ಬೆಂಗಳೂರಿನ ಸರ್ಕಾರಿ ಶಾಲೆ ಸಮಯ ಬದಲಾವಣೆ ಸಾಧ್ಯತೆ
ಬದಲಾವಣೆಗೆ ಕಾರಣ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ಗಳಲ್ಲಿ ಶಾಲಾ ವಾಹನಗಳು ರಸ್ತೆಗಿಳಿಯುವುದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕಚೇರಿಗಳಿಗೆ ಹೋಗುವವರ ಸಮಯ ಮತ್ತು ಶಾಲಾ ಸಮಯ ಪರಸ್ಪರ ಮುಖಾಮುಖಿಯಾಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗಾಗಿ, ಶಾಲಾ ಸಮಯವನ್ನು 30 ನಿಮಿಷಗಳಿಂದ 1 ಗಂಟೆಯವರೆಗೆ ಬದಲಾಯಿಸುವ (ಮುಂದೂಡುವ ಅಥವಾ ಮುಂಚಿತವಾಗಿ ಆರಂಭಿಸುವ) ಸಾಧ್ಯತೆಗಳಿವೆ.ಇದಕ್ಕೂ ಮುನ್ನ ಸದ್ಯ ಬೆಂಗಳೂರಿನ ಸರ್ಕಾರಿ ಶಾಲೆಗಳು ಬೆಳಗ್ಗೆ 10:30 ರಿಂದ ಸಂಜೆ 4:30 ರವರೆಗೆ ನಡೆಯುತ್ತಿವೆ. ಟ್ರಾಫಿಕ್ನಿಂದಾಗಿ ತಡವಾಗುತ್ತಿರುವುದರಿಂದ ಈ ಸಮಯವನ್ನು […]
Continue Reading“ಶಿವಮೊಗ್ಗ ಜಿಲ್ಲೆಯ ಮನೆ-ಮನಗಳಲ್ಲಿ ಗೌರಿ-ಗಣೇಶ ಹಬ್ಬವು ಮತ್ತಷ್ಟು ಸಂಭ್ರಮ, ಶಾಂತಿ, ಸಮೃದ್ಧಿಗಳನ್ನು ತರಲಿ” : ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ ಸೇರಿದಂತೆ ಮಲೆನಾಡಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ, ಭಕ್ತಿ-ಭಾವದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಕ್ಕೂ ನನ್ನ ಭಕ್ತಿಪೂರ್ವಕ ಶುಭಕಾಮನೆಗಳು. ನಮ್ಮ ಗ್ರಾಮ, ಊರು, ಜಿಲ್ಲೆ ಮತ್ತು ನಮ್ಮ ನಾಡಿನ ಅಭಿವೃದ್ಧಿ, ನಮ್ಮ ರೈತರು ಮತ್ತು ದುಡಿಯುವ ಜನರ ಬದುಕಿನಲ್ಲಿ ಇನ್ನಷ್ಟು ಬೆಳಕು, ಯುವಜನರಿಗೆ ಹೊಸ ಅವಕಾಶಗಳು, ಮಹಿಳೆಯರಿಗೆ ಹೆಚ್ಚಿನ ಶಕ್ತಿ ಹಾಗೂ ನಮ್ಮ ಶಿವಮೊಗ್ಗದ ಸಮಗ್ರ ಪ್ರಗತಿಗೆ ಈ ಹಬ್ಬ ಹೊಸ ಶುಭಾರಂಭದ ಸಂಕೇತವಾಗಲಿ ಎಂದು ಸಂಸದ ರಾಘವೇಂದ್ರ ಹಾರೈಸಿದ್ದಾರೆ. ಹಾಗೆಯೇ, ಸಾರ್ವಜನಿಕವಾಗಿ ಗೌರಿ-ಗಣೇಶ ಹಬ್ಬವನ್ನು […]
Continue Readingಶಿವಮೊಗ್ಗ | ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ, ಪರಿಶೀಲನೆ
ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವುದು ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸರು ಇಂತಹ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿದ್ದಾರೆ. ಇದುಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಮಹತ್ವದ ಸುರಕ್ಷತ ಕ್ರಮವಾಗಿದೆ.
