ಶಿವಮೊಗ್ಗ | ಜೆಡಿಎಸ್ ರಜತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಜನತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್

ಶಿವಮೊಗ್ಗ

ಶಿವಮೊಗ್ಗ,ಜೆಡಿಎಸ್ ರಜತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ಸಾಮಾಜಿಕ ಜಾಲತಾಣ ಜೆಡಿಎಸ್ ಹಾಗೂ ಯುವಜನತಾದಳ ವತಿಯಿಂದ ರಾಜ್ಯಮಟ್ಟದ ಜನತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಬೆಂಗಳೂರಿನ ಮಾದಾವರ ದಲ್ಲಿ ಮೇ 15.16. 17 ರಂದು ನಡೆಯಲಿದ್ದು 40 ವರ್ಷದ ಒಳಗಿನ ಪಕ್ಷದ ಕಾರ್ಯಕರ್ತರಿಗೆ ಈ ಟೂರ್ನಮೆಂಟ್ ನಲ್ಲಿ ಭಾಗವಹಿಸುವ ಅವಕಾಶವಿದ್ದು ಶಿವಮೊಗ್ಗ ಜೆಡಿಎಸ್ ನಿಂದ ಮಲ್ನಾಡ್ ಸ್ಮಾಶಸ್ ತಂಡ ಭಾಗವಹಿಸಲಿದ್ದು.

ಇಂದು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಟೂರ್ನಮೆಂಟ್ನ ಲಾಂಛನ ಮತ್ತು ಟೀ ಶರ್ಟ್ ಅನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್. ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾಜಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್. ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಪ್ರಮುಖರಾದ ತ್ಯಾಗರಾಜ್, ಸಂಗಯ್ಯ.

ಕಾಂತರಾಜ್.ಗೋಪಿ ಮುದಲಿಯಾರ್ ಲೋಹಿತ್ ಗಗನ್.ನಿಖಿಲ್.ಪ್ರಜ್ವಲ್. ಯಶವಂತ್ ಶೆಟ್ಟಿ. ರಮೇಶ್ ನಾಯ್ಕ್. ಆಯನೂರ್ ಶಿವ ನಾಯ್ಕ್ ಸೇರಿದಂತೆ ತಂಡದ ಆಟಗಾರರು ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು

Author