ಸೊರಬ | ಕೃಷ್ಣನ ಬಾಲ್ಯದ ದಿನಗಳನ್ನು ಹಬ್ಬವನ್ನಾಗಿಸಿದ ಭವ್ಯ ಪರಂಪರೆ ನಮ್ಮದಾಗಿದೆ : ಶಂಕರ್ ಶೇಟ್

ಶಿವಮೊಗ್ಗ

ಸೊರಬ, ಮನುಕುಲಕ್ಕೆ ಭಗವದ್ಗೀತೆಯ ಜೀವನದ ಎಲ್ಲಾ ಸ್ಥರದ ನೋವು ನಲಿವುಗಳನ್ನು ಮನುಷ್ಯ ದಿಟ್ಟತನದಿಂದ ಎದುರಿಸುವ ಮನೋಬಲದ ಸಂದೇಶವನ್ನು ಸಾರಿದ ಕೃಷ್ಣನ ಬಾಲ್ಯದ ದಿನಗಳನ್ನು ಹಬ್ಬವನ್ನಾಗಿ ಭವ್ಯ ಪರಂಪರೆ ನಮ್ಮದಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಪಟ್ಟಣದ ಶ್ರೀರಂಗ ಕನ್ವೆನ್ಸನ್ ಹಾಲ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗುರುಕುಲ ಎಜುಕೇಷನ್‌ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ವಿಶಿಷ್ಟವಾದ ಮಹತ್ವವಿದೆ. ಹಿಂದೂ ಧರ್ಮ ಪರಂಪರೆಯಲ್ಲಿ ಕೃಷ್ಣ ಜನ್ಮಾಷ್ಟಮಿಯು ಒಂದಾಗಿದ್ದು, ಧರ್ಮ ರಕ್ಷಕ ಕೃಷ್ಣನ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಬದುಕು ಸುಂದರ ಹಾಗೂ ಸಾರ್ಥಕವಾಗುತ್ತದೆ.

ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಧರ್ಮ ರಕ್ಷಿಸುತ್ತದೆ. ಮಕ್ಕಳಿಗೆ ಆರಂಭದಲ್ಲೇ ಧಾರ್ಮಿಕ ಹಾಗೂ ಸಂಸ್ಕಾರಯುತ ಮೌಲ್ಯಗಳನ್ನು ಬೆಳೆಸಿದಾಗ ಮಗು ದೇಶದ ಸತ್ಪಜೆಯಾಗಿರೂಪುಗೊಳ್ಳಲು ಸಾಧ್ಯವಾಗುತ್ತದೆ ಶ್ರಾವಣ ಮಾಸವೆಂದರೆ ಅದೊಂದು ಹಬ್ಬಗಳ ಸಾಲು ಇದ್ದ ಹಾಗೆ ನಾಗರ ಪಂಚಮಿ, ರಕ್ಷಾ ಬಂಧನ, ವರ ಮಹಾಲಕ್ಷ್ಮಿ ಹಬ್ಬ ಸೇರಿದಂತೆ ಅನೇಕ ಹಬ್ಬ ಆಚರಣೆ ಈ ಮಾಸದಲ್ಲಿ ಬರುತ್ತವೆ ಅದರಲ್ಲಿ ಕೃಷ್ಣ ಜನ್ಮಾಷ್ಟಮಿಯು ಪ್ರಮುಖವಾಗಿದೆ ಎಂದರು.

ದೀಪಕ್ ಅಲೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ವಿದ್ಯಾ ಬಾವೆ, ಸಂಗೀತ ಪೈ, ಕಾವ್ಯ ವಿಜಯ್, ಶೃತಿ ವಿನೋದ್ ಭಾಗವಹಿಸಿದ್ದರು.ಗುರುಕುಲ ಬಾಲ ವಿಕಾಸ ಮುಖ್ಯಸ್ಥ ಸತೀಶ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿಯರಾದ ಸ್ನೇಹಾ ಸತೀಶ್, ಗೀತಾ, ಜಯಂತಿ, ಸುನೀತಾ, ರಂಜಿತಾ, ಶ್ರೀನಿಧಿ, ಅನೂರೂಪ ಸೇರಿದಂತೆ ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

Author