ಶಿವಮೊಗ್ಗ | ₹25 ಲಕ್ಷ ಲಂಚ ಬೇಡಿಕೆ ಸೂಡಾ ಅಧ್ಯಕ್ಷ ಸುಂದರೇಶ್ ಆರೋಪ : ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಕೆ. ಬಿ. ಪ್ರಸನ್ನ ಕುಮಾರ್ ಆಗ್ರಹ

“2022ರ ನವೆಂಬರ್‌ ತಿಂಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಮಧು ಬಂಗಾರಪ್ಪ ಅವರು ಜನಾಕ್ರೋಶ ಪಾದಯಾತ್ರೆ ನಡೆಸಿದ್ದರು. ಶರಾವತಿ ಸಂತ್ರಸ್ತರ ಜಾಗದ ಸಮಸ್ಯೆ, ಬಗರ್‌ಹುಕುಂ ರೈತರ ಸಾಗುವಳಿ ಹಕ್ಕು ಸೇರಿದಂತೆ ಹಲವು ಆಶ್ವಾಸನೆಗಳನ್ನು ನೀಡಿ ಜನರಿಂದ ಗೆದ್ದು ಸಚಿವರಾದರು. ಆದರೆ ಅಧಿಕಾರಕ್ಕೆ ಬಂದು ಮೂರು ಬಜೆಟ್‌ಗಳು ಮುಗಿದರೂ ಜಿಲ್ಲೆಗೆ ಭರವಸೆ ನೀಡಿದ್ದ ಆಡಳಿತ ಭವನ ನಿರ್ಮಾಣಕ್ಕೆ ಒಂದು ರೂಪಾಯಿ ಅನುದಾನ ತರಲು ಸಾಧ್ಯವಾಗಿಲ್ಲ” ಎಂದು ಪ್ರಸನ್ನಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಅತಿವೃಷ್ಟಿಯಿಂದಾಗಿ ಜಿಲ್ಲೆಯ ವಿವಿಧ […]

Continue Reading

ಶಿವಮೊಗ್ಗ | ಸ್ಬುಡದಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ; ತನಿಖೆಗೆ ಆಗ್ರಹಿಸಿದ ಮಾಜಿ ಶಾಸಕ ಪ್ರಸನ್ನಕುಮಾರ್

ವಿಶೇಷವೆಂದರೆ, ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಗುತ್ತಿಗೆದಾರರಿಗೆ ಬೆದರಿಕೆ ಕರೆಗಳು ಬಂದಿವೆ ಹಾಗೂ ಲಂಚದ ಆಮಿಷವನ್ನೂ ಒಡ್ಡಲಾಗಿತ್ತು. ಆದರೆ ಇವ್ಯಾವುದಕ್ಕೂ ಬಗ್ಗದ ಗುತ್ತಿಗೆದಾರರು ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ ಎಂದು ಪ್ರಸನ್ನ ಕುಮಾರ್ ವಿವರಿಸಿದರು. ಅಕ್ರಮಕ್ಕೆ ಸಾಕ್ಷಿಯಾಗಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಕಾಮಗಾರಿಯನ್ನು ಉದಾಹರಿಸಿದ ಅವರು, ಅಲ್ಲಿ ನಿಯಮದ ಪ್ರಕಾರ 1441 ಮೀಟರ್ ಕಬ್ ಸ್ಟೋನ್ ಅಳವಡಿಸಬೇಕಿತ್ತು. ಆದರೆ ವಾಸ್ತವದಲ್ಲಿ ಕೇವಲ 518 ಮೀಟರ್ ಕಬ್ ಸ್ಟೋನ್ ಮಾತ್ರ ಅಳವಡಿಸಿ, ಬಾಕಿ ಮೊತ್ತವನ್ನು ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಲೂಟಿ […]

Continue Reading