ನಿಂಗಮ್ಮನ ಇಡ್ಲಿ ಬಂಡಿ ತೆರವು ಸಮರ್ಥಿಸಿದ ಸಚಿವ ಪ್ರಿಯಾಂಕ್‌ ಖರ್ಗೆ

ಹಾಸನ ಮೂಲದ ನಿಂಗಮ್ಮ ಅವರು ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಫುಟ್‌ಪಾತ್‌ನಲ್ಲಿ ಸಣ್ಣ ತಳ್ಳುವ ಗಾಡಿಯಲ್ಲಿ ಇಡ್ಲಿ, ದೋಸೆ ಮಾರಾಟ ಮಾಡುವ ಟಿಫನ್ ಸೆಂಟರ್ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಪಿಎಂ ಸ್ವನಿಧಿ’ ಯೋಜನೆಯಡಿ ಸಣ್ಣ ಸಾಲ ಪಡೆದು, ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ನಿಂಗಮ್ಮ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಇತ್ತೀಚಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಂಗಮ್ಮ ಅವರ ಸ್ವಾವಲಂಬನೆಯ ಕಥೆಯನ್ನು ಉಲ್ಲೇಖಿಸಿ, ಅವರ ಸಾಧನೆ ಹಾಗೂ ಶ್ರಮವನ್ನು […]

Continue Reading

ಶೈಕ್ಷಣಿಕ ವ್ಯವಸ್ಥೆ ಮತ್ತು ನೇಮಕಾತಿ ಪರೀಕ್ಷೆಯಲ್ಲಿ ಬದಲಾವಣೆ ಅಗತ್ಯ : ಸಚಿವ ಮಧು ಬಂಗಾರಪ್ಪ

ಪರೀಕ್ಷೆಗಳು ಮತ್ತು ನೇಮಕಾತಿಗಳ ಸಮಗ್ರತೆ. ಶಿಕ್ಷಣದ ವೆಚ್ಚ, ಶುಲ್ಕ ಹಾಗೂ ಕೋಚಿಂಗ್ ಕೇಂದ್ರಗಳ ನಿಯಂತ್ರಣ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ಗುಣಮಟ್ಟ. ಪಠ್ಯಕ್ರಮ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸಂಪರ್ಕ5. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ6 . ಪ್ರವೇಶಾವಕಾಶ ಮತ್ತು ಸಮಾನತೆ ತಜ್ಞರ ಅಭಿಪ್ರಾಯ ಸಂಗ್ರಹಿಸಲು ಮಧು ಬಂಗಾರಪ್ಪ ಸಲಹೆ : ಈ ಮಹತ್ವದ ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ತಜ್ಞರ ಅಭಿಪ್ರಾಯ ಸಂಗ್ರಹಿಸುವುದು ಅತ್ಯಂತ […]

Continue Reading

ಬೆಂಗಳೂರು | ನಾಲ್ಕು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ..!

ಮಂಗಳವಾರ ಮನೆಗೆ ಹೋಗಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದವು. ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ ಉಮಾದೇವಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ರಾಮಲಿಂಗಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ದೂರಿನ ಪ್ರಕಾರ, ರಾಮಲಿಂಗಪ್ಪ ಮಧ್ಯಾಹ್ನ ಮನೆಗೆ ಮರಳಿದಾಗ ಅವರ ಪತ್ನಿ ಕೋಣೆಯೊಳಗೆ ಬೀಗ ಹಾಕಿಕೊಂಡಿರುವುದು ಕಂಡುಬಂದಿದೆ. ಬಾಗಿಲು ತೆರೆದ ನಂತರ, ಉಮಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಆಕೆಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.

Continue Reading

ಶಿವಮೊಗ್ಗ | ಸಿ.ಎ. ನಿವೇಶನ ನಿಯಮಗಳ ಸರಳೀಕರಣ ಹಾಗೂ ನವೀಕರಣ ಶುಲ್ಕಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆ

