ಹೊಸನಗರ ಕ್ಷೇತ್ರ ಮರುಸ್ಥಾಪನೆ ಪಾದಯಾತ್ರೆಯಿಂದ ಫಲವಿಲ್ಲ : ವಾಟಗೋಡು ಸುರೇಶ್
ಅಂದು ಮುಂದಾಳತ್ವ ವಹಿಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಆಪಾದಿಸಿದರು.ಸದ್ಯ ಎರಡು ರಾಷ್ಟ್ರೀಯ ಪಕ್ಷಗಳೂ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಹಾಗೂ ಪರಸ್ಪರ ವಿರೋಧ ಪಕ್ಷಗಳಾಗಿವೆ. ಸರಕಾರದ ಹಂತದಲ್ಲಿ ಆಗಬೇಕಿರುವ ಕ್ಷೇತ್ರ ಮರುವಿಂಗಡಣೆಗೆ ಸರಕಾರದ ಮಟ್ಟದಲ್ಲಿ ಒತ್ತಡ ಹೇರಬೇಕಾಗಿರುವ ರಾಜಕೀಯ ಮುಖಂಡರು ಅದನ್ನು ಬಿಟ್ಟು ಇಲ್ಲಿ ಜನಸಾಮಾನ್ಯರ ದಿಕ್ಕುತಪ್ಪಿಸಿ ಪಾದಯಾತ್ರೆ ಮಾಡುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು..? ಹೊಸನಗರ ಕ್ಷೇತ್ರ ಇಲ್ಲದ ಕಾರಣಕ್ಕೆ ಅಭಿವೃದ್ಧಿಯಾಗಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. […]
Continue Readingಶಿವಮೊಗ್ಗ | ಧಿಡೀರನೆ ಹೊತ್ತು ಉರಿದ ಲಾರಿ ; ತಪ್ಪಿದ ಭಾರಿ ಅನಾಹುತ
ಶೇಷಾದ್ರಿಪುರಂ ರೈಲ್ವೆ ಮೇಲ್ ಸೇತುವೆಯ ಕೆಳಭಾಗದಲ್ಲಿ ನಿಂತ್ತಿದ್ದ ಈ ಲಾರಿ ಸಾಮಗ್ರಿಗಳನ್ನು ತುಂಬಲು ಬಂದಾಗ ಖಾಲಿ ಲಾರಿಯಾಗಿತ್ತು. ಕೆ.ಎ.-೨೫ಬಿ-೦೮೫೫ ಎಸ್‌ಕೆಪಿ ರೋಡ್ ಲೈನ್ಸ್‌ನ ಮಹಮ್ಮದ್ ಆಬಿದ್ ಅವರಿಗೆ ಸೇರಿದ ಲಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿಯ ಮುಂಭಾಗ ಮತ್ತು ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ .
Continue Readingಶಿವಮೊಗ್ಗ | ಅಮೃತ ಲೈಫ್ ಲೈನ್ ವೈದ್ಯರ ಎಡವಟ್ಟಿಗೆ ಮಹಿಳ ರೋಗಿಯ ಜೀವನ್ಮರಣದ ಹೋರಾಟ
ಮಾರ್ಚ್ 12ರಂದು ವೈದ್ಯರು ಇವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೀಡಲಾದ ಅನಸ್ತೇಶಿಯಾ (ಮತ್ತು ಮದ್ದು) ಪ್ರಮಾಣ ಮಿತಿ ಮೀರಿದ್ದರಿಂದ ಮಾರ್ಚ್ 13ರಿಂದಲೇ ಮಹಿಳೆಯ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಂತಾಗಿದೆ. ಶಸ್ತ್ರಚಿಕಿತ್ಸೆ ಮುಗಿದು ದಿನಗಳೇ ಕಳೆದರೂ ದೇವಿ ಬಾಯಿ ಅವರು ಪ್ರಜ್ಞಾವಸ್ಥೆಗೆ ಬಂದಿಲ್ಲ. ವೈದ್ಯರ ಯಡವಟ್ಟಿನಿಂದಾಗಿ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯ ವೈದ್ಯರ ಸಲಹೆಯಂತೆ ನಂತರ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯೂ ಪರಿಸ್ಥಿತಿ […]
Continue ReadingLPG ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ
ಪಿಎಂಯುವೈ (ಉಜ್ವಲ್ ಗ್ಯಾಸ್) 45 ದಿನ, ನಗರ ಪ್ರದೇಶಕ್ಕೆ 25 ದಿನ ಹಾಗೂ ಗ್ರಾಮೀಣ ಭಾಗಕ್ಕೆ 45 ದಿನ ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ದಯವಿಟ್ಟು ಅಧಿಕೃತವಾಗಿ ಕಂಪನಿಗಳಿಂದ ಬರುವ ಮಾಹಿತಿಗಳ ಮೇಲೆ ಗಮನಹರಿಸಿ. ಗಾಬರಿಯಲ್ಲಿ ಗ್ಯಾಸ್ ಬುಕ್ ಮಾಡಬೇಡಿ ಎಂದು ಬರೆದುಕೊಂಡಿದೆ.
