ಶಿವಮೊಗ್ಗ | ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಸ್ನಾತಕೋತ್ತರ (M.Sc ಮತ್ತು M.A) ಪದವಿ ಪ್ರವೇಶಾತಿಯನ್ನು ಮುಂದುವರಿಸುವಂತೆ ABVP ಅಗ್ರಹ

ಶಿವಮೊಗ್ಗ

ಶಿವಮೊಗ್ಗ,ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಸ್ನಾತಕೋತ್ತರ (M.Sc ಮತ್ತು M.A) ಪದವಿ ಪ್ರವೇಶಾತಿಯನ್ನು ಮುಂದುವರಿಸುವಂತೆ ಕೋರಿ.ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ಪತ್ರದ ಮೂಲಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗಮನವನ್ನು ಅತ್ಯಂತ ಗಂಭೀರವಾದ ಸಮಸ್ಯೆಯೊಂದರ ಕಡೆಗೆ ಸೆಳೆಯಲು ಬಯಸುತ್ತದೆ.

ಶಿವಮೊಗ್ಗದ ಹೆಮ್ಮೆಯ ಇತಿಹಾಸ ಹೊಂದಿರುವ ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜುಗಳು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಆಶಾಕಿರಣಗಳಾಗಿವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಈ ಕಾಲೇಜುಗಳಲ್ಲಿ ಎಂ.ಎಸ್ಸಿ (M.Sc) ಮತ್ತು ಎಂ.ಎ (M.A) ಸ್ನಾತಕೋತ್ತರ ಪದವಿಗಳ ಪ್ರವೇಶಾತಿಯನ್ನು ನೀಡದೆ ಇರುವುದು ಸ್ಥಳೀಯ ಹಾಗೂ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಭವಿಷ್ಯದ ಬಗ್ಗೆ ದಿಗಿಲನ್ನು ಉಂಟುಮಾಡಿದೆ.

ಖಾಸಗಿ ಕಾಲೇಜುಗಳ ದುಬಾರಿ ಶುಲ್ಕವನ್ನು ಭರಿಸಲಾಗದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸರ್ಕಾರಿ ಸ್ವಾಮ್ಯದ ಸಹ್ಯಾದ್ರಿ ಕಾಲೇಜುಗಳನ್ನೇ ನಂಬಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರವೇಶಾತಿಯನ್ನು ತಡೆಹಿಡಿಯುವುದು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ.ಹಾಗೆಯೇ UUCMS ತಂತ್ರಾಂಶದ ಸಮಸ್ಯೆ ಅತ್ಯಧಿಕವಾಗಿದ್ದು ಅದರ ಕಡೆಯೂ ಗಮನ ಹರಿಸಬೇಕು ಮತ್ತು BCA ಅಂತಿಮ ವರ್ಷದ ವಿದ್ಯಾರ್ಥಿಗಳ ಶುಲ್ಕ ಹೆಚ್ಚುವರಿಯಾಗಿದ್ದು ಅದನ್ನೂ ಪರಿಷ್ಕರಿಸಬೇಕು.

ಪ್ರಮುಖ ಆಗ್ರಹಗಳು:

ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ M.Sc ಮತ್ತು M.A ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು.•

ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು.•

BCA ಶುಲ್ಕ ಪರಿಷ್ಕರಿಸಬೇಕು• UUCMS ತಂತ್ರಾಂಶ ಸರಿಪಡಿಸಬೇಕು.

ಎಚ್ಚರಿಕೆ:ಒಂದು ವೇಳೆ ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ತಳೆದು, ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿಯನ್ನು ನೀಡದೆ ನಿರ್ಲಕ್ಷ್ಯ ವಹಿಸಿದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಇದನ್ನು ಉಗ್ರವಾಗಿ ವಿರೋಧಿಸುತ್ತದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ವಿಶ್ವವಿದ್ಯಾಲಯದಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಇದರಿಂದ ಉಂಟಾಗುವ ಯಾವುದೇ ಅಹಿತಕರ ಪರಿಣಾಮ ಹಾಗೂ ಕಾನೂನು ಸುವ್ಯವಸ್ಥೆಯ ಧಕ್ಕೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಬಯಸುತ್ತೇವೆ ಎಂದು ABVP ತಿಳಿಸಿದೆ.

ಆದ್ದರಿಂದ, ಮಾನ್ಯ ಕುಲಪತಿಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಮನಗಂಡು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ರವಿ ಇರೋಜಿ ವಿಭಾಗ ಸಂಚಾಲಕರು,ಆದಿತ್ಯ ಶೆಟ್ಟಿ – ವಿಭಾಗ ಸಂಘಟನಾ ಕಾರ್ಯದರ್ಶಿ,ರವಿ ಇರೋಜಿ – ವಿಭಾಗ ಸಂಚಾಲಕರು,ನಂದನ್ – ಜಿಲ್ಲಾ ಸಂಚಾಲಕರು, ನಿರಂಜನ್ – ನಗರ ಕಾರ್ಯದರ್ಶಿ, ವಿನಯ್ ಹಿರೇಮಳಲಿ – ಶಿವಮೊಗ್ಗ ನಗರ ಸಹ ಕಾರ್ಯದರ್ಶಿ ನಿಖಿಲ್, ರಂಜಿನಿಅಂಜನ್ ನಂದಿನಿ,ಚಂದನ, ಇನ್ನಿತರು ಉಪಸ್ಥಿತರಿದ್ದರು.

Author