ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ KSRTC ಅವರ ಮೇಲೆ ಕ್ರಮ ಜರುಗಿಸಲು ಭಯವೇ? ಅಥವಾ ಒಪ್ಪಂದವೇ?

ಶಿವಮೊಗ್ಗ

ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ KSRTC ಅವರ ಮೇಲೆ ಕ್ರಮ ಜರುಗಿಸಲು ಭಯವೇ? ಅಥವಾ ಒಪ್ಪಂದವೇ? ಹೀಗೊಂದು ಪ್ರಶ್ನೆ ಶಿವಮೊಗ್ಗ ನಾಗರಿಕರದ್ದಾಗಿದೆ..!

ಶಿವಮೊಗ್ಗದ ಜನಸಾಮಾನ್ಯರ ಪ್ರಕಾರ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದರು ಸಹ ಈ ಒಂದು ಪ್ರಶ್ನೆ ಕಾಡುತ್ತಿದೆ..!

ಸರ್ಕಾರಿ ಸ್ವಾಮ್ಯದ KSRTC Bus ಗಳು ಶಿವಮೊಗ್ಗದಲ್ಲಿ ರಾಜರೋಷವಾಗಿ ಜಿಲ್ಲಾಧಿಕಾರಿ ಆದೇಶಕ್ಕೆ ವಿರುದ್ಧವಾಗಿ ನಗರದಲ್ಲಿ ಸಂಚಾರ ಮಾಡುತ್ತಿದೆ. ಇನ್ನು KSRTC Bus ಗಳು ಅಲ್ಲಲ್ಲಿ ಕೆಟ್ಟು ನಿಂತು ಹೋಗುತ್ತಿರುವ ಹಾಗೂ ಸಿಕ್ಕಾಪಟ್ಟೆ ವಾಯು ಮಾಲಿನ್ಯ ಆಗುತ್ತಿದೆ. ನಗರದಲ್ಲಿ ವಿಪರೀತ ಹೋಗೆ ಬಿಟ್ಟುಕೊಂಡು ಅಕ್ಕಪಕ್ಕ ವಾಹನ ಸವಾರರು ಹಾಗೂ ಜನಸಾಮಾನ್ಯರಿಗೆ ಹೋಗೆ ಕುಡಿಸುತ್ತಿರುವ KSRTC Bus ಗಳ ಮೇಲೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಹೇಡಿತನ ಪ್ರದರ್ಶನ ಮಾಡುತ್ತಿದೆ ಎಂಬುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು 50% ರಿಯಾಯಿತಿ ದರದಲ್ಲಿ ದಂಡ ವಸೂಲಿ ಮಾಡಿದ ಟ್ರಾಫಿಕ್ ಪೊಲೀಸ್ ಇಲಾಖೆ KSRTC Bus ಗಳು ಕಾನೂನು ಉಲ್ಲಂಘನೆ ಮಾಡಿ ನಗರದಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ನೀಡದೆ ನಗರದಲ್ಲಿ ಸಂಚಾರ ಮಾಡಿ ಇಲ್ಲಿಯವರೆಗೆ ಏನೆಲ್ಲಾ ದಂಡ ಪಾವತಿ ಮಾಡಿದ್ದಾರೆ ಎಂಬ ಮಾಹಿತಿ ನಮಗಂತೂ ತಿಳಿಸಿಲ್ಲ.

