ಶಿವಮೊಗ್ಗ, ಪಿ.ಸಿ.ಡಿ.ಎ ಪ್ರತಿನಿಧಿಗಳಿಂದ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರನಾರಿಯರಿಗಾಗಿ “ಸ್ಪರ್ಶ್ ಸಹಾಯತಾ ಶಿಬಿರ” ವನ್ನು ಮಲ್ಟಿ ಪರ್ಪಸ್ ಹಾಲ್, ಪಿ.ಸಿ.ಡಿ.ಎ, ಬೆಂಗಳೂರು ಇಲ್ಲಿ ನ. 18 ಮತ್ತು 19 ರಂದು ಬೆಳಿಗ್ಗೆ 9.30 ರಿಂದ ಸಂಜೆ 05.00 ರವರೆಗೆ ಆಯೋಜಿಸಲಾಗಿದೆ.
ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರು ಸ್ಪರ್ಶ್ ಸಂಬಂಧಿಸಿದಂತೆ ಹಾಗೂ ಜೀವನ ಪ್ರಮಾಣ ಪತ್ರ ಸಲ್ಲಿಸುವ ಕುರಿತ ಸೂಕ್ತ ಸಲಹೆ ಮತ್ತು ಪರಿಹಾರಕ್ಕಾಗಿ ಸಂಬಂಧಿತ ಎಲ್ಲಾ ಪೂರಕ ದಾಖಲೆಗಳೊಂದಿಗೆ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ
ಮೊ.ಸಂ.: 8147527246 ನ್ನು ಸಂಪರ್ಕಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ (ಪ್ರಭಾರ) ಡಾ. ಸಿ.ಎ ಹಿರೇಮಠ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
