ಶಿವಮೊಗ್ಗ,ಪರಿಸರ ಜಾಗೃತಿ ಮೂಡಿಸುವುದು ಹಾಗೂ ಸಮಾಜದೊಂದಿಗೆ ಸಂಪರ್ಕ ಸಾಧಿಸುವುದು ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುವುದು ಮತ್ತು ಸಾರ್ವಜನಿಕರನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಇಂದಿನಿಂದ ಸೆಪ್ಟೆಂಬರ್ 15ರವರೆಗೆ ಏಳು ದಿನಗಳ ಕಾಲ ಜೆಸಿಐ ಸಪ್ತಾಹ ಆಯೋಜಿಸಲಾಗಿದ್ದು,
ಜೆಸಿಐ ಶಿವಮೊಗ್ಗ ಕಾಮರ್ಸ್ ವತಿಯಿಂದ ರೈಲ್ವೆ ನಿಲ್ದಾಣದ ಮುಂಭಾಗ ಆಟೋ ಚಾಲಕರಿಗೆ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಾಟಲ್ ತ್ಯಜಿಸಿ ಸ್ಟೀಲ್ ಬಾಟಲ್ ಉಪಯೋಗಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ಟೀಲ್ ಬಾಟಲ್ ಗಳನ್ನು ವಿತರಿಸಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಮನವಿ ಮಾಡಿಕೊಳ್ಳಲಾಯಿತು ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಶಿಮೊಗ್ಗ ಕಾಮರ್ಸ್ ನ ಅಧ್ಯಕ್ಷರಾದ ಕಿರಣ್ ಕುಮಾರ್. ಪ್ರಾಜೆಕ್ಟ್ ಡೈರೆಕ್ಟರ್ ನಿವೇದಿತ ವಿಕಾಸ್ ಕಾರ್ಯದರ್ಶಿ ಸ್ವಪ್ನ ಅನುಷ್ ಗೌಡ. ಅನಿಲ್ ಸಿ ಪಾಟೀಲ್ ಹಾಗೂ ಜೆಸಿಐ ಪ್ರಮುಖರಾದ ಪ್ರಮೋದ್ ಉಡುಪ. ಗಗನ್. ಚೇತನ್ ಶಿಲ್ಪಾ. ಸುಧೀಂದ್ರ, ಸಂಜೀವ್ ನಾಡಿಗ್ ರುದ್ರೇಶ್ ಕೋರಿ. ಚೇತನ್ ಇನ್ನಿತರರು ಇದ್ದರು.





