ಶಿವಮೊಗ್ಗ | ಹೆಚ್ಚಿನ ದರಕ್ಕೆ ಬೇಡಿಕೆ, ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ; ಆಟೋ ಚಾಲಕನ ಮೇಲೆ ದಾಖಲಾಯಿತು ಪ್ರಕರಣ

ಶಿವಮೊಗ್ಗ

ಶಿವಮೊಗ್ಗ, ದಿನಾಂಕ:21-08-2026 ರಂದು ರಾತ್ರಿ 7-30 ಸಮಯದಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಿಂದ ಕಾಶಿಪುರಕ್ಕೆ ಪ್ರಯಾಣಿಸಲು ಪ್ರಯಾಣಿಕರೊಬ್ಬರು ಪ್ರೀ-ಪೇಯ್ಡ್ ಆಟೋ ಟಿಕೆಟ್ ಪಡೆದಿದ್ದರು.

ಆದರೆ ಮೇಲ್ಕಂಡ , ಸಂಬಂಧಿಸಿದ ಆಟೋ ಚಾಲಕನು ಪ್ರೀ-ಪೇಯ್ಡ್ ಟಿಕೆಟ್‌ನಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ₹40/- ಹಣವನ್ನು ಬೇಡಿಕೆ ಮಾಡಿದ್ದು, ಅಲ್ಲದೇ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಪ್ರಯಾಣಿಕರು ದೂರು ನೀಡಿದ ಹಿನ್ನೆಲೆಯಲ್ಲಿ KA-14-C-75 ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿರುತ್ತಾರೆ.

ಹಾಗೂ ಚಾಲಕನ ವಿರುದ್ಧ Permit Condition ಉಲ್ಲಂಘನೆ (Violation of Permit Condition) ಅಡಿಯಲ್ಲಿ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ.

Author