ಇನ್ನು ನಗರದಲ್ಲಿ ಮೊದಲನೇಯಾದಗಿ ಜಿಲ್ಲಾಧಿಕಾರಿ ಆದೇಶಕ್ಕೆ ವಿರುದ್ದವಾಗಿ ಬೇರೆ ಜಿಲ್ಲೆಗೆ ತೆರಳುವ ಬಸ್ ಗಳು ತೆರಳುತ್ತಿದೆ ಇದರ ಕುರಿತು ಟ್ರಾಫಿಕ್ ಪೊಲೀಸ್ ಇಲಾಖೆ ಹೇಡಿತನ ಪ್ರದರ್ಶನ ಮಾಡುತ್ತಿರುವುದು, ನಾಗರಿಕರ ಕೋಪ ಆಕ್ರೋಶ ಇನ್ನೊಂದು ಕಡೆ, ಸಿಗ್ನಲ್ ಗಳಲ್ಲೇ ಬಸ್ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಇಳಿಸುತ್ತಾರೆ, ಇದರಿಂದ ಅಪಘಾತ ಸಂಭವ ಹೆಚ್ಚಾಗಿದೆ ಹಿಂಬದಿ ವಾಹನ ಸವಾರರು ಎಷ್ಟೇ ಹಾರ್ನ ಮಾಡಿದರು ತಲೆಕೆಡಿಸಿಕೊಳ್ಳುವುದಿಲ್ಲ ಅದರ ಬದಲು ಪ್ರಯಾಣಿಕರನ್ನು ಚೂ ಬಿಟ್ಟು ಜಗಳಕ್ಕೆ ಇಳಿಸುತ್ತಾರೆ. ಸಿಗ್ನಲ್ ನಲ್ಲಿ ಹಸಿರು ದೀಪ ಬಂದರು ಕೂಡ KSRTC Bus ಮುಂದಕ್ಕೆ ಚಲಾಯಿಸಿವುದೇ ಇಲ್ಲ. ಇದೆಲ್ಲ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ಏನು ಸಂಬಂಧವಿಲ್ಲದಾಗಿದೆ.

ತೀರಾ ಜಿಲ್ಲಾಧಿಕಾರಿ ಆದೇಶಕ್ಕೆ ಕನಿಷ್ಠ ಬೆಲೆ ಕೊಡದ KSRTC Bus ಜಪ್ತಿ ಮಾಡಲು ಆಗದಂತ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಶಿವಮೊಗ್ಗದಲ್ಲಿ ಇದ್ದಾರೆ, ಯಾಕಂದ್ರೆ ಇವರಿಗೆ ಕೆಲಸ ಉಳಿಸಿಕೊಳ್ಳುವ ದರ್ದು ಬಿಟ್ಟರೆ,

ಪುಕಸಟ್ಟೆ ಪ್ರಚಾರ ಅವಶ್ಯಕತೆಯಿದೆ ಅದುನ್ನ ಹೊರತುಪಡಿಸಿ ಜನಸಾಮಾನ್ಯರ ಸಮಸ್ಯೆ ಪರಿಹಾರ ಒದಗಿಸುವ ಯಾವ ಗೋಜಿಗೂ ಹೋಗುವ ಅಧಿಕಾರಿಗಳು ಶಿವಮೊಗ್ಗದಲ್ಲಿ ಕಾಣಿಸುತ್ತಿಲ್ಲ ಎಂಬುದು ನಾಗರೀಕರ ಆಕ್ರೋಶವಾಗಿದೆ.

ಯಾರೋ ಒಬ್ಬ ವಾಹನ ಸವಾರ ಎಮಿಷನ್ ಮಾಡಿಸಿಲ್ಲ ಅಂತ ಅಂದರೆ ದಂಡ ವಿಧಿಸುವ ಟ್ರಾಫಿಕ್ ಪೊಲೀಸ್ ಇಲಾಖೆಯವರಿಗೆ ಶಿವಮೊಗ್ಗ- ಭದ್ರಾವತಿ ಹಲವಾರು KSRTC Bus ವಿಪರೀತ ಹೋಗೆ ಬಿಡುತ್ತ ಹೋಗುತ್ತಿರುವುದು ಕಣ್ಣಿಗೆ ಕಾಣಿಸಿದರು ಯಾವದೇ ಕ್ರಮವಿಲ್ಲ.

ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಯಾವ ರೀತಿಯ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದರೆ ಅಮೀರ್ ಅಹ್ಮದ್ ವೃತ್ತದಲ್ಲಿ ನಿಂತು ವಾಹನ ಸವರರನ್ನು ತಡೆದು ಪರಿಶೀಲನೆ ಮಾಡುತ್ತಾರೆ ಅದೇ ಕಣ್ಣಿಗೆ ಕಾಣುವಂತೆ BH ರಸ್ತೆಯಲ್ಲಿ KSRTC ಬೇರೆ ಜಿಲ್ಲೆಗೆ ತೆರಳುವ ಬಸ್ ಗಳನ್ನ ತಡೆ ಹಿಡಿಯಲು ಇವರಿಗೆ ಅಸಾಧ್ಯವಾಗಿದೆ.

