ಶಿವಮೊಗ್ಗ | ನಾಳಿನ ಸತ್ಪ್ರಜೆಗಳು ಮತ್ತು ನಾಯಕರನ್ನು‌ ರೂಪಿಸುವ ಶಿಲ್ಪಗಳು ಶಿಕ್ಷಕರು : ಸಂಸದ ಬಿ.ವೈ.ರಾಘವೇಂದ್ರ

ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ‌ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಶ್ರೇಷ್ಠ ತತ್ತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದು ತಮ್ಮ‌ಜನ್ಮ‌ದಿನವನ್ನು ಶಿಕ್ಷಕ ದಿನವೆಂದು ಘೋಷಿಸಿದ ಮಹಾನ್ ವ್ಯಕ್ತಿ.ಶಿಕ್ಷಕನಿಲ್ಲದಿದ್ದರೆ ವ್ಯಕ್ತಿಯ ಜೀವನ ಅಪೂರ್ಣವಾಗಿರುತ್ತಿತ್ತು. ಗುರುಕುಲದಿಂದ ಹಿಡಿದು ಈವರೆಗೂ ಶಿಕ್ಷಣಕ್ಕೆ ಅತಿ ಹೆಚ್ಚಿನ‌ ಮಹತ್ವ ಇದೆ. ಸರಿಯಾದ ಮಾರ್ಗದರ್ಶನ ದೊರೆತಲ್ಲಿ ವೈಯಕ್ತಿಕ ಹಾಗೂ ದೇಶ ಅಭಿವೃದ್ಧಿ ಸಾಧ್ಯ. ಭಾರತ ಜಗತ್ತಿಗೆ ಗುರು ಆಗುತ್ತಿದೆ. ಶಿಕ್ಷಣದ ಪರಿಣಾಮ ಇದಾಗಿದ್ದು, ನಮ್ಮ ದೇಶದ ಮಹಾನ್ ಪುರುಷರು, ಆದರ್ಶ […]

Continue Reading

ಶಿವಮೊಗ್ಗ ಜಿಲ್ಲೆಯ 52 ಶಿಕ್ಷಕರಿಗೆ ಪ್ರಶಸ್ತಿ ; 21 ಮಂದಿಗೆ ಜಿಲ್ಲಾ ಅತ್ಯುತ್ತಮ, 31 ಮಂದಿಗೆ ವಿಶೇಷ ಉತ್ತಮ ಶಿಕ್ಷಕ ಗೌರವ

ಕಿರಿಯ ಪ್ರಾಥಮಿಕ ಶಾಲಾ ವಿಭಾಗ*ಸಾಗರ ತಾಲೂಕಿನ ಬನಶಂಕರಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸೋಮಪ್ಪ ಹೆಚ್, ಹೊಸನಗರ ತಾಲೂಕಿನ ಶರವಣ ಎಸ್, ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸತೋಟದ ಅಣ್ಣಪ್ಪ ಡಿ. ಹೆಚ್, ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉಮಾದೇವಿ ಎಲ್, ಸೊರಬ ತಾಲೂಕಿನ ಚನ್ನಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಾಲೇಶಪ್ಪ ಎನ್.ಸಿ, ಶಿಕಾರಿಪುರ ತಾಲೂಕಿನ ಬೇಗೂರು ವಡ್ಡಿಗೇರ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಸವರಾಜಪ್ಪ […]

Continue Reading

ಶಿವಮೊಗ್ಗ | ಇಎಸ್ಐಸಿ ಆಸ್ಪತ್ರೆಗಳಲ್ಲಿ ತಕ್ಷಣ ಒಪಿಡಿ ಆರಂಭಿಸಲು ಹಾಗೂ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಶಾಸಕರ ಸೂಚನೆ

