ರಾಜ್ಯ ಬಜೆಟ್ Highlights

ಇಂದಿರಾ ಕಿಟ್ ವಿತರಣೆಗೆ 6,200 ಕೋಟಿ ಮೀಸಲು. ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಇಂದಿರಾ ಕಿಟ್ ವಿತರಣೆಗೆ 2026- 27ನೇ ಸಾಲಿನಲ್ಲಿ 6,200 ಕೋಟಿ ಮೀಸಲು ಇಡಲಾಗಿದೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 ಬಿ ಆರ್ […]

Continue Reading

ಸಿಎಂ ಸಿದ್ದರಾಮಯ್ಯರಿಂದ 4.48 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

ಹೆಚ್ಚುತ್ತಿರುವ ಖರ್ಚು ಬದ್ಧತೆಗಳ ನಡುವೆ ಆದಾಯ ಕೊರತೆಯನ್ನು ಎದುರಿಸುತ್ತಿರುವ ಅವರು, ಹಣಕಾಸಿನ ಶಿಸ್ತನ್ನು ಕಾಯ್ದುಕೊಳ್ಳುವುದರ ಜೊತೆಗೆ ರಾಜ್ಯದ ಹಣಕಾಸು ನಿರ್ವಹಣೆಯ ಸವಾಲನ್ನು ಎದುರಿಸುತ್ತಿದ್ದಾರೆ.ಸಂಪನ್ಮೂಲ ಕ್ರೋಢೀಕರಣ ಕ್ರಮಗಳನ್ನು ಮುಖ್ಯಮಂತ್ರಿಗಳು ಹುಡುಕುವ ನಿರೀಕ್ಷೆಯಿರುವುದರಿಂದ, ತೆರಿಗೆಗಳಲ್ಲಿ ಹೆಚ್ಚಳವಾಗಬಹುದು ಎಂಬ ಊಹಾಪೋಹಗಳಿವೆ. ‘ಖಾತರಿ’ ಯೋಜನೆಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸಲು ಒತ್ತಾಯವಿದ್ದು, 5 ಯೋಜನೆಗಳಿಗೆ ವಾರ್ಷಿಕ ಖರ್ಚು ರೂ. 50,000 ಕೋಟಿ ಮೀರಿದೆ. 2025-26 ರಲ್ಲಿ, ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ರೂ. 51,034 ಕೋಟಿ ಹಂಚಿಕೆ ಮಾಡಿತ್ತು.ಜಿಎಸ್‌ಟಿ ದರ ಸುಧಾರಣೆ ಮುಂತಾದ ಅಂಶಗಳಿಂದಾಗಿ ಪ್ರಸ್ತುತ […]

Continue Reading

ಹೊಸನಗರ | ಗುಂಡಿ ತೆಗೆಯುವಾಗ ಬಿದ್ದ ಬಂಡೆ ; ಯುವಕ ಸಾವು

ಈ ಸಮಯದಲ್ಲಿ ಮೇಲ್ಭಾಗದಲ್ಲಿದ್ದ ದೊಡ್ಡ ಕಲ್ಲು ಬಂಡೆಯೊಂದು ಏಕಾಏಕಿ ಜಾರಿ ಅವರ ಮೇಲೆ ಬಿದ್ದಿದೆ. ಬಾರೀ ಗಾತ್ರದ ಬಂಡೆಯ ಅಡಿಗೆ ಸಿಲುಕಿದ ಸತೀಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Continue Reading

