ಶಿವಮೊಗ್ಗ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಅವರ ನೇತೃತ್ವದಲ್ಲಿ ನಗರದಲ್ಲಿ ಬಿಡಾಡಿ ವಾಹನ ತೆರವು ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವ ವಾಹನಗಳ ಮೇಲೆ ಎಸ್ಪಿ ಖುದ್ದಾಗಿ ನೋಟಿಸ್ ಅಂಟಿಸಿ, ವಾರ್ನಿಂಗ್ ಸಹ ನೀಡಿದ್ದಾರೆ.

ಮತ್ತು ನಗರದಾದ್ಯಂತ ಸಂಚರಿಸುವ ಸಿಟಿ ಬಸ್ಗಳಲ್ಲಿ ಟ್ರಾಫಿಕ್ ಪೊಲೀಸರು ಹಠಾತ್ ಪರಿಶೀಲನೆ ನಡೆಸಿದರು. ಸುಮಾರು 40 ಸಿಟಿ ಬಸ್ಗಳನ್ನು ತಡೆದು ಪರಿಶೀಲನೆಗೆ ಒಳಪಡಿಸಿದರು.
ಈ ವೇಳೆ 03 ಬಸ್ ಚಾಲಕರು ಮದ್ಯಪಾನಮಾಡಿರುವುದು ಗೊತ್ತಾಗಿದೆ. ಆಕ್ಷನ್ನ ಭಾಗವಾಗಿ ಆ ಬಸ್ಗಳನ್ನ ವಶಕ್ಕೆ ಪಡೆದ ಪೊಲೀಸರು, ಚಾಲಕರ ಕೇಸ್ ಮಾಡಿದ್ದಾರೆ.

ಅಲ್ಲದೆ ಚಾಲಕರ ಚಾಲನಾವಿರುದ್ಧ ಮೋಟಾರು ವಾಹನ ಕಾಯ್ದೆ ಅನ್ವಯಪರವಾನಗಿಯನ್ನು ಅಮಾನತು ಮಾಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
