ಮೈಸೂರು | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಉದ್ಘಾಟನಾ ಪಂದ್ಯ : ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್ ಹೇಳಿಕೆ

ಅಗತ್ಯ ಸಿದ್ಧತಾ ಕ್ರಮಗಳನ್ನು ತೆಗೆದುಕೊಂಡು ಉದ್ಘಾಟನಾ ಪಂದ್ಯವನ್ನು ಇಲ್ಲೇ ನಡೆಸಲಾಗುವುದು ಎಂದರು. ಹೊಸ ಕೆಎಸ್‌ಸಿಎ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡ ನಂತರ, ಎಲ್ಲಾ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಲಾಯಿತು. ಈ ನಿಟ್ಟಿನಲ್ಲಿ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಪ್ರಸಾದ್ .

Continue Reading

ಮೈಸೂರು | ಉದ್ಬುರು ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನದಡಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

ಈ ವಸ್ತು ಪ್ರದರ್ಶನದಲ್ಲಿ ಒಟ್ಟು 40 ಮಾಡಲ್ ಗಳು ಹಾಗೂ 12 ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ 8ನೇ, 9ನೇ ಮತ್ತು 10ನೇ ತರಗತಿಯ ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಶಾಲೆಯ ಗಣಿತ ಮತ್ತು ವಿಜ್ಞಾನ ವಿಷಯ ಶಿಕ್ಷಕರು ಉತ್ತಮವಾದ ಮಾರ್ಗದರ್ಶನ ನೀಡುವುದರ ಜೊತೆಗೆ ಹೆಚ್ಚಿನ ಪರಿಶ್ರಮವನ್ನು ಹಾಕಿ ಮಕ್ಕಳನ್ನು ಪರಿಪೂರ್ಣವಾಗಿ ಸಿದ್ದಗೊಳಿಸಿರುತ್ತಾರೆ. ಇದಲ್ಲದೆ ಈ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಕಛೇರಿಯ ಸಿಬ್ಬಂದಿ ಮತ್ತು ಅಡುಗೆ ಸಿಬ್ಬಂದಿಗಳು ಕೂಡ […]

Continue Reading

ಮೈಸೂರು | 50 ಕೆಜಿ ತೂಕದ ಹೆಬ್ಬಾವು ರಕ್ಷಣೆ

ಈ ಕುರಿತು ವೀರನಹೊಸಹಳ್ಳಿ ಆರ್​​ಎಫ್‌ಒ ವಿನೋದ್‌ ಗೌಡ ಅವರು ತಿಳಿಸಿದ ಮಾಹಿತಿಯಂತೆ, ”ಇಲ್ಲಿಯವರೆಗೂ ಈ ಭಾಗದಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹಾವನ್ನು ನಾವು ಕಂಡಿರಲಿಲ್ಲ. ಹನ್ನೆರಡುವರೆ ಅಡಿ ಉದ್ದ, 50 ಕೆ.ಜಿ. ತೂಕದ ಸುಮಾರು 8-10 ವರ್ಷ ಪ್ರಾಯದ ಈ ಹೆಣ್ಣು ಹೆಬ್ಬಾವು ಆರೋಗ್ಯಯುತವಾಗಿದೆ” ಎಂದು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಹೆಚ್‌. ಡಿ. ಕೋಟೆಯ ಗಿರಿಜ‌ನ ಆಶ್ರಮ ಶಾಲೆಯ ಬಳಿಯೇ ಹೆಬ್ಬಾವೊಂದು ಕಾಣಿಸಿಕೊಂಡಿತ್ತು‌.

Continue Reading