. ಎಂದರು.
