ಕಳೆದ ತಿಂಗಳು ನಿಧನರಾದ ಶಾಸಕರಾಗಿದ್ದ ಡಿ. ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ.ಹಿರಿಯೂರು ಮುಂಬರುವ ತಿಂಗಳುಗಳಲ್ಲಿ ಉಪಚುನಾವಣೆ ಎದುರಿಸುವ ಸಾಧ್ಯತೆ ಇದೆ.
ತಂದೆ ಸಚಿವರಾಗಿದ್ದಾಗ ಅವರ ಜೊತೆ ವಿರಳವಾಗಿ ಕಾಣಿಸಿಕೊಂಡಿದ್ದರೂ, ಸುಹಾಸ್ ಈಗ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.ಮೃತ ಶಾಸಕರ ಕುಟುಂಬ ಸದಸ್ಯರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸುವುದು ಸಾಮಾನ್ಯ ರಾಜಕೀಯ ತಂತ್ರ ಎಂದು ಮೂಲಗಳು ತಿಳಿಸಿವೆ. ಸುಹಾಸ್ ತಮ್ಮ ತಂದೆಯ ಬೆಂಬಲಿಗರು ಮತ್ತು ಕ್ಷೇತ್ರದ ಸ್ಥಳೀಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ಪಕ್ಷದ ನಾಯಕರು ಸುಧಾಕರ್ ಅವರ ಪತ್ನಿ ಹರ್ಷಿಣಿ ಅನುಕಂಪದ ಮತಗಳನ್ನು ಸೆಳೆಯಬಹುದೆಂದು ನಂಬಿದ್ದಾರೆ, ಆದರೆ ಹರ್ಷಿಣಿ ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆ ಎಂದು ವರದಿಯಾಗಿದೆ.
ವಾಣಿಜ್ಯ ಪದವೀಧರರಾದ ಸುಹಾಸ್, “ಪಕ್ಷದ ಕಾರ್ಯಕರ್ತರು ಮತ್ತು ಜನರು ನಾನು ಅವರೊಂದಿಗೆ ಸಂಪರ್ಕದಲ್ಲಿರಬೇಕೆಂದು ಬಯಸುತ್ತಾರೆ. ಜನರನ್ನು ಭೇಟಿ ಮಾಡಲು ಮತ್ತು ಅವರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳಲು ನಾನು ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿನೀಡುತ್ತಿದ್ದೇನೆ. ಜನರ ಆಶಯಗಳನ್ನು ನಾನು ಪಾಲಿಸುತ್ತೇನೆ” ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಕುಟುಂಬಕ್ಕೆ ಟಿಕೆಟ್ ಕುರಿತು ಯಾವುದೇ ಭರವಸೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


