ಶಿವಮೊಗ್ಗ | ಯುವ ಕಾಂಗ್ರೆಸ್ ಪ್ರತಿಭಟನೆ ; ಸಂಸದರ ಮನೆ ಮುತ್ತಿಗೆಗೆ ಯತ್ನ..!
ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಂತರ ಪೊಲೀಸರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಕರೆದೊಯ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮೆರಿಟ್ ಆಧಾರದ ಮೇಲೆ ಜಾರಿಗೆ ತಂದ ನೀಟ್ ವ್ಯವಸ್ಥೆಯು ಇಂದು ಕೋಚಿಂಗ್ ಮಾಫಿಯಾ ಹಾಗೂ ಅಕ್ರಮಗಳ ಕೂಪವಾಗಿ ಬದಲಾಗಿದೆ ಎಂದು ನಾಯಕರು ಆರೋಪಿಸಿದರು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪೋಷಕರ […]
Continue Readingಅಡುಗೆ ಎಣ್ಣೆ ದರ ಇಳಿಕೆ ; ಅಕ್ಕಿ ದರ ಏರಿಕೆ
ಒಂದು ಟಿನ್ ಅಡುಗೆ ಎಣ್ಣೆಯಲ್ಲಿ 30-40 ರೂಪಾಯಿವರೆಗೂ ಇಳಿಕೆಯಾಗಿದೆ. ಅಡುಗೆ ಎಣ್ಣೆಯ ಆಮದು ಪ್ರಮಾಣ ಸುಧಾರಣೆ, ಪೂರೈಕೆ ಹೆಚ್ಚಳ ಹಾಗೂ ಮೋದಿ ಕರೆಯೂ ಈ ದರ ಇಳಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಅಡುಗೆ ಎಣ್ಣೆ ದರಅಡುಗೆ ಎಣ್ಣೆ – ಹಳೆಯ ದರ (1 ಲೀ.) – ಹೊಸ ದರ (1 ಲೀ.)ಫಾಮ್ ಆಯಿಲ್ – 143 ರೂ. – 141 ರೂ.ಸನ್ ಪ್ಯೂರ್ – 170 ರೂ. – 167 ರೂ.ಕಡಲೆಕಾಯಿ – 190 ರೂ. […]
Continue Readingಕುಂದಾಪುರದಲ್ಲಿ ಓದುತ್ತಿರುವ ಶಿವಮೊಗ್ಗದ ವಿದ್ಯಾರ್ಥಿನಿಯಿಂದ Hydrovid ಗಾಂಜಾ ವಶ
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿತೆ ಚೆನ್ನೈನಿಂದ ಮಾದಕ ವಸ್ತುವನ್ನು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣಗಳಿಸುವ ಉದ್ದೇಶ ಹೊಂದಿದ್ದಳು ಎಂಬುದು ತಿಳಿದುಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 32/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಮತ್ತು 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.ಆರೋಪಿತೆಯ ವಿರುದ್ಧ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿವೆ
Continue Readingತೀರ್ಥಹಳ್ಳಿ| ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ
ಕಳುವಾದ ಒಡವೆಗಳ ಒಟ್ಟು ತೂಕ 182 ಗ್ರಾಂ ಆಗಿದ್ದು, ಇದರ ಬೆಲೆ 23,66,000 ರೂಪಾಯಿ. ಎಂದು ಅಂದಾಜಿಸಲಾಗಿದೆ. ಮನೆಯ ಬಾಗಿಲು ಅಥವಾ ಬೀಗ ಮುರಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹೀಗಾಗಿ ಮನೆಯಲ್ಲಿ ಗಾರೆಕೆಲಸ ಮಾಡುತ್ತಿದ್ದ ಮೇಲೆ ಸಂಶಯ ವ್ಯಕ್ತಪಡಿಸಿ ದೂರುದಾರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
Continue Readingವಿಶ್ವಾಸಮತ ಗೆದ್ದ ಸಿಎಂ ವಿಜಯ್ : ದಳಪತಿಗೆ 144 ಶಾಸಕರ ಬಲ
ವಿಜಯ್ ಸಿಎಂ ಆಗಿ ಪದಗ್ರಹಣ ಮಾಡಿದ ಮರು ದಿನ ಅಂದರೆ ಮೇ 11 ರಂದು ತಮಿಳುನಾಡಿನ 17ನೇ ವಿಧಾನಸಭೆಯ ಮೊದಲ ಅಧಿವೇಶನ ಕೂಡ ಆರಂಭವಾಗಿದೆ, ಅಧಿವೇಶನ ಆರಂಭವಾದ ಮೊದಲ ದಿನ ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ದಿನ, ಸ್ಪೀಕರ್ ಮತ್ತು ಉಪ ಸ್ಪೀಕರ್ ಆಯ್ಕೆಯೂ ನಡೆದಿದೆ.
