ವಿಜಯಪುರ | ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಬಿಡದಿ ಟೌನ್ ಶಿಪ್ ಗಿಫ್ಟ್ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ಯತ್ನಾಳ್..!?

ರಾಜಕೀಯ

ವಿಜಯಪುರ, ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಬಿಡದಿ ಟೌನ್ ಶಿಪ್ ಗಿಫ್ಟ್ ಇಲ್ಲಿನ ಜಮೀನು ಗಿಫ್ಟ್ ರೂಪದಲ್ಲಿ ನೀಡಲಾಗ್ತಿದೆ ಎಂದು ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲಿನ ರೈತರೇ ನನಗೆ ಈ ವಿಷಯ ತಿಳಿಸಿದ್ದಾರೆ ಎಂದರು. ಚೇತನ್ ಶಿವರಾಮೇಗೌಡ ಎನ್ನುವವರು ನನಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದರು.

ಮುಂದುವರೆದು ಮಾತನಾಡಿದ ಅವರು ಇದರ ಹಿಂದೆ 30 ಸಾವಿರ ಕೋಟಿ ದೊಡ್ಡ ಹಗರಣವಿದೆ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.ಹೇಗಾದರೂ ಮಾಡಿ ಭೂ ಸ್ವಾಧೀನಕ್ಕೆ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದರು. ಹಾಗಾಗಿ ರೈತರನ್ನು ಒಕ್ಕಲೆಬ್ಬಿಸಿ ಎರಡು ಮೂರು ಕೋಟಿ ಕೊಡ್ತೀವೆ ಎಂದು ರೈತರನ್ನು ಯಾಮಾರಿಸಲಾಗುತ್ತಿದೆ ಎಂದರು.

ಈ ಸಿಎಂ ಇರೋವರೆಗೂ ರೈತರಿಗೆ, ಸಾಮಾನ್ಯ ಜನರಿಗೆ, ದಲಿತರಿಗೆ ನೆಮ್ಮದಿ ಇಲ್ಲ ಎಂದು ಕಿಡಿಕಾರಿದರು.ಇದೆ ವೇಳೆ ಕುಮಾರಸ್ವಾಮಿ ಅವರು ಏನೇ ಆದರೂ ಬಿಡದಿ ಹೋರಾಟ ಕೈ ಬಿಡಬಾರದು ಎಂದು ಕಿವಿ ಮಾತು ಹೇಳಿದರು.

ಪ್ರಜ್ವಲ್ ರೇವಣ್ಣ ಜೈಲ್ ನಲ್ಲಿ ಮೊಬೈಲ್ ನಲ್ಲಿ ಮಾತಾಡಿರುವ ವೈರಲ್ ವಿಡಿಯೋ :

ಇನ್ನು ಪ್ರಜ್ವಲ್ ರೇವಣ್ಣ ಜೈಲ್ ನಲ್ಲಿ ಮೊಬೈಲ್ ನಲ್ಲಿ ಮಾತಾಡಿರುವ ವೈರಲ್ ವಿಡಿಯೋ ಸಂಬಂಧ ಮಾತನಾಡಿದ ಯತ್ನಾಳ್ ಬಿಡದಿ ಟೌನ್ ಶಿಪ್ ವಿಚಾರಕ್ಕೆ ಬ್ಲಾಕ್ಮೇಲ್ ನಡೆದಿದೆ ಎಂದು ಆರೋಪಿಸಿದರು.ಬಿಡದಿ ಹೋರಾಟ ಪವಿತ್ರಯತೆ ಹಾಳು ಮಾಡಲು ದೇವೇಗೌಡರ ಕುಟುಂಬ ಅವಮಾನಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿದರು.ಇದರ ವಿರುದ್ಧ ಕ್ರಮವಾಗಲಿ ಬೇಡ ಅನ್ನಲ್ಲ ಆದರೆ ಬಿಡದಿ ಹೋರಾಟ ಸಂದರ್ಭದಲ್ಲಿ ಮಾಡಿದ್ದೂ ಯಾಕೆ? ಎಂದು ಪ್ರಶ್ನಿಸಿದರು!

ಬಿಡದಿ ಹೋರಾಟಕ್ಕೂ ಮೊದಲು ಜೈಲ್ ನಲ್ಲಿ ಅಕ್ರಮಗಳು ನಡೆದಿಲ್ವ? ಎಂದು ಪ್ರಶ್ನಿಸಿದರು!ಜೈಲಿನಲ್ಲಿ ನಡೆಯೋದನ್ನ ಬಿಚ್ಚಿಟ್ಟ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಲಾಗುತ್ತೆ. ಯಾಕಂದ್ರೆ ನಿಮಗೆ ಅಲ್ಲಿಂದ ಮಾಮೂಲಿ ಸಿಗಲಿದೆ ಎಂದು ಆರೋಪಿಸಿದರು.

ಆದರೆ ಪ್ರಜ್ವಲ್ ರೇವಣ್ಣ ಮಾತನಾಡಿದನ್ನು ಮಾತ್ರ ವೈರಲ್ ಮಾಡಿರುವುದು ಉದ್ದೇಶಪೂರ್ವಕವಾಗಿ ದ್ವೇಷದಿಂದ ಕೂಡಿದೆ ಎಂದರು.ಇದಕೆಲ್ಲ ಕಾರಣ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಬಿಡದಿ ರೈತರ ಪರವಾಗಿ ಉಗ್ರ ಹೋರಾಟ ಪ್ರಾರಂಭ ಮಾಡಿದ್ದೆ ಕಾರಣ ಎಂದರು.

ಇನ್ನು ಕೊನೆಯದಾಗಿ ನಾನು ಸೋಮುವಾರ ಅಧಿವೇಶನಕ್ಕೆ ಹಾಜರಾಗಲಿದ್ದೇನೆ ಎಂದು ತಿಳಿಸಿದ್ದಾರೆ.

Author