ಅಡುಗೆ ಎಣ್ಣೆ ಬೆಲೆ ಧಿಡೀರ್ ಏರಿಕೆ

ಹಲವಾರು ಪ್ರಮುಖ ಅಡುಗೆ ಎಣ್ಣೆ ಬ್ರಾಂಡ್‌ಗಳು ತಮ್ಮ ಬೆಲೆಗಳನ್ನು ಪರಿಷ್ಕರಿಸಿವೆ: ಚಿನ್ನ ವಿಜೇತ: ಕಳೆದ ವಾರ ಒಂದು ಲೀಟರ್ ಬೆಲೆ ₹161 ಇತ್ತು. ಈ ವಾರ ಅದು ₹165ಕ್ಕೆ ಏರಿಕೆಯಾಗಿದೆ.ಸನ್‌ಪ್ಯೂರ್: ಕಳೆದ ವಾರ ಲೀಟರ್‌ಗೆ ₹161 ರಿಂದ ಈ ವಾರ ₹165ಕ್ಕೆ ಏರಿಕೆಯಾಗಿದೆ.ಅದೃಷ್ಟ: ದರ ಲೀಟರ್‌ಗೆ ₹152 ರಿಂದ ₹157ಕ್ಕೆ ಏರಿಕೆಯಾಗಿದೆ. ಈ ಬ್ರಾಂಡ್‌ಗಳ ಹೊರತಾಗಿ, ಮಾರುಕಟ್ಟೆಯಲ್ಲಿರುವ ಇತರ ಪ್ರಮುಖ ಅಡುಗೆ ಎಣ್ಣೆ ಉತ್ಪನ್ನಗಳು ಸಹ ಲೀಟರ್‌ಗೆ ಸರಾಸರಿ ₹4 ರಿಂದ ₹5 ರಷ್ಟು ಹೆಚ್ಚಳವನ್ನು ದಾಖಲಿಸಿವೆ. […]

Continue Reading

ಬಳ್ಳಾರಿ | ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ಸಹ, ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷ (2025-25)ಸೇವೆ ಸಲ್ಲಿಸುತ್ತಿರುವ ಮತ್ತು ಸೇವಾ ಹಿರಿತನವುಳ್ಳ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ವರ್ಷವೂ (2026-27) ಮುಂದುವರಿಸಬೇಕು. ಸರ್ಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನವನ್ನು ರೂ.14,000 ಗಳಿಂದ ರೂ.30,000 ಹೆಚ್ಚಿಸಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಈ ಶೈಕ್ಷಣಿಕ ವರ್ಷದ ಮಾರ್ಚ್ ಅಂತ್ಯದವರೆಗೂ […]

Continue Reading

ಬೆಂಗಳೂರು | ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದಿಂದ ಸುದೀರ್ಘ ಸಭೆ

ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕುರಿತು :- ಈ ವಿಚಾರಕ್ಕೆ ಸಂಬಂಧಿಸಿದಂತೆ 1967ರಿಂದ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬೋಧಕೇತರ ನೌಕರರಿಗೆ ಅನ್ವಯವಾಗುವಂತೆ ಪ್ರತ್ಯೇಕವಾಗಿ ಪರಿಷ್ಕರಿಸುವಂತೆ ಕೋರಿಕೊಂಡ ಮನವಿಯ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸ್ಪಂದಿಸುವುದರೊಂದಿಗೆ ಕರಡನ್ನು ಅಂತಿಮಗೊಳಿಸುತ್ತಿದ್ದು, ಸದ್ಯದಲ್ಲಿಯೇ ಪ್ರಕಟ ಮಾಡುವುದಾಗಿ ತಿಳಿಸಿದರು. ಈ ಮಧ್ಯೆ ಕೆಲವು ಹುದ್ದೆಗಳಲ್ಲಿ ಗೊಂದಲಗಳ ಬಗ್ಗೆ ಮತ್ತು ಇಲಾಖೆಗೆ 2015ರಲ್ಲಿ ಮಂಜೂರಾಗಿರುವ ಪ್ರಥಮ ದರ್ಜೆ ಲೆಕ್ಕಸಹಾಯಕ ಹಾಗೂ […]

Continue Reading

ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ

ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಹಾಗೂ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಇದೇ ಪರದೆಗಳ ಮೂಲಕ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ. ಇದರ ಮೂಲಕ ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿಯೇ ಈ ಮಹತ್ವದ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವನ್ನು ಪಡೆಯಲಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಸ್ ನಿಲ್ದಾಣಗಳ ಮೂಲಕ ಜನಸಾಮಾನ್ಯರಿಗೆ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ತಲುಪಿಸುವ ಪ್ರಯತ್ನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೈಗೊಂಡಿದೆ. ಸಾರ್ವಜನಿಕರು ಈ ನೇರ ಪ್ರಸಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ […]

