Tag: ತಮಿಳುನಾಡು
ತಮಿಳುನಾಡು | ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
“ನನ್ನದೇ ಆದ ಸ್ವತಂತ್ರ ರಾಜಕೀಯ ಮಾರ್ಗವನ್ನು ರೂಪಿಸಿಕೊಳ್ಳಲು ಬಯಸುತ್ತೇನೆ” ಎಂದು ಅವರು ಹೈಕಮಾಂಡ್‌ಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. 2020ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಅತ್ಯಂತ ಕಿರಿಯ ವಯಸ್ಸಿಗೆ ತಮಿಳುನಾಡು ಬಿಜೆಪಿ ಸಾರಥ್ಯ ವಹಿಸಿದ್ದ ಅಣ್ಣಾಮಲೈ ಮತ್ತು ಹೈಕಮಾಂಡ್ ನಡುವಿನ ಭಿನ್ನಾಭಿಪ್ರಾಯ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿತ್ತು. 2026ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಎಐಎಡಿಎಂಕೆ (AIADMK) ಜೊತೆ ಮೈತ್ರಿ ಪುನರುಜ್ಜೀವನಗೊಳಿಸಲು ಹೈಕಮಾಂಡ್ ಬಯಸಿತ್ತು. ಆದರೆ ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿ ಹಾಗೂ ಇವಿಆರ್, ಎಂಜಿಆರ್ ಮತ್ತು ಜಯಲಲಿತಾ ಅವರ ಮೇಲಿನ ರಾಜಕೀಯ ಟೀಕೆಗಳು […]
Continue Readingಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣದಲ್ಲೂ ಜೋಕ್ ಮಾಡಿ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿದ ಸಿಎಂ ವಿಜಯ್
ಇದರ ಬೆನ್ನಲ್ಲೇ, ಪ್ರಕರಣದ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲು ಒಬ್ಬರು ಮಹಿಳಾ ಐಜಿ (IG) ಅಧಿಕಾರಿ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, ಸುದ್ದಿಗೋಷ್ಠಿ ಆರಂಭವಾಗುವ ಮುನ್ನ ಈ ಮೂವರು ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯಿಂದ ಒಬ್ಬರಿಗೊಬ್ಬರು ಜೋಕ್ ಮಾಡುತ್ತಾ, ನಗುತ್ತಾ ಕಾಲ ಕಳೆದಿದ್ದಾರೆ. ವಿಶೇಷವಾಗಿ ಆ ಮಹಿಳಾ ಐಜಿ ಅಧಿಕಾರಿ, ಸಂತ್ರಸ್ತೆಯ ನೋವನ್ನು ಮರೆತು ನಗುನಗುತ್ತಾ ಮುಖದ ಮೇಲೆ ಯಾವುದೇ ಗಂಭೀರತೆ ಇಲ್ಲದೆ ವರ್ತಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ: ಈ ಅಧಿಕಾರಿಗಳು ನಗುತ್ತಿರುವ ದೃಶ್ಯಗಳು […]
Continue Readingವಿಶ್ವಾಸಮತ ಗೆದ್ದ ಸಿಎಂ ವಿಜಯ್ : ದಳಪತಿಗೆ 144 ಶಾಸಕರ ಬಲ
ವಿಜಯ್ ಸಿಎಂ ಆಗಿ ಪದಗ್ರಹಣ ಮಾಡಿದ ಮರು ದಿನ ಅಂದರೆ ಮೇ 11 ರಂದು ತಮಿಳುನಾಡಿನ 17ನೇ ವಿಧಾನಸಭೆಯ ಮೊದಲ ಅಧಿವೇಶನ ಕೂಡ ಆರಂಭವಾಗಿದೆ, ಅಧಿವೇಶನ ಆರಂಭವಾದ ಮೊದಲ ದಿನ ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ದಿನ, ಸ್ಪೀಕರ್ ಮತ್ತು ಉಪ ಸ್ಪೀಕರ್ ಆಯ್ಕೆಯೂ ನಡೆದಿದೆ.