Continue Readingಹೊಸನಗರ | ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು
ಮಾಹಿತಿ ತಿಳಿದು ಸ್ಥಳಕ್ಕೆ ನಗರ ಠಾಣೆ ಪಿಎಸ್ಐ ಶಿವಾನಂದ ಕೋಳಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Continue Readingಶಿವಮೊಗ್ಗ | ಕುವೆಂಪು ವಿವಿಯ UUCMS ಪೋರ್ಟಲ್ನಲ್ಲಿ ಅನುತ್ತೀರ್ಣಗೊಂಡವನನ್ನು ಬದಲಾಯಿಸಿ ಉತ್ತೀರ್ಣ ಮಾಡಿದ ಅಡ್ಮಿನ್ ವಿರುದ್ಧ ದೂರು ದಾಖಲು
ಕುವೆಂಪು ವಿಶ್ವವಿದ್ಯಾಲಯದ ಫ್ಐಆರ್ ಪ್ರಕಾರ, ಕುವೆಂಪು ವಿಶ್ವವಿದ್ಯಾಲಯದ MBA ವಿಭಾಗದ ಅತಿಥಿ ಉಪನ್ಯಾಸಕಿ ಟೀನಾ ಕುಮಾರಿ ಬಿ.ಎಸ್. ಅವರು UUCMS ಆಡ್ಮಿನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಷಾ ವಿರುದ್ಧ ದೂರು ನೀಡಿದ್ದರು. ಇವರು ಕೆಲವು ವಿದ್ಯಾರ್ಥಿಗಳಿಗೆ ಹಣದ ಆಮಿಷವೊಡ್ಡಿದ್ದರು ಎಂದು ದೂರಿದ್ದರು. ಅಲ್ಲದೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಒಂದು ವಿಷಯವನ್ನು ಪಾಸ್ ಮಾಡಲು ₹10,000ರಂತೆ, 5 ವಿಷಯಗಳಿಗೆ ₹50,000 ಪಡೆದಿದ್ದಾರೆ ಎಂಬ ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ವಿಶ್ವವಿದ್ಯಾಲಯದ ಕುಲಸಚಿವರು […]
Continue Readingಕುಮಟಾ | ಹೊಸ ಮೊಬೈಲ್ ಖರೀದಿಸಿ ಡಿಜಿಟಲ್ ಪಾವತಿಯ ಹೆಸರಿನಲ್ಲಿ ವಂಚನೆ
ಈ ಸಂಬಂಧ ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 319(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಠಾಣಾ ಅಪರಾಧ ಕ್ರಮಾಂಕ 188/2026 ಎಂದು ದಾಖಲಿಸಲಾಗಿದೆ. ವಂಚಕನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ CCTV ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
Continue Readingಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ
ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಗರ್ಭಿಣಿಯರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ತಡೆಯಲು, ನೋಂದಣಿ ಹಾಗೂ ಚಿಕಿತ್ಸಾ ಕೌಂಟರ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಈ ಹಿಂದೆಯೇ ಸೂಚಿಸಿದ್ದೆ ಎಂದು ಕೌಂಟರ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ರೋಗಿಗಳಿಗೆ ತೊಂದರೆಯಾಗದಂತೆ ಆಸ್ಪತ್ರೆಯ ಆಡಳಿತದಲ್ಲಿ ಉತ್ತರದಾಯಿತ್ವ ತರಲು ಹಾಗೂ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದೇ ವೇಳೆ ಒಳರೋಗಿಗಳು, ಮತ್ತು ಅವರ ಕಡೆಯವರು ರೋಗಿಗಳ ಕೈಯಲ್ಲೇ ಲ್ಯಾಬ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗುತ್ತದೆ.ಪರೀಕ್ಷೆಗಳ ವರದಿ ಸಿಗುವುದು […]
Continue Reading




