BPL ಕಾರ್ಡ್​​ ಆದಾಯ ಮಿತಿ ₹3 ಲಕ್ಷಕ್ಕೇರಿಸುವ ಭರವಸೆ ನೀಡಿದ ಸಚಿವ ಮುನಿಯಪ್ಪ

2011ರ ಸೆನ್ಸಸ್ ಪ್ರಕಾರ ಬೆಂಗಳೂರಲ್ಲಿ 83,98,537 ಜನರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಕೊಟ್ಟಿರುವುದು 7.10 ಲಕ್ಷಕ್ಕೆ ಮಾತ್ರ. ಇಂದಿನ ಜನಸಂಖ್ಯೆ ಪರಿಗಣಿಸಿದರೆ ಅದು 15% ಕೂಡ ಇಲ್ಲ ಎಂದರು.ಇಂದು ಬೆಂಗಳೂರಲ್ಲಿನ ಬಡವರು, ವಿಧವೆಯರು, ವಿಕಲಚೇತನರು ಹಾಗೂ ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬೆಂಗಳೂರಿನ ಜನಪ್ರತಿನಿಧಿಯಾಗಿ ಬಡವರ ಪರ ನಾವು ಏನು ಕೆಲಸ ಮಾಡಿಲ್ಲ ಎಂಬ ಪಶ್ಚಾತಾಪ ಆಗುತ್ತಿದೆ. 200 ರೂ.‌ ಸೀರೆ ಕೊಡುತ್ತೇವೆ ಅಂದರೆ ಸಾಕು, ಸಾವಿರಾರು ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಬೆಂಗಳೂರಿನ‌ ತಲಾ […]

Continue Reading

ರೈಲು ಟಿಕೆಟ್​ ರದ್ದತಿ ರೀಫಂಡ್‌ಗೆ ಹೊಸ ನಿಯಮ ಜಾರಿ

ರೈಲು ಹೊರಡುವ 72 ಗಂಟೆಗಳಿಗಿಂತ ಮೊದಲು ಟಿಕೆಟ್​ ಮಾಡಿದರೆ ಪ್ರತಿ ಪ್ರಯಾಣಿಕರಿಗೆ ಸ್ಥಿರ ರದ್ದತಿ ಶುಲ್ಕ ಹೊರತುಪಡಿಸಿ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ನೀತಿಯಡಿಯಲ್ಲಿ, 48 ರಿಂದ 12 ಗಂಟೆಗಳ ನಡುವೆ ಮಾಡಿದ ರದ್ದತಿಗೆ ಟಿಕೆಟ್ ವೆಚ್ಚದ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ. ಆದರೆ 48 ಗಂಟೆಗಳಿಗಿಂತ ಮುಂಚಿತವಾಗಿ ಮಾಡಿದ ರದ್ದತಿಗೆ ಪೂರ್ಣ ಮರುಪಾವತಿ ನೀಡಲಾಗುತ್ತಿದೆ. ಕಾಳಸಂತೆಯಲ್ಲಿ ಹಾಗೂ ಏಜೆಂಟ್​ಗಳಿಂದ ಕೊನೆಯ ಕ್ಷಣದ ಟಿಕೆಟ್​ಗಳ ಮಾರಾಟವನ್ನು ತಡೆಯಲು ಮರುಪಾವತಿ ನಿಯಮವನ್ನು ಮಾರ್ಪಡಿಸಲಾಗುತ್ತಿದೆ ಎಂದು ವೈಷ್ಣವ್​ ಹೇಳಿದರು. ಹೊಸ ಮರುಪಾವತಿ ನಿಯಮವು […]

Continue Reading

ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ!

ಶಾಲೆಗಳ ಜಮೀನುಗಳು ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಡೆಯಲು ಮತ್ತು ಅನ್ಯ ಕಾರ್ಯಗಳಿಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ರಕ್ಷಣೆ ಒದಗಿಸಲು ಈ ಕಾನೂನು ಬಲ ತುಂಬಲಿದೆ.ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣವೇ ನಮ್ಮ ಸರ್ಕಾರದ ಮೂಲ ಮಂತ್ರ. ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಅತ್ಯಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿ ಒಮ್ಮತದ ಅಂಗೀಕಾರಕ್ಕೆ ಕಾರಣರಾದ ಸನ್ಮಾನ್ಯ ಸಭಾಪತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೂ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪನವರು ಇಂದು ಧನ್ಯವಾದ ತಿಳಿಸಿದರು.

