ಸಾಗರ | ಬಸ್ಸಿನಲ್ಲಿ ಗಾಢ ನಿದ್ರೆಗೆ ಜಾರಿದ ಮಹಿಳೆ: 17 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

ಕಳ್ಳತನವಾದ ಒಟ್ಟು ಸ್ವತ್ತುಗಳಲ್ಲಿ ₹5 ಲಕ್ಷ ಮೌಲ್ಯದ ಎರಡು ಎಳೆಯ ಮಾಂಗಲ್ಯ ಸರ, ₹5 ಲಕ್ಷ ಮೌಲ್ಯದ ಲಾಂಗ್ ಚೈನ್, ₹4 ಲಕ್ಷ ಮೌಲ್ಯದ ಎರಡು ಬಳೆಗಳು, ₹1.40 ಲಕ್ಷ ಮೌಲ್ಯದ ಜುಮುಕಿ-ಬೆಂಡೋಲೆ, ₹80,000 ಮೌಲ್ಯದ ಬ್ರೇಸ್‌ಲೆಟ್, ₹60,000 ಮೌಲ್ಯದ ಮೂರು ಉಂಗುರಗಳು, ₹30,000 ಮೌಲ್ಯದ ಓಲೆಗಳು ಹಾಗೂ ₹45,000 ನಗದು ಸೇರಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಟುಂಬದೊಂದಿಗೆ ಚರ್ಚಿಸಿ ತಡವಾಗಿ ದೂರ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಹುಬ್ಬಳ್ಳಿ | ಬಸ್ಸಿನಲ್ಲೇ ಶಿಕ್ಷಕ ಹೃದಯಾಘಾತದಿಂದ ದುರ್ಮರಣ..!

ಶಿಕ್ಷಕ ಸತೀಶ್ ಅವರು ಕಾರ್ಯ ನಿಮಿತ್ತ ಕಲಬುರಗಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದರು. ಆದರೆ, ಹುಬ್ಬಳ್ಳಿ ಪಕ್ಕದ ಶಿರಗುಪ್ಪಿ ಬಳಿ ಅಸ್ವಸ್ಥತೆ ರೀತಿ ಸೀಟಿನಲ್ಲಿ ಕುಳಿತಿರುವುದನ್ನು ಗಮನಿದ ನಿರ್ವಾಹಕ ಎಂ.ಹೆಚ್. ರಿತ್ತಿ ಎಂಬುವರು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಕೆ‌ಎಂಸಿಆರ್ಐಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆಗ ಬಸ್ ಚಾಲಕ ಎ. ಎ. ನವಲಗುಂದ ನೇರವಾಗಿ ಬಸ್‌ ಅನ್ನೇ ಕೆ‌ಎಂಸಿಆರ್ಐಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ದುರದೃಷ್ಟವಶಾತ್ ಶಿಕ್ಷಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

Continue Reading

ಚಿಕ್ಕಮಗಳೂರು | ಕುದುರೆಮುಖಕ್ಕೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದು ಹಲವರಿಗೆ ಗಾಯ

ಬಸ್ ನಿಯಂತ್ರಣ ತಪ್ಪಿ ಪಲ್ಟಿ ಆದುದರಿಂದ ಕೆಲವರಿಗೆ ಕೈಕಾಲುಗಳಿಗೆ ಹಾಗೂ ತಲೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

Continue Reading