ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ

ಕೋಲ್ಕತ್ತಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಸುವೇಂದು ಅಧಿಕಾರಿಯನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಮಿತ್ ಶಾ ಅವರು ಅಧಿಕಾರಿ ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸುವೇಂದು ಅವರು ಸಂಘರ್ಷದ ಹಾದಿಯಲ್ಲಿ ಬಂದವರು. ಅವರಿಗೆ ಆಡಳಿತದ ಅನುಭವವಿದೆ.ಬಂಗಾಳದ ಜನತೆಯ ಆಸೆಗಳನ್ನು ಪೂರ್ಣಗೊಳಿಸಲು ಅವರು ಸಮರ್ಥರಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಅವರು ಈಗಾಗಲೇ ರಾಜ್ಯಪಾಲ ಆರ್.ಎನ್. […]

Continue Reading

ಟಿವಿಕೆ ವಿಜಯ್‌ಗೆ ಬೆಂಬಲ ನೀಡುವ ಆತಂಕ : AIADMK ಶಾಸಕರು ಪುದುಚೇರಿ ರೆಸಾರ್ಟ್‌ಗೆ ಶಿಫ್ಟ್..!

ಶಾಸಕರು ತಂಗಿರುವ ರೆಸಾರ್ಟ್ಶಾಸಕರು ತಂಗಿರುವ ರೆಸಾರ್ಟ್ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಈಗಾಗಲೇ ಐದು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಆದರೆ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತವನ್ನು ತಲುಪಲು ಇನ್ನೂ ಐದು ಶಾಸಕರ ಬೆಂಬಲದ ಅಗತ್ಯವಿದೆ.

Continue Reading

ಪಶ್ಚಿಮ ಬಂಗಾಳ | ರಾಜಿನಾಮೆ ಕೊಡದ ದೀದಿಗೆ ಮಂತ್ರಿಮಂಡಳವನ್ನೇ ವಿಸರ್ಜಿಸಿ ಶಾಕ್ ನೀಡಿದ ರಾಜ್ಯಪಾಲ ಆರ್‌ಎನ್ ರವಿ!

ಸಾಮಾನ್ಯವಾಗಿ, ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಹಾಗೆ ಮಾಡುತ್ತಾರೆ. ಆದಾಗ್ಯೂ, ಪ್ರಸ್ತುತ ಸಂದರ್ಭಗಳಲ್ಲಿ, ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ಉತ್ತುಂಗದಲ್ಲಿದ್ದಾಗ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಸರ್ಕಾರದ ಅಸ್ತಿತ್ವವನ್ನು ಕೊನೆಗೊಳಿಸಲು ಈ ವೀಟೋ-ತರಹದ ಅಧಿಕಾರವನ್ನು ಬಳಸಿದರು. ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ಅವರು ಹೊರಡಿಸಿದ ಅಧಿಸೂಚನೆಯು ಈ ನಿರ್ಧಾರವನ್ನು ರಾಜಭವನದ ನೇರ ಆದೇಶದ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ. ಐತಿಹಾಸಿಕ ವಜಾ: ರಾಜ್ಯಪಾಲ ಆರ್.ಎನ್. ರವಿ ಅವರು ಮಮತಾ ಬ್ಯಾನರ್ಜಿ ಅವರ ಸಂಪುಟವನ್ನು ವಜಾಗೊಳಿಸಿದ್ದಾರೆ. ಮೇ 7, […]

Continue Reading

ಪಶ್ಚಿಮ ಬಂಗಾಳ | ಸಿಎಂ ಅಭ್ಯರ್ಥಿ ಸುವೇಂದು ಅಧಿಕಾರಿ ಪಿಎ ಚಂದ್ರ ನಾಥ್ ದತ್ ಗುಂಡೆಟಿಗೆ ಬಲಿ!

