ಶಿವಮೊಗ್ಗ | ತುಂತುರು ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ದಾಖಲಾಯಿತು FIR

ಕಳೆದ ಸೋಮವಾರ ರೆಸಾರ್ಟ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ನಾಗಮ್ಮ ಅವರು ಅಡುಗೆ ಬಡಿಸುವ ಮತ್ತು ಶುಚಿಗೊಳಿಸುವ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಸ್ಟೇಜ್ ಅಲಂಕಾರ ಮತ್ತು ಲೈಟಿಂಗ್ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಹರಿದ ವಿದ್ಯುತ್, ರೆಸಾರ್ಟ್‌ನ ಮುಳ್ಳುತಂತಿ ಬೇಲಿಗೆ ಪ್ರವಹಿಸಿತ್ತು. ಕೆಲಸ ಮಾಡುತ್ತಿದ್ದ ನಾಗಮ್ಮ ಅವರು ಆಕಸ್ಮಿಕವಾಗಿ ಮುಳ್ಳುತಂತಿ ಮುಟ್ಟಿದಾಗ ತೀವ್ರವಾಗಿ ವಿದ್ಯುತ್ ಶಾಕ್ ತಗುಲಿದೆ.ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರೆಸಾರ್ಟ್ ಮಾಲೀಕರು ಮತ್ತು ಅಲಂಕಾರಿಕ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ […]

Continue Reading

ತೀರ್ಥಹಳ್ಳಿ | (KFD) ಮಂಗನ ಕಾಯಿಲೆಗೆ ಮಹಿಳೆ ಬಲಿ

ಈ ಮೊದಲು ಕಟಗಾರು ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿ ಗ್ರಾಮದ ಯುವಕನೊಬ್ಬ ಕೂಡ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದನು. ಇದರಿಂದಾಗಿ ತಾಲೂಕಿನಲ್ಲಿ ಈ ವರ್ಷ ಸಾವಿನ ಸಂಖ್ಯೆ ಎರಡುಕ್ಕೇರಿದೆ.ತಾಲೂಕಿನಲ್ಲಿ ಇದುವರೆಗೆ ಒಟ್ಟು 29 ಕೆಎಫ್‌ಡಿ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ 5 ಮಂದಿ ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್‌ ತಿಳಿಸಿದ್ದಾರೆ.

Continue Reading

ಮುಖಕ್ಕೆ ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಅಪಹರಣ ; ಸ್ಥಳದಲ್ಲೇ ಕುಸಿದು ಬಿದ್ದು ಮಹಿಳೆ ಸಾವು

ಕೂಡಲೇ ಮಹಿಳೆಯನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆಯ ಬಳಿಕ ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ

Continue Reading