ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಒಬ್ಬ ಹುಡುಗಿ ಒಬ್ಬಳೇ ಕುಳಿತಿದ್ದು, ಆಕೆಯನ್ನು ವಿಚಾರಿಸಿದಾಗ 19 ವರ್ಷದ ಹುಡುಗಿ, ಆಕೆಯ ವಾಸ ಅರಸೀಕೆರೆ, ಕಾರಣಾಂತರದಿಂದ ಶಿವಮೊಗ್ಗಕ್ಕೆ ಬಂದಿದ್ದಾಗ ತನ್ನ ಮೊಬೈಲ್ ಹಾಗೂ ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ಕಳೆದುಕೊಂಡಿದ್ದು, ಈ ವಿಚಾರ ತನ್ನ ತಂದೆ ತಾಯಿಗೆ ತಿಳಿಸಲು ಆಗದೆ ಹಾಗೆಯೇ ತನ್ನ ಊರಿಗೆ ವಾಪಾಸ್ ಹೋಗಲು ಸಾಧ್ಯವಾಗದೇ ಒಬ್ಬಳೆ ಇಲ್ಲಿ ಕುಳಿತಿರುತ್ತೇನೆ ಎಂದು ತಿಳಿಸಿರುತ್ತಾಳೆ.

ಹೆಣ್ಣು ಮಗಳು ಒಬ್ಬಳೆ ಇದ್ದ ಕಾರಣ, ಆಕೆಯ ತಾಯಿ ಫೋನ್ ನಂಬರ್ ಪಡೆದುಕೊಂಡು,ಅವರನ್ನು ಸಂಪರ್ಕಿಸಿ ಅವರಿಗೆ ಈ ವಿಚಾರವನ್ನು ತಿಳಿಸಿದ್ದು, ಅವರು ತಾವೇ ಬಂದು ಮಗಳನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದು, ನಂತರ ಬಾಲಕಿಯನ್ನು ಸುರಕ್ಷಿತವಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳೊಂದಿಗೆ ಇರಿಸಿದ್ದು,

ಆನಂತರ ಆ ಹಗುಡುಗಿಯ ತಾಯಿಯು ಬಂದು ತನ್ನ ಮಗಳನ್ನು ಕರೆದುಕೊಂಡು ಹೋಗಿರುತ್ತಾರೆ.





