ಶಿವಮೊಗ್ಗದಲ್ಲಿ ಇಂದು ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ MY Bharath, ಶಿವಮೊಗ್ಗ ಜಿಲ್ಲೆ ಹಾಗೂ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ “ವಿಕಸಿತ ಭಾರತ ಸಂಕಲ್ಪ ಅಭಿಯಾನ”ದ ಅಂಗವಾಗಿ ನಡೆದ “ನಶಾ ಮುಕ್ತ ಯುವ (Gen-Z Against Addiction)” ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯುವಜನತೆ ಹಾಗೂ ಸ್ವಯಂಸೇವಕರನ್ನು ಉದ್ದೇಶಿಸಿ ಶಿವಮೊಗ್ಗದ ಮಾನ್ಯ ಸಂಸದ ರಾಘವೇಂದ್ರ ಅವರು ಮಾತನಾಡಿದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ವರ್ಚುವಲ್ ಮೂಲಕ ಉದ್ಘಾಟಿಸಲಾದ “ನಶಾ ಮುಕ್ತ ಭಾರತ ಅಭಿಯಾನ”ದ ನೇರಪ್ರಸಾರವನ್ನು ನೂರಾರು ಯುವಕರೊಂದಿಗೆ ವೀಕ್ಷಿಸುವ ಮೂಲಕ, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಮುಂದುವರೆದು ಮಾತನಾಡಿದ ಅವರು ಮಾದಕ ದ್ರವ್ಯಗಳಿಂದ ಯುವಶಕ್ತಿಯನ್ನು ರಕ್ಷಿಸುವುದು ಕೇವಲ ಆರೋಗ್ಯದ ಪ್ರಶ್ನೆಯಲ್ಲ, ಅದು ವಿಕಸಿತ ಭಾರತ ನಿರ್ಮಾಣದ ರಾಷ್ಟ್ರೀಯ ಸಂಕಲ್ಪವಾಗಿದೆ. ಜಾಗೃತ ಯುವಜನತೆ, ಸದೃಢ ಸಮಾಜ ಮತ್ತು ಹೊಣೆಗಾರಿಕೆಯ ನಾಗರಿಕತೆಯೇ ನಮ್ಮ ದೇಶದ ಭವಿಷ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಶಿವಮೊಗ್ಗ ಜಿಲ್ಲಾ ಯುವ ಅಧಿಕಾರಿ ಶ್ರೀಮತಿ ಐಶ್ವರ್ಯ ಶ್ರೀನಿವಾಸ್ ಅವರಿಗೆ ಅಭಿನಂದನೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವ್ಯಸನಮುಕ್ತ, ಆರೋಗ್ಯಕರ ಹಾಗೂ ಶಕ್ತಿಶಾಲಿ ಯುವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸೋಣವೆಂದು ತಿಳಿಸಿದರು.