Continue Readingಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ!
ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಬಂದಿದ್ದ ಅವರು ಕೆಲವು ಸಿನಿಮಾಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಮತ್ತು ಟಿವಿ ಎರಡರಲ್ಲೂ ತೊಡಗಿಕೊಂಡಿದ್ದರು. 2005ರಲ್ಲಿ ತೆರೆ ಕಂಡಿದ್ದ ‘ಬಾಯ್ ಫ್ರೆಂಡ್’ ಸಿನಿಮಾದಲ್ಲಿ ನಾಯಕ ನಟರಾಗಿ ಬಣ್ಣಲೋಕ ಪ್ರವೇಶಿಸಿದ್ದರು. ಇನ್ನೂ ಅಪ್ಪು ಅಭಿನಯನದ ‘ಮಿಲನ’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
Continue Readingಶಿವಮೊಗ್ಗ | ದೇಶದ ಬೊಕ್ಕಸ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಗೆ ಮೋದಿಯವರ ರಾಷ್ಟ್ರಭಕ್ತಿಯ ಮಿತವ್ಯಯದ ಪಾಠ ಅರ್ಥವಾಗದು : ಶಾಸಕ ಎಸ್. ಎನ್. ಚನ್ನಬಸಪ್ಪ
2012ರಲ್ಲಿ ದೇಶದ ಆರ್ಥಿಕತೆ ಹದಗೆಟ್ಟಾಗ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇದೇ ರೀತಿ ದೇಶದ ಜನರಲ್ಲಿ ‘ಚಿನ್ನ ಖರೀದಿಸುವುದನ್ನು ನಿಲ್ಲಿಸಿ’ ಎಂದು ಬಹಿರಂಗವಾಗಿ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಹೀಗಳೆದಿದ್ದರು. ಅಂದು ಅವರು ಮಾಡಿದ ಇಂತಹ ಆರ್ಥಿಕ ಅಶಿಸ್ತಿನ ಪರಿಣಾಮವಾಗಿ ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ (Fragile Five) ಪಟ್ಟಿಗೆ ಸೇರಿತ್ತು ಎಂಬ […]
Continue Readingಮದರಸಗಳಲ್ಲಿ ಕನ್ನಡ- ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮುಸ್ಲಿಂ ಬಾಂಧವ್ಯ ವೇದಿಕೆ
ವೇದಿಕೆ ನೀಡಿದ ಸಲಹೆಗಳು ಸರಳವಾಗಿದ್ದು ಅನುಷ್ಠಾನಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟ ಬಿಳಿಮಲೆಯವರು, ತಮ್ಮ ಅವಧಿ ಮುಗಿಯುವುದರ ಒಳಗೆ ರಾಜ್ಯಾದ್ಯಂತ ಜಾರಿ ಮಾಡಲು ಗರಿಷ್ಠ ಪ್ರಯತ್ನ ಪಡುವುದಾಗಿ ಭರವಸೆ ಇತ್ತರು. ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಡಾ. ಮುಹಮ್ಮದ್ ಶಫಿ ಮುಲ್ಲಾ, ಅಧ್ಯಕ್ಷ ಝಾಕಿರ್ ಹುಸೇನ್ ಉಚ್ಚಿಲ್ಲ, ಕಾರ್ಯದರ್ಶಿ ರಹಮತ್ ದಾವಣಗೆರೆ, ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಕೋಟ ಇಬ್ರಾಹಿಂ ಸಾಹೇಬ್, ಮೌಲಾನಾ ಅಬ್ದುಲ್ ಹಫೀಜ್ ಕಾಶ್ಮೀ, ದಸ್ತಗೀರ್ ಕಲ್ಲಹಳ್ಳಿ, ಅಸ್ಲಾಂ ಹೈಕಾಡಿ, ಅಶ್ರಫ್ ಕುಂದಾಪುರ, ಅಬ್ದುಲ್ ರೌಫ್, […]
Continue Reading