Continue Reading

ಶಿವಮೊಗ್ಗ | SSLC ವಿದ್ಯಾರ್ಥಿ ಹತ್ಯೆ ಪ್ರಕರಣ ; ಎನ್. ಐ.ಎ ತನಿಖೆಗೆ ಒಪ್ಪಿಸಿ : ಶಾಸಕ ಚನ್ನಬಸಪ್ಪ ಅಗ್ರಹ

ಕೊಲೆ ಮಾಡಿದರೂ ಅಪ್ರಾಪ್ತ ಎಂಬ ಕಾರಣಕ್ಕೆ ಆರೋಪಿಗಳನ್ನು ಸುಲಭವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ಹಿಂದೆ ಶಿವಮೊಗ್ಗದಲ್ಲಿ ಪಿ.ಎಫ್.ಐ ನಿಷೇಧವಾಗಿದ್ದರೂ, ಅದರ ಚಟುವಟಿಕೆಗಳು ತೆರೆಯ ಮರೆಯಲ್ಲಿ ನಡೆಯುತ್ತಿವೆ. ಹಿಂದೂ ಮುಖಂಡರ ಹತ್ಯೆ ಮತ್ತು ಕಲ್ಲು ತೂರಾಟದಂತಹ ಪ್ರಕರಣಗಳಲ್ಲಿ ಅಪ್ರಾಪ್ತರನ್ನು ಕೋಮು ಪ್ರಚೋದನೆ ನೀಡಿ ಬಳಸಿಕೊಳ್ಳುವವರ ವಿರುದ್ಧ ಕಠಿಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ರಾಜ್ಯ ಬಜೆಟ್ ಕುರಿತು ಮಾತನಾಡಿದ ಚನ್ನಬಸಪ್ಪ, ಈ ಸರ್ಕಾರದ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆಯಿಲ್ಲ. ನಿರೀಕ್ಷೆ ಇಟ್ಟುಕೊಂಡು ನಿರಾಸೆಗೊಳ್ಳುವ […]

Continue Reading

ಶಿವಮೊಗ್ಗ | ಇನ್ಸ್ಪೆಕ್ಟರ್ ನಾರಾಯಣ ಮಧುಗಿರಿ ನೇತೃತ್ವದಲ್ಲಿ ದಾಳಿ ; ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ

ಈತ ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ, ಎರಡನೇ ಆರೋಪಿ ವಸೀಂ ಅಕ್ರಂ ಅಲಿಯಾಸ್ ಸೈಲೆಂಟ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಬಂಧಿತ ಆರೋಪಿ ಅಜರ್​​​ನ ಮೇಲೆ ಈ ಹಿಂದೆ ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ (Section 307), ದರೋಡೆ ಸಂಚು, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

Continue Reading

ಬಿಹಾರ | ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ ; ಮುಖ್ಯಮಂತ್ರಿ ಸ್ಥಾನ ಬಿಜೆಪಿ ಪಾಲಗಲಿದೆಯೇ?

ಆದಾಗ್ಯೂ, ನಿತೀಶ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮತ್ತು ರಾಜ್ಯಸಭೆಗೆ ನಿರ್ಗಮಿಸಲು ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ನಿತೀಶ್ ಕುಮಾರ್ ಈ ಹಿಂದೆ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಮತ್ತು ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2015ರಿಂದ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್, ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದಾರೆ. 2025ರ ಚುನಾವಣೆಯ ನಂತರ, NDA ಮಿತ್ರ ಪಕ್ಷವು ಮುಖ್ಯಮಂತ್ರಿ ಹುದ್ದೆಯನ್ನು ಗೆದ್ದಿತು. ಆದರೆ ನಿತೀಶ್ ಕುಮಾರ್ ಹಲವಾರು ಪ್ರಮುಖ ಖಾತೆಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಯಿತು. ಸುಮಾರು ಎರಡು ದಶಕಗಳ ಕಾಲ ಅವರು ಹೊಂದಿದ್ದ […]

Continue Reading