Continue Reading“ಸನಾತನ ಧರ್ಮ ನಿರ್ಮೂಲನೆ ಮಾಡಬೇಕು” : ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಶಾಸಕ ಉದಯನಿಧಿ ಸ್ಟಾಲಿನ್..!
“ಅಲೆಕ್ಸಾಂಡರ್, ಘೋರಿ, ಗಜ್ನಿ, ಖಿಲ್ಜಿ, ಬ್ರಿಟಿಷರು, ಫ್ರೆಂಚರು ಮತ್ತು ಕಮ್ಯುನಿಸ್ಟರಿಗೂ ಸನಾತನ ಧರ್ಮವನ್ನು ಅಳಿಸಲು ಸಾಧ್ಯವಾಗಲಿಲ್ಲ… ಆದರೀಗ ತನ್ನ ಸ್ವಂತ ಕುಟುಂಬದವರನ್ನೇ ಈ ಬಗ್ಗೆ ಒಪ್ಪಿಸಲು ಸಾಧ್ಯವಾಗದ ವ್ಯಕ್ತಿಯೊಬ್ಬರು ಸನಾತನ ಧರ್ಮವನ್ನು ಅಳಿಸುವ ಮಾತನಾಡುತ್ತಿದ್ದಾರೆ!! ಭಾರತ ಮತ್ತು ಸನಾತನ ಧರ್ಮವು ಕಾಲದ ಪರೀಕ್ಷೆಗಳನ್ನು ಮತ್ತು ತಲೆಮಾರುಗಳನ್ನು ಮೀರಿ ಗಟ್ಟಿಯಾಗಿ ನಿಂತಿದೆ” ಎಂದು ಹೇಳಿದ್ದಾರೆ. ಬಿಎಲ್ ಸಂತೋಷ್ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ‘ಸ್ವಂತ ಕುಟುಂಬದವರನ್ನೇ ಒಪ್ಪಿಸಲು ಸಾಧ್ಯವಾಗದ ವ್ಯಕ್ತಿ’ ಎಂಬ ಸಾಲು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು […]
Continue Readingತಮಿಳುನಾಡಿಗೆ ದಳಪತಿಯೇ ‘ಅಧಿಪತಿ’, ; ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ
ಇನ್ನು ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.
Continue Readingಅಗತ್ಯ ಸಂಖ್ಯಾಬಲದೊಂದಿಗೆ ಭೇಟಿ ಮಾಡಲು ಬನ್ನಿ : ಟಿವಿಕೆ ವಿಜಯ್‌ಗೆ ತಮಿಳುನಾಡು ರಾಜ್ಯಪಾಲರ ಸಂದೇಶ!
ಇನ್ನು ಹೊಸ ಸರ್ಕಾರ ರಚನೆಯ ಹಾದಿಯಲ್ಲಿ ತನ್ನದೇ ಆದ ಕರ್ತವ್ಯಗಳಲ್ಲಿ ನಿರತವಾಗಿರುವ ತಮಿಳುನಾಡು ಲೋಕಭವನ (ಈ ಹಿಂದೆ ರಾಜಭವನ), ಸದ್ಯಕ್ಕೆ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದಿಂದ ರಾಜೀನಾಮೆ ಪಡೆದಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಲೋಕಭವನ ತಿಳಿಸಿದೆ. ತಮಿಳುನಾಡಿನಲ್ಲಿ ಟಿವಿಕೆ ಭರ್ಜರಿ ಜಯ ಇತಿಹಾಸ ನಿರ್ಮಿಸಿದೆಯಾದರೂ, ವಿಜಯ್ ಬಹುಮತಕ್ಕೆ ಅನ್ಯ ಪಕ್ಷಗಳ ಮೇಲೆ ಅವಲಂಬಿತರಾಗಿದ್ದಾರೆ. ಐದು ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಈಗಾಗಲೇ […]
Continue Readingತಮಿಳುನಾಡು ಸಿಎಂಗೆ ಬಿಗ್ ಶಾಕ್ ಕೊಟ್ಟು ಸೋಲುಣಿಸಿದ ಟಿವಿಕೆ ಅಭ್ಯರ್ಥಿ ವಿಎಸ್ ಬಾಬು
