ಹಾಸನ | ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಪ್ರವಾಸಿಗರಿಂದ ದುರ್ವರ್ತನೆ ; ಸ್ಥಳೀಯರಿಂದ ವ್ಯಾಪಕ ಆಕ್ರೋಶ..!

ಹಾಸನ

ಹಾಸನ,ಹೌದು ಹಾಸನ ಜಿಲ್ಲೆಯ ಸಕಲೇಶಪುರದ ಮರಗುಂದದ ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಪ್ರವಾಸಿಗರು ಡಿಜೆ ಹಾಕಿಕೊಂಡು ಮೋಜು ಮಸ್ತಿ ಮಾಡಿರುವ ವಿಡಿಯೋ ವೈರಲ್ ಆಗಿದೆ.ಇದಕ್ಕೆ ಪುಷ್ಟಿಕೊಡುವಂತೆ ಪ್ರವಾಸಿಗರು ಚಪ್ಪಲಿ ಧರಿಸಿಕೊಂಡು ಪ್ರವೇಶಿಸಿದ್ದಾರೆ.

ಈ ಹಿಂದೆ ಇಲ್ಲಿಯೇ ಸ್ಥಳೀಯರು ಹಾಗೂ ಫೋಟೋಗ್ರಾಫರ್ ನಡುವೆ ಹೊಡೆದಾಟ ನಡೆದಿದ್ದನ್ನು ಸ್ಮರಿಸಬಹುದಾಗಿದೆ. ತದ ನಂತರ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಯಮ ಜಾರಿ ಮಾಡಿ ಸೂಕ್ತ ಆದೇಶ ನೀಡಿತ್ತು.

ಹಾಗೂ ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶ ನಿರ್ಬಂಧಿಸಿತ್ತು. ಅದಾಗ್ಯ್ ಸಹ ಪ್ರವಾಸಿಗರು ಜಿಲ್ಲಾಡಳಿತ ಕಾನೂನು ಬ್ರೇಕ್ ಮಾಡಿರುವ ಪ್ರವಾಸಿಗರು ಎಲ್ಲದಕ್ಕೂ ಡೋಂಟ್ ಕೇರ್ ಎಂಬಂತೆ ವರ್ತಿಸಿರುವುದನ್ನ ಕಾಣಬಹುದಾಗಿದೆ.

ಪ್ರವಾಸಿಗರ ಈ ರೀತಿಯ ಮೋಜು ಮಸ್ತಿ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.

Author