ಶಿವಮೊಗ್ಗ | ಪ್ರಸಿದ್ಧ ಡಯಾನ ಬುಕ್ ಗ್ಯಾಲರಿಯ ಮಾಲೀಕರಾದ ಈಶ್ವರ್ ಮತ್ತು ಸುಮಂಗಲ ದಂಪತಿಗಳ ದ್ವಿತೀಯ ಪುತ್ರಿ ಅಮಿತಾ ಈಶ್ವರ್ ವಿವಾಹಕ್ಕೆ ಗಣ್ಯಾತಿ ಗಣ್ಯರಿಂದ ಶುಭಾಶಯ

ಶಿವಮೊಗ್ಗ

ಶಿವಮೊಗ್ಗದ ತಿಲಕ್ ನಗರದ ಪ್ರಸಿದ್ಧ ಡಯಾನ ಬುಕ್ ಗ್ಯಾಲರಿಯ ಮಾಲೀಕರಾದ ಈಶ್ವರ್ ಮತ್ತು ಸುಮಂಗಲ ದಂಪತಿಗಳ ದ್ವಿತೀಯ ಪುತ್ರಿ ಅಮಿತಾ ಈಶ್ವರ್ ವಿವಾಹ ಮೋಹಿತ್ ಸೋಮಶೇಖರ್ ಜೊತೆ ಶಿವಮೊಗ್ಗದ ತರಳಬಾಳು ಬಡಾವಣೆಯ ಶುಭಶ್ರೀ ಕಲ್ಯಾಣಮಂದಿರದಲ್ಲಿ ಏಪ್ರಿಲ್ 29ರಂದು ನೆರವೇರಿತು.

ಈ ವಿವಾಹದ ಶುಭ ಸಮಾರಂಭಕ್ಕೆ,ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಶಿವಮೊಗ್ಗ , ಚನ್ನಬಸವ ಸ್ವಾಮೀಜಿ ಮೂಲಗದ್ದೆ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯೆಡ್ಯೂರಪ್ಪನವರು,ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ,ಎಂ. ಎಲ್ ಸಿ ಅರುಣ್ ಡಿ. ಎಸ್., ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ, ಕಾಂಗ್ರೆಸ್ ಮುಖಂಡರಾದ ಆಯನೂರು ಮಂಜುನಾಥ್,

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪುರ್ಯಾನಾಯ್ಕ್,ಮಾಜಿ ಬಿಜೆಪಿ ಶಾಸಕರಾದ ಅಶೋಕ್ ನಾಯ್ಕ್,ಕಾಂಗ್ರೆಸ್ ಮುಖಂಡರು ಹಾಗೂ ಸೂಡ ಅಧ್ಯಕ್ಷರಾದ ಸುಂದ್ರೇಶ್,ಬಿಜೆಪಿ ಮುಖಂಡರಾದ ಜ್ಯೋತಿ ಪ್ರಕಾಶ್,ಮಾಜಿ ಶಾಸಕರಾದ ಎಚ್ ಎಂ ಚಂದ್ರಶೇಖರಪ್ಪ ಹಾಗೂ ಕಾಂಗ್ರೆಸ್ ಮುಖಂಡರಾದ ಎಚ್. ಸಿ. ಯೋಗೇಶ್,

ಪತ್ರಕರ್ತರಾದ ವೈದ್ಯರು, ಟೆಲಿಕ್ಸ್ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ವೈ. ಎಚ್. ನಾಗರಾಜ್ ಹಾಗೂ ಹಲವಾರು ಗಣ್ಯರು ನವ ಜೋಡಿಗಳಿಗೆ ಶುಭ ಕೋರಿದರು.

Author