ಬಿಜೆಪಿ ನಾಯಕ ಸದ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥರನ್ನು ಬುಧವಾರ ತಡರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಈ ಬಗ್ಗೆ ಸುವೇಂದು ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಆಪ್ತನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ಹತ್ಯೆ ಘಟನೆ ನಡೆದ ಕೆಲ ಗಂಟೆಗಳ ನಂತರ ಆಸ್ಪತ್ರೆಗೆ ತೆರಳಿದ ಸುವೇಂದು ಅಧಿಕಾರಿ, ಹತ್ಯೆಯನ್ನು ‘ಶೀತಲ ರಕ್ತದ ಕೊಲೆ’ ಮತ್ತು ‘ಕ್ರೂರ ಕೊಲೆ’ ಎಂದು ಕರೆದಿದ್ದಾರೆ. ಆಸ್ಪತ್ರೆಯ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ದಾಳಿ […]

Continue Reading

ಭಾರತೀಯ ಸಂಸ್ಕೃತಿ ಸಾರುವ ಶಿಶುಗೀತೆಗಳ ರಚನೆ : ಮೆಚ್ಚುಗೆಗಳಿಸಿದ ಬೆಳಗಾವಿಯ ಬಾಲಕಿ

ಈ ಪುಸ್ತಕವನ್ನು ಏಪ್ರಿಲ್ 18ರಂದು ಮುಂಬೈನಲ್ಲಿ ಚೇತನ್ ಭಗತ್ ಅವರು ಲೋಕಾರ್ಪಣೆಗೊಳಿಸಿ, ಲಾವಣ್ಯಳ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಅಥವಾ ‘ಜಾಕ್ ಆ್ಯಂಡ್ ಜಿಲ್’ ನಂತಹ ಪಾಶ್ಚಾತ್ಯ ಮೂಲದ ಕವಿತೆಗಳನ್ನು ಕಲಿಸುವುದು ಸಾಮಾನ್ಯ. ಆದರೆ, ನಮ್ಮ ದೇಶದ ಮಕ್ಕಳಿಗೆ, ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ನಾಯಕರನ್ನು ಪರಿಚಯಿಸಬೇಕು. ನಮ್ಮತನದ ಶಿಶುಗೀತೆಗಳ ಮೂಲಕ ಮಕ್ಕಳಿಗೆ ನಮ್ಮ ದೇಶದ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಿದ್ದೇನೆ ಎಂದು ಲಾವಣ್ಯ ಹೇಳಿದರು.

Continue Reading

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ನೃತ್ಯಕ್ಕೆ ಬ್ರೇಕ್ : ಸರ್ಕಾರ ಆದೇಶ

ಶಾಲೆಯು ಮಕ್ಕಳಿಗೆ ಜ್ಞಾನ ದೇಗುಲವಿದ್ದಂತೆ. ಮಗುವಿನ ಭವಿಷ್ಯದ ನಿರ್ಮಾಣ, ಸಂಸ್ಕಾರ, ವಿನಯತೆ, ಒಳ್ಳೆಯ ನಡತೆ, ಮಾನಸಿಕ ಸ್ಥಿತಿ ಮತ್ತು ನೈತಿಕ ಮೌಲ್ಯಗಳ ಬೆಳವಣಿಗೆಯು ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಾಗ ಅಶ್ಲೀಲ ಹಾಡುಗಳು ಮತ್ತು ನೃತ್ಯಗಳನ್ನು ಪ್ರದರ್ಶಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ನೈತಿಕ ಮೌಲ್ಯಗಳ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರಲಿದ್ದು, ಶಿಕ್ಷಣದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಲಿದೆ. ಶಾಲಾ ಶಿಕ್ಷಣ […]

Continue Reading

ಸಾವಿನ ಪುರಾವೆ ಕೇಳಿದ ಬ್ಯಾಂಕ್‌; ಸಮಾಧಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ವ್ಯಕ್ತಿ!