ಕಠಿಣ ಕ್ರಮ ದುರುಪಯೋಗಕ್ಕೆ ಮಾತ್ರ: ನಿಯಮ ಉಲ್ಲಂಘಿಸುವ ಅಥವಾ ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳ ವಿರುದ್ಧ ಮಾತ್ರ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು; ನೈಜವಾಗಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ತೊಂದರೆ ನೀಡದಿರುವುದು. ಕಟ್ಟಡ ನಿರ್ಮಾಣದ ಕಾಲಾವಕಾಶ ವಿಸ್ತರಣೆ: ಕಟ್ಟಡ ನಿರ್ಮಾಣಕ್ಕೆ ನಿಗದಿಪಡಿಸಿರುವ 3 ವರ್ಷಗಳ ಗಡುವನ್ನು ಪ್ರಸ್ತುತ ಸ್ಥಿತಿಗತಿಗಳನ್ನು ಆಧರಿಸಿ ಸೂಕ್ತವಾಗಿ ವಿಸ್ತರಿಸುವುದು. ಶುಲ್ಕ ರಿಯಾಯಿತಿ ಹಾಗೂ ಸಬ್ಸಿಡಿ: ಲಾಭರಹಿತ, ಶೈಕ್ಷಣಿಕ, ಕ್ರೀಡೆ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ನೈಜ ಸಂಸ್ಥೆಗಳಿಗೆ ಕಡಿಮೆ ನವೀಕರಣ ಶುಲ್ಕ ಹಾಗೂ ಸಬ್ಸಿಡಿ ದರದಲ್ಲಿ ನಿವೇಶನ […]

Continue Reading

ವಿಚಾರಣಾಧೀನ ಕೈದಿಗೆ ರಾಜಾತಿಥ್ಯ : ಮಂಡ್ಯ ಜಿಲ್ಲಾ ಜೈಲು ಅಧೀಕ್ಷಕಿ ಎತ್ತಂಗಡಿ

ಈ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಕೈದಿ ಹುಸೇನ್ ತನ್ನ ಗೆಳತಿಯೊಂದಿಗೆ ರಾಜಾತಿಥ್ಯ ಅನುಭವಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು.ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಕ್ರಮ ಬಯಲಾಗಿತ್ತು. ನ್ಯಾಯಾಲಯಕ್ಕೆ ಮಾಹಿತಿ ನೀಡದೆ ಕೈದಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಕ್ಕೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ಥಳದಲ್ಲೇ ಜೈಲು ಅಧೀಕ್ಷಕಿ ಶಾಂತಮ್ಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ತಂಡವು ಆಗಸ್ಟ್ […]

Continue Reading

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜ್ವಲಂತ ಅರಣ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿ : ಅರಣ್ಯ ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ

ಇದರೊಂದಿಗೆ ದಶಕಗಳಿಂದ ಬಾಕಿಯಿರುವ ಶರಾವತಿ ಸಂತ್ರಸ್ತರ ಪುನರ್ವಸತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸ್ಥಳ ಪರಿಶೀಲನೆ ಪೂರ್ಣಗೊಳಿಸಿ ಪ್ರಸ್ತಾವನೆ ಸಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಹಾಗೂ ಮೈಸೂರು ಪೇಪರ್ ಮಿಲ್ಸ್ (MPM) ಅರಣ್ಯ ವ್ಯಾಪ್ತಿಯಲ್ಲಿ ಮರ ತೆರವುಗೊಳಿಸುವ ನಿರ್ವಹಣಾ ಯೋಜನೆಗೆ (Management Plan) ಆದ್ಯತೆಯ ಮೇರೆಗೆ ಅನುಮೋದನೆ ದೊರಕಿಸಿಕೊಡುವಂತೆ ಬಿ.ವೈ.ರಾಘವೇಂದ್ರ ಅವರು ಮಾನ್ಯ ಸಚಿವರನ್ನು ಕೋರಿದ್ದಾರೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ 766C (ಬೆಕ್ಕೋಡಿ ಯೋಜನೆ) ಅಡಿಯಲ್ಲಿ ಹೊಸನಗರದ ಮಾವಿನಕೊಪ್ಪ ವೃತ್ತದಿಂದ ಅಡುಗೋಡಿವರೆಗಿನ ರಸ್ತೆ ಮತ್ತು ಸೇತುವೆ […]

Continue Reading

ಬೆಂಗಳೂರು | 15 ಸಾವಿರ ಶಿಕ್ಷಕರ ನೇಮಕಾತಿ : ಅಭ್ಯರ್ಥಿಗಳ ಗೊಂದಲ ನಿವಾರಣೆಗೆ FAQ ಪ್ರಕಟ

ಅಧಿಸೂಚನೆ ಹಾಗೂ FAQ ಓದಿದ ನಂತರವೂ ಯಾವುದೇ ಗೊಂದಲ ಅಥವಾ ಅನುಮಾನ ಬಗೆಹರಿಯದಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080-22483145, 080-22483140 ಅಥವಾ ಮೊಬೈಲ್ ನಂಬರ್ 9449588020 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಪಾರದರ್ಶಕ ನೇಮಕಾತಿಗೆ ಕ್ರಮ : ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡುವುದು, ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಡುವುದು ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ […]