ಅದೇ KSRTC Bus ಗಳು ವಿಪರೀತ ಹೋಗೆ ಬಿಟ್ಟುಕೊಂಡು ಹೋಗುತ್ತಿದ್ದರು ಪ್ರಶ್ನೆ ಮಾಡಿ ತಡೆಹಿಡಿಯುವ ಧೈರ್ಯ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ಇಲ್ಲದಾಗಿದೆ.

ಯಾರೋ ಅಮಾಯಕರು ಕೆಲಸ ಕೂಲಿ ಮಾಡಿಕೊಂಡು ಬಂದವರನ್ನು ತಡೆಹಿಡಿದು ವಸೂಲಿಯಲ್ಲಿ ತೊಡಗಿದ್ದಾರೆ. ಮನುಷತ್ವ ಮರೆತು ಜನಸಾಮಾನ್ಯರಿಗೆ ಹಿಡಿದು ದಾಖಲೆ ಕೇಳುವ ಟ್ರಾಫಿಕ್ ಪೊಲೀಸ್ ಇಲಾಖೆ ಅವರೇ ಸಾಧ್ಯವಾದರೆ KSRTC Bus ಗಳ ಆಟಟೋಪಕ್ಕೆ ಬ್ರೇಕ್ ಹಾಕಿ ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಿ.

ಸಿಗ್ನಲ್ ಗಳಲ್ಲಿ KSRTC Bus ನಿಲ್ಲಿಸಿ ಹಿಂಬದಿ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಕೊಡಿ.

ಎಲ್ಲದಕ್ಕೂ ಮಾನ್ಯ ದೇವರಾಜ್ ಸರ್ ನಿರ್ದೇಶನಕ್ಕೆ ಕಾಯಬೇಡಿ ನಿಮ್ಮ ಕರ್ತವ್ಯ ನೀವು ಮಾಡಿ.

ಇನ್ನು ಗಾರ್ಡನ್ ಏರಿಯಾ ಒತ್ತುವರಿ ತೆರುವು ಆದ ಬಳಿಕ ಏನೆಲ್ಲಾ ಆಗುತ್ತಿದೆ ಎಂಬುದರ ಕುರಿತು ಮಾನ್ಯ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಸರ್ ಏನು ಕ್ರಮ ಕೈಗೊಂಡರು ಅನ್ನುವುದು ಮುಖ್ಯ,ಸರ್ಕಾರಿ ಸಂಬಳ ಪಡೆಯುವ ನಿಮ್ಮಂತ ಅಧಿಕಾರಿಗಳು ಸಿಬ್ಬಂದಿಗಳು ಎಷ್ಟು ಪ್ರಾಮಾಣಿಕ ಕೆಲಸದಲ್ಲಿ ತೊಡಗಿದ್ದೀರಾ ಎಂಬುದು ಮುಖ್ಯ ಆಗಲಿದೆ ಇದರ ಸಂಬಂಧ ಮಾಹಿತಿ ತಿಳಿಸುತ್ತೇವೆ.

ಯಾರೋ ಗೋಪಿ ಸರ್ಕಲ್ ನಲ್ಲಿ ಟ್ರಾಫಿಕ್ ಪೋಲೀಸರ ಮೇಲೆ ಅವಹೇಳನ ಮಾಡುತ್ತಾರೆ ಅಂತ ಕೇಸ್ ಮಾಡುತ್ತೀರಾ ಅಂದಮೇಲೆ ಸಾರ್ವಜನಿಕರ ಸಮಸ್ಯೆ ಬಗ್ಗೆ ಪ್ರಶ್ನೆ ಎತ್ತಿದಾಗ ನಿಮ್ಮ ಕರ್ತವ್ಯ ಏನು ಅಂತ ತಿಳಿದು ಅಧಿಕಾರಿಗಳು, ಸಿಬ್ಬಂದಿಗಳು ಕೆಲಸ ಮಾಡಿ.

ನಗರದಲ್ಲಿ ಆಗೋ ಎಲ್ಲಾ ಅನಿಷ್ಟಕ್ಕೂ ದೇವರಾಜ್ ಸರ್ ಕಾರಣವಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕೂಡ ಜವಾಬ್ದಾರಿಯಾಗುತ್ತರೆ..!

Author