Continue ReadingRCB ಹೆಸರು ಬದಲಾವಣೆ ಆಗತ್ತಾ?
ಈ ಕಂಪನಿಯು ಲಂಡನ್ ಮೂಲದ ಯುಕೆ–ಡಿಯಾಜಿಯೊದ ಅಂಗಸಂಸ್ಥೆಯಾಗಿದೆ. ಯುಎಸ್‌ಎಲ್ ಮದ್ಯ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರನ್ನು ಇಟ್ಟಿದ್ದರು ವಿಜಯ್ ಮಲ್ಯ. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರೇ ಇದ್ದರೆ ಈಗಲೂ ರಾಯಲ್ ಚಾಲೆಂಜ್ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆದಿತ್ಯ ಬಿರ್ಲಾ ಗ್ರೂಪ್ ಹೆಸರು ಬದಲಾವಣೆ […]
Continue ReadingKSRTC ಬಸ್ ಟಿಕೆಟ್ ವಿಚಾರ ; ಸಾರಿಗೆ ತನಿಖಾಧಿಕಾರಿಯಿಂದ ವೃದ್ಧನ ಮೇಲೆ ಹಲ್ಲೆ
ಈ ವೇಳೆ ಅವರ ಜೊತೆಯಲ್ಲಿದ್ದ ಶಿವಣ್ಣ ಎಂಬುವವರು ಇಬ್ಬರಿಗೂ ಸೇರಿಸಿ ಟಿಕೆಟ್ ಪಡೆದುಕೊಂಡಿದ್ದರು.ಸಕಲೇಶಪುರಕ್ಕೆ ತಲುಪುವ ಮೊದಲೇ ಶಿವಣ್ಣ ಅವರು ಸೇತುವೆ ಸ್ಟಾಪ್‌ನಲ್ಲಿ ಇಳಿದುಕೊಂಡಿದ್ದು, ಇಬ್ಬರ ಟಿಕೆಟ್ ಕೂಡ ಅವರ ಬಳಿಯೇ ಉಳಿದುಕೊಂಡಿತ್ತು. ಅಬ್ದುಲ್ ಹಫೀಜ್ ಅವರು ಹಳೆ ಬಸ್ ನಿಲ್ದಾಣದ ಬಳಿ ಇಳಿಯುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಟಿಕೆಟ್ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಸದಾಶಿವ ಎಂಬುವವರು ಟಿಕೆಟ್ ಕೇಳಿದ್ದಾರೆ. ”ಟಿಕೆಟ್ ನನ್ನ ಜೊತೆ ಬಂದಿದ್ದವರ ಬಳಿ ಇದೆ” ಎಂದು ಅಬ್ದುಲ್ ಹಫೀಜ್ ವಿವರಿಸಲು ಪ್ರಯತ್ನಿಸಿದರೂ, ಸದಾಶಿವ ಅವರು ಅದನ್ನು ಕೇಳಿಸಿಕೊಳ್ಳದೆ […]
Continue Readingಪ್ರಭಾ ಮಲ್ಲಿಕಾರ್ಜುನ್‌ಗೆ ಒತ್ತಾಯ ಮಾಡಿ ಟಿಕೆಟ್ ಕೊಟ್ಟಿದ್ದು ನಾವೇ : DCM ಡಿಕೆಶಿ
“ಅವರು ಕೇಳದಿದ್ದರೂ, ನಾವು ಬಲವಂತವಾಗಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ದಾವಣಗೆರೆಯಲ್ಲಿ ಹಲವಾರು ಬಾರಿ ಸೋಲು ಕಂಡಿದ್ದ ಹಿನ್ನೆಲೆಯಲ್ಲಿ, ಅವರು ನಿಂತರೆ ಗೆಲುವು ಸಾಧ್ಯವೆಂದು ನಂಬಿದ್ದೆವು. ಈಗ ಗೆದ್ದು ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಕುಟುಂಬ ರಾಜಕಾರಣದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ. ಎಲ್ಲಾ ಪಕ್ಷದಲ್ಲೂ ಇದ್ದೇ ಇದೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದಿಂದ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ಈಗಲೂ 3 ಜನ ರಾಜಕಾರಣದಲ್ಲಿದ್ದಾರೆ ಎಂದರು. […]
Continue Reading




