ಶಿವಮೊಗ್ಗ,ಚಿಕ್ಕ ವಯಸ್ಸಿನಲ್ಲೇ ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದ, ಬ್ರಿಟಿಷರ ಗುಲಾಮಗಿರಿಯಿಂದ ಭಾರತವನ್ನು ಮುಕ್ತಗೊಳಿಸಬೇಕೆಂದು ಜೀವನದ ಗುರಿಯಾಗಿಸಿಕೊಂಡಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 119 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ, ಭಗತ್ ಸಿಂಗ್ ಯುವಕರ ಬಳಗದ ಸದಸ್ಯರು, ಸಮಾಜ ಸೇವೆ ಮಾಡಿದ್ದಾರೆ.

ಡಾ. ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ವಿದ್ಯಾಲಯದಲ್ಲಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ವಿದ್ಯಾಲಯದ ಮಕ್ಕಳೊಂದಿಗೆ ಜನ್ಮ ದಿನಾಚರಣೆ ಆಚರಿಸಲಾಯಿತಲ್ಲದೇ, ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ, ಮಕ್ಕಳಿಗೆ ದಿನನಿತ್ಯ ಅಗತ್ಯ ಬಟ್ಟೆ, ಹಣ್ಣು, ಸಿಹಿ ಹಾಗೂ ಮಕ್ಕಳಿಗೆ ಅನುಕೂಲವಾಗುವ ವಸ್ತುಗಳನ್ನು ಸಹ ವಿತರಿಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷರಾದ ಆರ್.ಟಿ.ಆರ್. ಮಂಜುನಾಥ್. ಶಶಿಕುಮಾರ್, ರತ್ನ ಟ್ರೇಡರ್ಸ್ ನ ಮಂಜು. ರಘು. ವಿಜಯ್, ನವೀನ್, ರಾಜೇಶ್, ಅಜಿತ್, ಸಂಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