Continue Reading

ಬೆಂಗಳೂರು | ನಾಗರಪಂಚಮಿ ಹಬ್ಬದ ಪ್ರಯುಕ್ತ ಕೂಲಿ ಕಾರ್ಮಿಕರ ಮಕ್ಕಳಿಗೆ ಹಾಲು, ಹಣ್ಣು, ಮೊಸರು, ವಿತರಣೆ

ಈ ಕಾರ್ಯಕ್ರಮವನ್ನು ಆಯೋಜಿಸಿದ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ರವರು ಹಾಲು, ಮೊಸರು, ಹಣ್ಣನ್ನು ಮಕ್ಕಳಿಗೆ ವಿತರಿಸಿದ್ದ ನಂತರ ಮಕ್ಕಳ ಮುಖದಲ್ಲಿ ಮೂಡುವ ಮಂದಹಾಸ ವರ್ಣಿಸಲಸಾಧ್ಯ ಎಂದು ಹೇಳಿದರು, ಹಾಗೂ ಮೂಡನಂಬಿಕೆಗಳಿಂದ ಜನರು ದೂರವಿದ್ದು ವಿಜ್ಞಾನದಡೆಗೆ ಹೆಜ್ಜೆ ಹಾಕಬೇಕೆಂದು ತಿಳಿಸಿದರು. ನಾಗರಪಂಚಮಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವುದು ಸಂತೋಷವಾಗಿದೆ ಎಂದು ಕಾನೂನು ಮಾಪನ ಶಾಸ್ತ್ರದ ವಿಶ್ರಾಂತ ಅಧಿಕಾರಿ ಜಿ. ಏನ್ ನರಸಿಂಹಮೂರ್ತಿಯವರು ಹರ್ಷ ವ್ಯಕ್ತಪಡಿಸಿದರು.

Continue Reading

ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ.! : ಅರೋಗ್ಯ ಸಚಿವರೇ ರಾಜ್ಯದಲ್ಲಿ ಮದ್ಯ ನಿಷೇಧಿಸಿ, ಜನರ ಅರೋಗ್ಯ ಕಾಪಾಡಿ : ನೈಜ ಹೋರಾಟಗಾರರ ವೇದಿಕೆ ಮನವಿ

ತಮ್ಮ ಕಾರ್ಯಚಟುವಟಿಕೆಗಳಿಗೆ ನೈಜ ಹೋರಾಟಗಾರರ ವೇದಿಕೆಯು ತಮ್ಮನ್ನು ಅಭಿನಂದಿಸುತ್ತದೆ. ಮಾಧ್ಯಮಗಳಲ್ಲಿ ತಾವು ಮಾತನಾಡುತ್ತಾ ಪೆಪ್ಸಿ ಅಂತ ಪಾನಿಯಗಳನ್ನು ಮಕ್ಕಳಿಗೆ ಕೊಡುವುದರಿಂದ ಅವರ ಆರೋಗ್ಯ ಹಾನಿಯಾಗುವುದರ ಬಗ್ಗೆ ಕಾಳಜಿವಹಿಸಿದ್ದೀರಿ. ಶುದ್ಧ ಆಹಾರವನ್ನು ಮಕ್ಕಳಿಗೆ ಕೊಡುವಂತೆ ಪೋಷಕರಿಗೆ ಕಿವಿಮಾತನ್ನು ಸಹ ಹೇಳಿದ್ದೀರಿ. ಇದು ಕೂಡ ಅತ್ಯಂತ ಶ್ಲಾಘನೀಯ ಎಂದಿದ್ದಾರೆ. ಆದರೆ ಸರ್ಕಾರದ ದ್ವಂದ್ವ ನೀತಿಗಳು ಜನರ ಕಣ್ಣಿಗೆರಚ್ಚುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು “ಮಧ್ಯದ ಬಾಟಲಿಯ ಮೇಲೆ ಮುದ್ರಿಸಿ” ರಾಜ್ಯದ ನಾಗರಿಕರಿಗೆ ಮಾರಾಟ ಮಾಡುತ್ತಿರುವ […]

Continue Reading