Continue Reading

ಶಿವಮೊಗ್ಗ | ಒಳಮೀಸಲಾತಿ ಜಾರಿಗೊಳಿಸಿ ; ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ

ಒಳಮೀಸಲಾತಿ ಜಾರಿಗೆ ಯಾವುದೇ ತಾಂತ್ರಿಕ ಅಡಚಣೆ ಅಥವಾ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದರೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸಂಘಟನೆಗಳು ಆರೋಪಿಸಿದವು. ಈ ಹಿನ್ನೆಲೆಯಲ್ಲಿ ಸಮುದಾಯದ ಉದ್ಯೋಗಾವಕಾಶಗಳು ಕಳೆದು ಹೋಗುವ ಭೀತಿ ವ್ಯಕ್ತವಾಗಿದೆ ಎಂದರು. ಮುಖ್ಯ ಹಕ್ಕೊತ್ತಾಯಗಳು 56,432 ಹುದ್ದೆಗಳ ನೇಮಕಾತಿ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕುಒಳಮೀಸಲಾತಿ ಜಾರಿ ಮಾಡಿ ಜನಸಂಖ್ಯೆ ಅನುಗುಣ ಉದ್ಯೋಗ ಹಂಚಿಕೆ ಮಾಡಬೇಕು. ವಿಶ್ವವಿದ್ಯಾಲಯಗಳನ್ನು ಒಂದೇ ಘಟಕವಾಗಿ ಪರಿಗಣಿಸುವ ಕ್ರಮ ಕೈಬಿಡಬೇಕುಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕುಎಸ್‌ಸಿ/ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಸಂವಿಧಾನದ 9ನೇ […]

Continue Reading

ಶಿವಮೊಗ್ಗ | ಉದ್ಯಮಿಗೆ ಬೆಳಗಾವಿ ಜೈಲಿನಿಂದ ರೌಡಿ ಫೌಝನ್ ಬೆದರಿಕೆ ಕರೆ

ಇದರಿಂದ ಬೇಸತ್ತ ಉದ್ಯಮಿ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸ್ ತನಿಖೆಯ ವೇಳೆ ಉದ್ಯಮಿಯ ಮೊಬೈಲ್‌ಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಂಟರ್ನೆಟ್ ಕರೆಗಳುಬಂದಿರುವುದು ದೃಢಪಟ್ಟಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಈ ಕ್ರಿಮಿನಲ್, ಹೊರಗಿರುವ ತನ್ನ ಬೆಂಬಲಿಗರ ಮೂಲಕ ಇಂತಹ ಸುಲಿಗೆ ಸಂಚು ರೂಪಿಸುತ್ತಿರುವುದು ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ದೊಡ್ಡಪೇಟೆ ಪೊಲೀಸರು ಈ ಕುರಿತು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಜೈಲಿನಿಂದ ಬಂದ ಕರೆಯ ಮೂಲ ಹಾಗೂ ಸ್ಥಳೀಯವಾಗಿ ಸಹಕರಿಸಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Continue Reading

ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆ,ಮಹಿಳಾ ಮೀಸಲು ನಿಗದಿಪಡಿಸಲು ಮುಂದಾದ ಕೇಂದ್ರ ಸರ್ಕಾರ

ನಾರಿ ಶಕ್ತಿ ಅಭಿನಂದನ್‌ ಅಧಿನಿಯಮ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ಕಲ್ಪಿಸುವ ಸಂಬಂಧ 2023ರ ಮಹಿಳಾ ಮೀಸಲು ವಿಧೇಯಕಕ್ಕೆ ಮಹತ್ವದ ತಿದ್ದುಪಡಿ (ನಾರಿ ಶಕ್ತಿ ಅಭಿನಂದನ್‌ ಅಧಿನಿಯಮ-2023) ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ 2029ರ ಲೋಕಸಭಾ ಚುನಾವಣೆ ವೇಳೆ ಮಹಿಳೆಯರಿಗೆ ಮೀಸಲು ಸ್ಥಾನ ನಿಗದಿಪಡಿಸುವ ಸಂಬಂಧ ಪ್ರಸ್ತುತ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲಿತಿದ್ದುಪಡಿ ವಿಧೇಯಕ ಮಂಡಿಸಲು ನಿರ್ಧರಿಸಿದೆ. ಈ ಸಂಬಂಧ ರಾಜಕೀಯ ಪಕ್ಷಗಳ ಜತೆ ಸರಕಾರ ಸಮಾಲೋಚನೆ ನಡೆಸಿದೆ. ಪ್ರಸ್ತಾವಿತ ತಿದ್ದುಪಡಿ ವಿಧೇಯಕ ಕುರಿತು […]

Continue Reading

ದಾವಣಗೆರೆ ದಕ್ಷಿಣ ಉಪಚುನಾವಣೆ ; ಕುಬೇರ ವರ್ಸಸ್ ಸಾಮಾನ್ಯ ವ್ಯಕ್ತಿಯ ಮಧ್ಯೆ ಚುನಾವಣೆ : ಸಂಸದ ಬಿ. ವೈ. ರಾಘವೇಂದ್ರ

