ಡಾ.ಧನ್ಯತಾ – ಡಾಲಿ ಧನಂಜಯ್ ದಂಪತಿಗೆ ಗಂಡು ಮಗು ಜನನ

ಮನೋರಂಜನೆ

ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್​​ ತಂದೆಯಾದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಧನಂಜಯ್ ಧನ್ಯತಾ ದಂಪತಿ ಶೀಘ್ರದಲ್ಲೇ ಪೋಷಕರಾಗಲಿದ್ದೇವೆ ಎಂದು ಸೋಷಿಯಲ್​ ಮೀಡಿಯಾ ಮೂಲಕ ತಿಳಿಸಿದ್ದರು.

ಇಂದು ಗಂಡು ಮಗುವಿನ ಆಗಮನದ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ಮಗುವಿನ ಪುಟ್ಟ ಕೈಗಳನ್ನು ಹಿಡಿದಿರುವ ಫೋಟೋ ಹಂಚಿಕೊಂಡ ಡಾಲಿ ಧನಂಜಯ್​, ”ಗಂಡು ಮಗುವನ್ನು ಸ್ವಾಗತಿಸಿದ್ದೇವೆ. ನಿಮ್ಮ ಪ್ರೀತಿ ಆಶೀರ್ವಾದವಿರಲಿ” ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ಅಭಿನಂದನೆಗಳ ಮಹಾಪೂರ ಹರಿಸುತ್ತಿದ್ದಾರೆ.ವೃತ್ತಿಯಲ್ಲಿ ಖ್ಯಾತ ನಟನಾಗಿರುವ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಪಯಣ ಆರಂಭಿಸಿದರು.

ಈ ವರ್ಷಾರಂಭ ಧನಂಜಯ್​​ ತಂದೆಯಾಗುತ್ತಿರುವ ಶುಭ ಸುದ್ದಿ ಹಂಚಿಕೊಂಡಿದ್ದರು ಎಂದು ವರದಿಯಾಗಿವೆ. ಆ ಪ್ರಕಾರ ನಟನಿಗೆ ಈಗಾಲೇ ಶುಭಕೋರಲಾಗಿತ್ತು. 2 ದಿನಗಳ ಹಿಂದೆ ಬೇಬಿ ಬಂಪ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಶೀಘ್ರದಲ್ಲೇ ಪೋಷಕರಾಗುತ್ತಿದ್ದೇವೆ ಎಂದು ದಂಪತಿ ತಿಳಿಸಿದ್ರು.

ಇಂದು ಮಗುವಿನ ಆಗಮನದ ಬಗ್ಗೆ ಆನ್​​​ಲೈನ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಫೋಟೋಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಸೆಲೆಬ್ರಿಟಿಗಳೂ ಸೇರಿದಂತೆ ಫ್ಯಾನ್ಸ್​​ ಕಾಮೆಂಟ್ ಸೆಕ್ಷನ್​ನಲ್ಲಿ ಅಭಿನಂದನೆಗಳ ಮಳೆ ಹರಿಸಿದ್ದಾರೆ. ‘ಅಭಿನಂದನೆಗಳು’ ಎಂದು ಮೇಘನಾ ರಾಜ್​ ತಿಳಿಸಿದ್ರೆ,

‘ನಿಮ್ಮಿಬ್ಬರಿಗೂ ಅಭಿನಂದನೆಗಳು. ಜೂನಿಯರ್ ಡಿ ಗೆ ನನ್ನ ಪ್ರೀತಿ’ ಎಂದು ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಉರುಡುಗ ತಿಳಿಸಿದ್ದಾರೆ.

ಕಾಂತಾರ ಖ್ಯಾತಿಯ ಸಪ್ತಮಿ ಗೌಡ, ‘ಒ ಮೈ ಗಾಡ್​, ಬೇಬಿ ಡಿಡಿ’ ಎಂದು ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಮೂಲ್ಯ ‘ಕಂಗ್ರಾಜುಲೇಶನ್ಸ್’ ಎಂದು ತಿಳಿಸಿದ್ದಾರೆ.

Author