1. ಒಪಿಡಿ (OPD) ಸೇವೆ ತಕ್ಷಣ ಆರಂಭ: ಇಎಸ್ಐ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ (OPD) ಕಾರ್ಯನಿರ್ವಹಿಸದೆ ಕಾರ್ಮಿಕರು ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಕೂಡಲೇ ಒಪಿಡಿ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಹಾಗೂ ಅಗತ್ಯವಿರುವ ಹೆಚ್ಚುವರಿ ಕೊಠಡಿ ಮತ್ತು ಸ್ಥಳಾವಕಾಶವನ್ನು ತಕ್ಷಣವೇ ಒದಗಿಸಲು ಸೂಚಿಸಿದರು. 2. ವೈದ್ಯರ ಕೊರತೆ ನೀಗಿಸಲು ಕ್ರಮ: ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳ ಕುರಿತು ಮಾಹಿತಿ ಪಡೆದ ಶಾಸಕರು, ಈ ಕೊರತೆಯನ್ನು ಶೀಘ್ರವಾಗಿ ಭರ್ತಿ ಮಾಡುವ ನಿಟ್ಟಿನಲ್ಲಿ ರಾಜ್ಯ […]

Continue Reading

ಶಿವಮೊಗ್ಗ | ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಕುಮಾರಿಯವರು ಕರ್ತವ್ಯ ನಿರ್ವಹಿಸುತ್ತಿರುವ ಸಮಟಗಾರು ಎಂಬ ಪುಟ್ಟ ಹಳ್ಳಿಯಲ್ಲಿ ಇಂದಿಗೂ ರಸ್ತೆಯು ಇಲ್ಲ ಬೀದಿ ದೀಪವು ಇಲ್ಲ..!

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಗೌರವಾನ್ವಿತ ಸಚಿವರಾದ ತಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸದರಿ ರಸ್ತೆಗೆ ಡಾಂಬರೀಕರಣ ಮತ್ತು ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮತ್ತು ಈ ಊರಿನ ಮಹಿಳೆಯರಿಗೆ, ವೃದ್ಧರಿಗೆ ಯಾವುದೇ ಅಡೆ ತಡೆ ಇಲ್ಲದೆ ಸುಲಲಿತವಾಗಿ ಸಂಚರಿಸಲು ತಾವು ಅವಕಾಶ ಕಲ್ಪಿಸಿಕೊಡಬೇಕೆಂದು ನೈಜಹೋರಾಟಗಾರರ ವೇದಿಕೆ ತಮ್ಮಲ್ಲಿ ವಿನಯಪೂರ್ವಕವಾಗಿ ನೈಜ ವೇದಿಕೆ ಆಗ್ರಹ ಪಡಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊಟ್ಟಮೊದಲ ಬಾರಿಗೆ ಸಮಟಗಾರು ಎಂಬ ಈ […]

Continue Reading

ಶಿವಮೊಗ್ಗ | ಓದಿನಷ್ಟೇ ಕ್ರೀಡೆಗೂ ಆದ್ಯತೆ ನೀಡಿ : ಸಂಚಾರಿ ಪಿ.ಐ. ದೇವರಾಜ್

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ಮಾತನಾಡುತ್ತಾ ಇನ್ಸ್ಪೆಕ್ಟರ್ ದೇವರಾಜ್ ಅವರು ಓದು ಹಾಗೂ ಕ್ರೀಡೆಯನ್ನು ಮುಂದಿದ್ದರಿಂದ ಇಂದು ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ. ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಹಿಡಿತ ಸಾಧಿಸಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಹಾರನಹಳ್ಳಿ ಹಿರಿಯ ಹಾರನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿಎಂಸಿ, ಗ್ರಾಮಸ್ಥರ ಸಹಕಾರದಿಂದ ಈ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಮಾಡಿದ್ದು ಸಂತಸದ ವಿಷಯ. ಇಲ್ಲಿ ಗೆದ್ದ ಮಕ್ಕಳು ಮುಂದೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮತ್ತು […]

