ಶಿವಮೊಗ್ಗ | ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಜೆಡಿಎಸ್ ಕಾರ್ಯಕರ್ತರು ಶ್ರದ್ಧಾಂಜಲಿ

ಸಭೆಯಲ್ಲಿ ಜಿಲ್ಲಾ ಮತ್ತು ನಗರ ಘಟಕದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು. ಶಿವಮೊಗ್ಗ ನಗರ ಜೆಡಿಎಸ್ ನಿಂದ ಇಂದು ಮಾತೃಶ್ರೀ ಅಮ್ಮ ಚೆನ್ನಮ್ಮದೇವೇಗೌಡರವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಮಾತೃಶ್ರೀ ಅಮ್ಮ ಚೆನ್ನಮ್ಮನವರು ನಮ್ಮನ್ನು ಅಗಲಿದ್ದರೂ, ಅವರ ಪ್ರೀತಿ, ಮಮತೆ ಮತ್ತು ಆದರ್ಶಗಳು ಸದಾ ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತವೆ.ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವ ಮೂಲಕ ನಗರ ಜೆಡಿಎಸ್ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಹಾಗೂ ಕುಟುಂಬ ಸದಸ್ಯರು […]

Continue Reading

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಹೃದಯಾಘಾತದಿಂದ ವಿಧಿವಶ

ಹೆಚ್‌ಡಿ ದೇವೇಗೌಡ ಮತ್ತು ಚೆನ್ನಮ್ಮಾ ದಂಪತಿಗೆ ಆರು ಮಕ್ಕಳಿದ್ದು, ರಾಜಕೀಯ-ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್‌ಡಿ ರೇವಣ್ಣ (ಹಿರಿಯ ಮಗ) ಹೆಚ್‌ಡಿ ಕುಮಾರಸ್ವಾಮಿ (ಎರಡನೇ ಮಗ) ಕೇಂದ್ರ ಸಚಿವ ಹೆಚ್‌ಡಿ ಬಾಲಕೃಷ್ಣ (ಮೂರನೇ ಮಗ) ಉದ್ಯಮಿ ಹೆಚ್‌ಡಿ ರಮೇಶ್ (ನಾಲ್ಕನೇ ಮಗ) ವೈದ್ಯಕೀಯ ವಿಭಾಗ ಹೆಚ್‌ಡಿ ಅನುಸೂಯಾ (ಮಗಳು) ಹೆಚ್‌ಡಿ ಶೈಲಜಾ (ಮಗಳು).

Continue Reading

ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗಾಗಿ ಪ್ರಧಾನಿ ಮುಂದೆ ಎಚ್.ಡಿ. ದೇವೇಗೌಡರು ಪ್ರತಿಭಟನೆ ನಡೆಸಲಿ : ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಸಲಹೆ

ಹಾಸನ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ದೇವೇಗೌಡರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪುತ್ರ ವ್ಯಾಮೋಹ ಬಿಟ್ಟು ರಾಜ್ಯದ ಜನರ ಸಮಸ್ಯೆಗಳ ಕಡೆ ಗಮನಹರಿಸಬೇಕು, ಕುಮಾರಸ್ವಾಮಿ, ಮತ್ತು ನಿಖಿಲ್ ಅವರನ್ನು ಮೆಚ್ಚಿಸಲು ಧರಣಿ ಕೂರಬೇಡಿ ಎಂದು ಸಲಹೆ ನೀಡಿದರು.

Continue Reading

ರಾಜ್ಯಸಭಾ ಚುನಾವಣೆ : ಎನ್‌ಡಿಎ ಅಭ್ಯರ್ಥಿಯಾಗಿ ಮರುನಾಮನಿರ್ದೇಶನವಾಗುತ್ತಾರೆಯೇ ಎಚ್.ಡಿ ದೇವೇಗೌಡರು?

ಮೈತ್ರಿ ಭವಿಷ್ಯಕ್ಕೆ ದೇವೇಗೌಡರ ಸ್ಪರ್ಧೆ ನಿರ್ಣಾಯಕ ಹಿಂದಿನ ಚುನಾವಣೆಯಲ್ಲಿ ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದರು. ಆದರೆ, 2024ರ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ರಾಜಕೀಯ ಸಮೀಕರಣಗಳು ಸಂಪೂರ್ಣ ಬದಲಾಗಿವೆ. ರಾಜಕೀಯ ವಿಶ್ಲೇಷಕರ ಪ್ರಕಾರ, 93 ವರ್ಷದ ದೇವೇಗೌಡರು ಮತ್ತೊಮ್ಮೆ ಕಣಕ್ಕಿಳಿದರೆ ಅದು ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಡಿಯ ಐದು ಮಹಾನಗರ ಪಾಲಿಕೆಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ 2028 ರ ವಿಧಾನಸಭಾ ಚುನಾವಣೆಗಳವರೆಗೆ ಉಭಯ ಪಕ್ಷಗಳ […]

Continue Reading

ಬೆಂಗಳೂರು | 94ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡರು ; ಮಾಜಿ ಪ್ರಧಾನಿಯವರಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ

ಭೇಟಿಯ ಸಂದರ್ಭದಲ್ಲಿ ಪಕ್ಷದ ಸಂಘಟನೆ, ಮುಂದಿನ ರಾಜಕೀಯ ಕಾರ್ಯಕ್ರಮಗಳು ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಜೆಡಿಎಸ್ ನಗರ ಅಧ್ಯಕ್ಷರಾದ ದೀಪಕ್ ಸಿಂಗ್ , ಪ್ರಮುಖ ಮುಖಂಡರಾದ ಗೋಪಿನಾಥ್ ಮೊದಲಿಯರ್ , ರಘು ಹಾಗೂ ಸಂಸದ Dr. C. N. ಮಂಜುನಾಥ್ ಉಪಸ್ಥಿತರಿದ್ದರು. ದೇವೇಗೌಡರ ದೀರ್ಘ ರಾಜಕೀಯ ಅನುಭವ, ರೈತರ ಪರ ಹೋರಾಟ ಮತ್ತು ಸರಳ ವ್ಯಕ್ತಿತ್ವವನ್ನು ಈ ಸಂದರ್ಭದಲ್ಲಿ ಹಲವು ನಾಯಕರು […]

Continue Reading

ಕಾಲಭೈರವನ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ– ಸಕ್ಕರೆ ನಾಡು ಮಧುರ ಮಂಡ್ಯ ಎಂದು ಕೊಂಡಾಡಿದ ‘ನಮೋ’

ಆದಿಚುಂಚನಗಿರಿ ಮಠ ಆಧ್ಯಾತ್ಮಿಕ ಪರಂಪರೆ ಹೊಂದಿದೆ. ಮಠವು ನೈತಿಕ ಮೌಲ್ಯಗಳಿಂದ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನಾಡಿದರು. ಕಾಲಭೈರನ ದರ್ಶನ ಪಡೆದುಕೊಂಡಿದ್ದೇನೆ. ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದ್ದೇನೆ. ನಿಮ್ಮೆಲ್ಲರ ದರ್ಶನ ಪಡೆದುಕೊಂಡಿದ್ದೇನೆ. ಶಬ್ದದಲ್ಲಿ ಈ ಭಾವವನ್ನು ಹೇಳಲು ಸಾಧ್ಯವಿಲ್ಲ. ಪ್ರತಿ ಸಲ ಕರ್ನಾಟಕಕ್ಕೆ ಬಂದಾಗ ಪ್ರೇರಣೆ ಸಿಗುತ್ತದೆ ಎಂದು ಸಂತಸ […]

Continue Reading