ಸಕಾರಾತ್ಮಕವಾಗಿ ಅವರು ಸ್ಪಂದಿಸಿದ್ದು ಮೇ ತಿಂಗಳಿಂದ ಇಂಡಿಗೋ ಯಾನ ನಿಲ್ಲಿಸದಂತೆ ನಾನು ಕೂಡ ಹಲವು ಬಾರಿ ಮನವಿ ಮಾಡಿದ್ದೇನೆ. ಶಿವಮೊಗ್ಗ-ಬೆಂಗಳೂರು ವಿಮಾನ ಮಾರ್ಗ ಉಡಾನ್ ಯೋಜನೆಯಡಿ ಬರುವುದಿಲ್ಲ ಎಂದರು. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಬಗ್ಗೆ ಮಾvನಾಡಿದ ಸಂಸದರು, ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಮತ್ತು ರಾಜ್ಯ ೬೦-೪೦ರ ಅನುಪಾತದಲ್ಲಿ ಈ ಯೋಜನೆಗೆ ಚಿಂತಿಸಿತ್ತು, ಆದರೆ ಕೇಂದ್ರ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. ಸದ್ಯಕ್ಕೆ ಪರಿಸರದ ದೃಷ್ಟಿಯಿಂದ ಯೋಜನೆ ಯನ್ನು ತಡೆಹಿಡಿಯುವ ಕೆಲಸ ಆಗಿದೆ. ಯಾವುದೇ […]

Continue Reading

ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು! ಮತಾಂತರವಾದರೆ ಎಸ್‌ಸಿ ಮೀಸಲಾತಿ ರದ್ದು

ಪಾದ್ರಿಯಾಗಿ ಕೆಲಸ ಮಾಡುತ್ತಿದ್ದ ಆನಂದ್, ತಮ್ಮ ಮೇಲೆ ಕೆಲವರು ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿಗಳು ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಅವರು ಎಸ್‌ಸಿ ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ವಾದಿಸಿದ್ದರು. ಆಂಧ್ರಪ್ರದೇಶ ಹೈಕೋರ್ಟ್ ಆನಂದ್ ಅವರ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ತೀರ್ಪು ಮತಾಂತರ ಮತ್ತು ಮೀಸಲಾತಿ ಹಕ್ಕುಗಳ ನಡುವಿನ ಕಾನೂನು ಸಂಘರ್ಷಕ್ಕೆ ಸ್ಪಷ್ಟವಾದ ದಿಕ್ಕನ್ನು […]

Continue Reading

ಶಿವಮೊಗ್ಗ | ಭಾರಿ‌ ಮಳೆಯಿಂದ ವಾಹನದ ಮೇಲೆ ಬಿದ್ದ ತೆಂಗಿನಮರ

ಘಟನೆಯ ವೇಳೆ ಯಾರೂ ವಾಹನದ ಒಳಗೆ ಇಲ್ಲದಿರುವುದು ದೊಡ್ಡ ಅಪಾಯವನ್ನು ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಳಿ ಮಳೆಯ ತೀವ್ರತೆಗೆ ಕೆಲಕಾಲ ಜನರಲ್ಲಿ ಆತಂಕ ಉಂಟಾಗಿತ್ತು. ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪಿಎಸ್‌ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸ್ಥಳೀಯರ ಸಹಾಯದಿಂದ ಕ್ರಮ ಕೈಗೊಳ್ಳಲಾಗಿದೆ.

Continue Reading

ಶಿವಮೊಗ್ಗ | ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ : ಸಂಚಾರಿ ಪೊಲೀಸ್ ವೈ.ಸುರೇಶ್ ಕುಮಾರ್

ಇತ್ತೀಚಿನ ದಿನಗಳಲ್ಲಿ ವ್ಹೀಲಿಂಗ್ ಮಾಡುವುದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಪ್ರಮಾಣ ಸಂಖ್ಯೆ ಹೆಚ್ಚುತ್ತಿದೆ. ಯುವಜನರು ವಾಹನ ಓಡಿಸುವಾಗ ಏಕಾಗ್ರತೆಯಿಂದ ಎಚ್ಚರಿಕೆ ವಹಿಸಬೇಕು ಎಂದರು. ಈಗಾಗಲೇ ಶಿವಮೊಗ್ಗದಲ್ಲಿ ನಾಲ್ಕು ಸಾವಿರ ಸಿಸಿ ಕ್ಯಾಮರಾಗಳು ಚಾಲನೆಯಲ್ಲಿವೆ. ಬರುವ ದಿನಗಳಲ್ಲಿ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ತಿಳಿಸುವುದರ ಮುಖಾಂತರ ಅಪಘಾತಗಳನ್ನು ತಪ್ಪಿಸಬೇಕು. 18 […]

Continue Reading