Continue Reading

ಶಿವಮೊಗ್ಗ | ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ

ಇದರ ಜೊತೆಗೆ, ನಗರದ ವಾಜಪೇಯಿ ಬಡಾವಣೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನೂತನ ‘ಯೋಗ ಹಾಗೂ ಧ್ಯಾನ ಮಂದಿರ’ ನಿರ್ಮಾಣಕ್ಕೂ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಇಂದಿನ ಒತ್ತಡದ ಜೀವನದಲ್ಲಿ ಸಾರ್ವಜನಿಕರಿಗೆ ಆಧ್ಯಾತ್ಮಿಕ ಚಿಂತನೆ, ಮಾನಸಿಕ ನೆಮ್ಮದಿ ಹಾಗೂ ಯೋಗಾಭ್ಯಾಸಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶವನ್ನು ಈ ಮಂದಿರ ಹೊಂದಿದೆ. ಈ ವೇಳೆ ಮಾಜಿ ಸುಡಾ ಅಧ್ಯಕ್ಷರಾದ ನಾಗರಾಜ್ ಅವರು, ಜ್ಞಾನೇಶ್ವರ್ ಅವರು, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಸಸ್ಯಹಾರಿ ಫುಡ್ ಕೋರ್ಟ್ […]

Continue Reading

ಶಿವಮೊಗ್ಗ | ವಿದ್ಯಾನಗರದ ಎಂ.ಆರ್.ಎಸ್. ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು” ವೃತ್ತವೆಂದು ನಾಮಕರಣವಾಗಬೇಕು : ಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ (ರಿ). ಮತ್ತೊಮ್ಮೆ ಒತ್ತಾಯ..!

ಅದಕ್ಕಾಗಿ, ಶಿವಮೊಗ್ಗ ಜಿಲ್ಲಾ ಆಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಮೂಲಕ ಕ್ರಮ ಕೈಗೊಂಡು, ಆ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಎಂದು ನಾಮಕರಣ ಮಾಡುವಂತೆ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.ಈ ಮನವಿಯನ್ನು ಪುರಸ್ಕರಿಸಿ, ಸಮಾಜಕ್ಕೆ ಮಾದರಿಯಾದ ಈ ಮಹಾನ್ ಗುರುವರ್ಯರ ಹೆಸರಿನಲ್ಲಿ ನಾಮಕರಣ ಮಾಡುವ ಮೂಲಕ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಿತರಾಗುವಂತೆ ಮಾಡುವುದೇ ಸರ್ಕಾರದ ಗೌರವಾನ್ವಿತ ಕರ್ತವ್ಯವೆಂದು ನಾವು ನಂಬುತ್ತೇವೆ ಎಂದು, ಶ್ರೀ ಶ್ರೀ ಶ್ರೀ ನಾರಾಯಣಗುರು ಸೇವಾ ಸಮಿತಿ (ರಿ). ದಿನಾಂಕ […]

Continue Reading

ಶಿವಮೊಗ್ಗ | ಸಸ್ಯಹಾರಿ – ಮಾಂಸಹಾರಿ ಫುಡ್‌ಕೋರ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ; ಸ್ವಚ್ಚತೆ ಕಾಪಾಡಿಕೊಳ್ಳದಿದ್ದಲ್ಲಿ ಪರವಾನಿಗೆ ರದ್ದು : ಡಾ.ಮೈತ್ರಿ

ಇದೇ ಸಂದರ್ಭದಲ್ಲಿ ಕೆಲವು ಅಂಗಡಿಗಳಲ್ಲಿ ತಯಾರಾದ ಖಾದ್ಯಗಳಲ್ಲಿ ರಾಸಾಯನಿಕಗಳ ಬಳಕೆ ಆಗಿರುವ ಬಗ್ಗೆ ಅನುಮಾನ ಬಂದ ಕೆಲವು ಅಂಗಡಿಗಳ ಖಾದ್ಯ ತುಣುಕುಗಳ ಮಾದರಿಯನ್ನು ಪರೀಕ್ಷೆಗಾಗಿ ತೆಗೆದುಕೊಂಡ ಅವರು, ಉತ್ತಮ ಗುಣಮಟ್ಟದ ಎಣ್ಣೆಯನ್ನು ಬಳಸಬೇಕು. ಆಹಾರ ತಯಾರಿಕಾ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಅಂಗಡಿಗಳ ಮಾಲೀಕರಿಗೆ ಸೂಚಿಸಿದ ಅವರು, ಸಮಗ್ರ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ|ಚಂದ್ರಶೇಖರ್‌, ಕಂದಾಯಾಧಿಕಾರಿ ಸತೀಶ್‌, ದೀಪಕ್‌, ದೊಡ್ಡಬಸಪ್ಪರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

Continue Reading