ಹುಬ್ಬಳ್ಳಿ | ಬಸ್ಸಿನಲ್ಲೇ ಶಿಕ್ಷಕ ಹೃದಯಾಘಾತದಿಂದ ದುರ್ಮರಣ..!

ಹುಬ್ಬಳ್ಳಿ

ಹುಬ್ಬಳ್ಳಿ, ಕಲಬುರಗಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ (NWKRTC) ಸಂಸ್ಥೆಯ ಬಸ್‌ನಲ್ಲಿ ಶಿಕ್ಷಕರೊಬ್ಬರಿಗೆ ಹೃದಯಾಘಾತ ಸಂಭವಿಸಿದ ಘಟನೆ ನಡೆದಿದೆ. ವ್ಯಕ್ತಿ ಅಸ್ವಸ್ಥತೆ ರೀತಿಯಲ್ಲಿರುವುದನ್ನು ಕಂಡು ಬಸ್ ಚಾಲಕ ಕೂಡಲೇ ಬಸ್ ಅನ್ನು ನೇರವಾಗಿ ನಗರದ ಕೆ‌ಎಂಸಿಆರ್ಐ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ದುರಾದೃಷ್ಟವಶಾತ್ ಪ್ರಯಾಣಿಕ ಶಿಕ್ಷಕ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಧಾರವಾಡದ ಸತೀಶ್ ಮೊರಬ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.

ಘಟನೆಯ ವಿವರ

ಶಿಕ್ಷಕ ಸತೀಶ್ ಅವರು ಕಾರ್ಯ ನಿಮಿತ್ತ ಕಲಬುರಗಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದರು. ಆದರೆ, ಹುಬ್ಬಳ್ಳಿ ಪಕ್ಕದ ಶಿರಗುಪ್ಪಿ ಬಳಿ ಅಸ್ವಸ್ಥತೆ ರೀತಿ ಸೀಟಿನಲ್ಲಿ ಕುಳಿತಿರುವುದನ್ನು ಗಮನಿದ ನಿರ್ವಾಹಕ ಎಂ.ಹೆಚ್. ರಿತ್ತಿ ಎಂಬುವರು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಕೆ‌ಎಂಸಿಆರ್ಐಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಆಗ ಬಸ್ ಚಾಲಕ ಎ. ಎ. ನವಲಗುಂದ ನೇರವಾಗಿ ಬಸ್‌ ಅನ್ನೇ ಕೆ‌ಎಂಸಿಆರ್ಐಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ದುರದೃಷ್ಟವಶಾತ್ ಶಿಕ್ಷಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

Author