ಶಿವಮೊಗ್ಗ | ಶಶಿಧರ ಕೆ.ಎಲ್ ಅವರಿಗೆ ಪಿಎಚ್‌ಡಿ ಪದವಿ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯ್ಕೆ ಶ್ರೇಣಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಶಶಿಧರ ಕೆ.ಎಲ್ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಕುವೆಂಪು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎಸ್. ಪದ್ಮಮ್ಮ ಅವರ ಮಾರ್ಗದರ್ಶನದಲ್ಲಿ “Information Needs and Seeking Behaviour of Teachers: A Survey of Secondary Schools in Shivamogga District” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿ ಅವರು ಈ ಪದವಿಯನ್ನು ಪಡೆದಿದ್ದಾರೆ.

ಶಶಿಧರ ಕೆ.ಎಲ್ ಅವರು ಭದ್ರಾವತಿ ತಾಲ್ಲೂಕಿನ ದೊಡ್ಡಗೊಪ್ಪೇನಹಳ್ಳಿ ಗ್ರಾಮದ ನಿವಾಸಿಗಳಾದ ಶ್ರೀ ಎಸ್. ಲೋಕೇಶಪ್ಪ ಹಾಗೂ ಶ್ರೀಮತಿ ಜಯಮ್ಮ ಜಿ.ಆರ್ ದಂಪತಿಯ ಪುತ್ರರಾಗಿದ್ದು, ದಿವಂಗತ ಜಮೀನ್ದಾರ್ ಕೆ. ಶಿವಪ್ಪ ಹಾಗೂ ದಿವಂಗತ ಶಿವಲಿಂಗಮ್ಮ ಅವರ ಮೊಮ್ಮಗರಾಗಿದ್ದಾರೆ.

ಅವರ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಣ್ಣಹನುಮಪ್ಪ ಜಿ., ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕುಟುಂಬ ವರ್ಗದವರು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Author