ಬ್ಯಾಂಕ್ ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಹಣವನ್ನು ಪಡೆಯಲು ವಾರಸುದಾರರ ಮರಣ ಪ್ರಮಾಣಪತ್ರ ಅಥವಾ ನಾಮಿನಿ ವಿವರ ಬೇಕಾಗುತ್ತದೆ. ಆದರೆ, ಇವುಗಳ ಅರಿವಿಲ್ಲದ ಜಿತು ಮುಂಡಾ ಅವರು, ಬ್ಯಾಂಕ್ ಅಧಿಕಾರಿಗಳು ಪದೇ ಪದೆ ದಾಖಲೆ ಕೇಳುತ್ತಿರುವುದಕ್ಕೆ ಬೇಸರಗೊಂಡಿದ್ದರು. ತನ್ನ ತಂಗಿ ಎರಡು ತಿಂಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎಂದು ಬ್ಯಾಂಕ್​ ಸಿಬ್ಬಂದಿಗೆ ತಿಳಿಸಿದರೂ, ನಿಯಮಗಳ ಪ್ರಕಾರ ಹಣ ನೀಡಲು ದಾಖಲೆ ಸಲ್ಲಿಸಲು ಅವರು ಸೂಚಿಸಿದ್ದರು. ತಂಗಿ ಮೃತಪಟ್ಟಿದ್ದಾಳೆ ಎಂದು ಸಾಬೀತುಪಡಿಸಲು ಬೇರೆ ದಾರಿಯಿಲ್ಲದೆ, ಆತ ಸ್ಮಶಾನಕ್ಕೆ ತೆರಳಿ ಹೂತಿಟ್ಟ […]

Continue Reading

ಶಿವಮೊಗ್ಗ | ಎಸ್‌ಎಸ್‌ಎಲ್‌ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆ-2 ಅವಕಾಶ : ಸಚಿವ ಎಸ್. ಮಧು ಬಂಗಾರಪ್ಪ

ಜೊತೆಗೆ, ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಬಯಸುವವರಿಗೆ “ಇಂಪ್ರೂವ್ಮೆಂಟ್” ಅವಕಾಶವೂ ನೀಡಲಾಗಿದೆ.

Continue Reading

ಸಿಇಟಿ ಪರೀಕ್ಷೆಯಲ್ಲಿ ಅವಾಂತರ : ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದ ಸಿಬ್ಬಂದಿ

ಈ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ. ಸುಪ್ರಿತ್ ಜನಿವಾರವನ್ನು ತೆಗೆದು ತನ್ನ ಬಳಿ ಇಟ್ಟುಕೊಳ್ಳಲು ಅನುಮತಿ ಕೇಳಿದಾಗ, ಅದನ್ನೂ ಅಧಿಕಾರಿಗಳು ನಿರಾಕರಿಸಿದರೆಂದು ಆರೋಪಿಸಲಾಗಿದೆ.ನಂತರ ಸ್ಥಳಕ್ಕೆ ಬಂದ ಮಹಿಳಾ ಸಿಬ್ಬಂದಿಯೊಬ್ಬರು ಕತ್ತರಿ ಬಳಸಿ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ನಡೆ ವಿದ್ಯಾರ್ಥಿಗೆ ತೀವ್ರ ಮಾನಸಿಕ ಆಘಾತ ಉಂಟುಮಾಡಿದೆ.ಈ ಅವಮಾನಕರ ಪರಿಸ್ಥಿತಿಯ ನಡುವೆಯೇ ಸುಪ್ರಿತ್ ಪರೀಕ್ಷೆಯನ್ನು ಬರೆದಿದ್ದಾನೆ. ಪರೀಕ್ಷೆ ಮುಗಿದ ನಂತರ, ಕಸದ ಬುಟ್ಟಿಯಲ್ಲಿ ಹಾಕಲಾಗಿದ್ದ ಜನಿವಾರವನ್ನು ಮರಳಿ ತೆಗೆದುಕೊಂಡು ಮನೆಗೆ ಹೋಗಿದ್ದಾನೆ.ಬಳಿಕ […]

Continue Reading

ಶಿವಮೊಗ್ಗ | ಪ್ರಥಮ ಪಿ.ಯು.ಸಿ. ದಾಖಲಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ

ಕಾಲೇಜುಗಳ ವಿವರ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಗಾಜನೂರು-56 ಶಿವಮೊಗ್ಗ ತಾಲ್ಲೂಕು ಮೊ.ಸಂ.9739977365, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹೊಸೂರು-908 ಶಿಕಾರಿಪುರ ತಾಲ್ಲೂಕು ಮೊ. ಸಂ. 8971701958, ಅಟಲ್ ಬಿಹಾರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆವಿನಹಳ್ಳಿ-584 ಸಾಗರ ತಾಲ್ಲೂಕು ಮೊ.ಸಂ.9480767164/6363184683, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆನವೇರಿ-57, ಭದ್ರಾವತಿ ತಾಲೂಕು-8105352698 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ […]

Continue Reading