ರಾಜ್ಯದ ದೊಡ್ಡ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳಿಗೆ ಹೊಸ ಪಕ್ಷವಾದ ನಟ ಜೋಶೆಫ್ ವಿಜಯ್ ಅವರ ಟಿವಿಕೆ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಇತಿಹಾಸ ಸೃಷ್ಟಿಸುವತ್ತಾ ಹೆಜ್ಜೆಯನ್ನಿಟ್ಟಿದೆ. ಈಗಾಗಲೆ ಟಿವಿಕೆ ಬರೋಬ್ಬರಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ಲಗ್ಗೆ ಇಟ್ಟಿದೆ. ವಿಜಯ್ ಅಬ್ಬರಕ್ಕೆ ಡಿಎಂಕೆ ಅಲ್ಲೋಲ ಕಲ್ಲೋಲವಾಗಿದ್ದು, ಸ್ವತಃ ತಮಿಳುನಾಡು ಹಾಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಸೋಲು ಕಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆಗೆ ದೊಡ್ಡ ಆಘಾತವೆಂದರೆ ಸುಮಾರು 15 […]
Continue Readingತಮಿಳುನಾಡನ್ನೇ ಬೆಚ್ಚಿಬೀಳಿಸಿದ್ದ ಲಾಕಪ್ ಡೆತ್ ಪ್ರಕರಣದ ಪ್ರಮುಖ ಸಾಕ್ಷಿ ‘ರೇವತಿ’ ಎಂಬ ಧೀಶಕ್ತಿ
ಹೀಗೆ ತನ್ನ ಕ್ರೂರಿ ಸಹೋದ್ಯೋಗಿಗಳ ವಿರುದ್ಧ ಧೈರ್ಯವಾಗಿ ನಿಂತು ಸಾಕ್ಷಿ ಹೇಳಿದವರೇ ಮಹಿಳಾ ಕಾನ್ಸ್‌ಟೇಬಲ್ ರೇವತಿ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ರೇವತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದಲ್ಲದೇ ಪ್ರಮುಖ ಸಾಕ್ಷಿಯಾಗಿದ್ದರು. ಅವರೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್ ಠಾಣೆಯಲ್ಲಿದ್ದ ರಕ್ತದ ಕಲೆಗಳು, ರಕ್ತದ ಕಲೆಗಳನ್ನು ಹೊಂದಿದ್ದ ಪೊಲೀಸ್ ಲಾಠಿಗಳು, ಹಾಗೂ ಟೇಬಲ್‌ಗಳನ್ನು ಸಾಕ್ಷ್ಯ ನಾಶವಾಗುವ ಮೊದಲೇ ಜಪ್ತಿ ಮಾಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. 9 […]
Continue Readingಅಪ್ಪ- ಮಗ ಲಾಕಪ್ ಡೆತ್ : 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಕಸ್ಟಡಿ ಸಾವಿನ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳಾದ ಒಂಬತ್ತು ಪೊಲೀಸರಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಇದೊಂದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ‘ಭವಿಷ್ಯದಲ್ಲಿ ಇಂತಹ ಕಸ್ಟಡಿ ಸಾವುಗಳು ಮರುಕಳಿಸಬಾರದು, ಅದಕ್ಕೆ ಈ ಶಿಕ್ಷೆ ಒಂದು ಎಚ್ಚರಿಕೆಯಾಗಬೇಕು ಎಂದು ಕೋರ್ಟ್ ಹೇಳಿದೆ. ಜೀವಾವಧಿ ಶಿಕ್ಷೆ ಸಾಕಾಗಾವುದಿಲ್ಲಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ, ಎಲ್ಲರೂ ಸಮಾನ ಅಪರಾಧಿಗಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. […]
Continue Reading




