ಮದುವೆ ದಿನವೇ ಯುವತಿ ಪರಾರಿ!

ಮುಂಜಾನೆ 1:00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಯುವತಿ, 4:00 ಗಂಟೆಯ ಹೊತ್ತಿಗೆ ತನ್ನ ಕೋಣೆಯಲ್ಲಿ ಕಂಡುಬಂದಿಲ್ಲ. ಪರಿವಾರದವರು ಮತ್ತು ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯುವತಿಯ ಸುಳಿವು ಸಿಗದ ಕಾರಣ ಯುವತಿಯ ಚಿಕ್ಕಪ್ಪ ಜಹೀರಾ ಖಾನ್ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ನಾಪತ್ತೆಯಾದ ಯುವತಿಯ ಚಹರೆ ನಾಪತ್ತೆಯಾದ ಕುಮಾರಿ ಸಫಾ ಅಫ್ಜಲ್ ಖಾನ್ 25 ವರ್ಷ ಪ್ರಾಯದವಳಾಗಿದ್ದು, ಸುಮಾರು 5 ಅಡಿ 2 ಇಂಚು ಎತ್ತರವಿದ್ದಾಳೆ. […]

Continue Reading

ಶಿರಸಿ | ವೈದ್ಯರ ಹತ್ಯೆ ಪ್ರಕರಣ ; ತೀರ್ಥಹಳ್ಳಿಯ ವ್ಯಕ್ತಿ ಬಂಧನ

ಡಿಎಸ್ಪಿ ಗೀತಾ ಪಾಟೀಲ ಹಾಗೂ ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸವರಾಜ ಕನಶೆಟ್ಟಿ ಮತ್ತು ತಂಡವು ಕಾರ್ಯಾಚರಣೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ನೆರವಿನೊಂದಿಗೆ ಕೇವಲ 6 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಚಿನ್ನಾಭರಣವನ್ನು ವಶಕ್ಕೆ ಪಡೆದ ತಂಡದ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಬಂಧಿತನನ್ನು ಕೋಟ್‌ರ್ಗೆ ಹಾಜರುಪಡಿಸಿ ಜೈಲಿಗೆ ಕಳಿಸಲಾಗಿದೆ.

Continue Reading

ಮದುವೆಯಲ್ಲಿ ಗ್ಯಾಸ್ ಸಿಲಿಂಡರ್ ಗಿಫ್ಟ್ ; ನವದಂಪತಿಗೆ ಬಂತು ನೋಟೀಸ್

ಭಟ್ಕಳದ ವಿವೇಕ್ ಮಹಾಲೆ ಮತ್ತು ನಾಗಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ ಸಂಬಂಧಿಕರೊಬ್ಬರು ಎಲ್‌ಪಿಜಿ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಭಿನ್ನ ಉಡುಗೊರೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ತಾಲೂಕು ಆಡಳಿತ, ವರನಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ. ಆಡಳಿತ ಆಕ್ಷೇಪ ಈ ಕುರಿತು ಪ್ರತಿಕ್ರಿಯಿಸಿರುವ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಅವರು, ಮದುವೆಯಲ್ಲಿ ಗ್ಯಾಸ್ ಸಿಲಿಂಡರ್ ಉಡುಗೊರೆ ನೀಡುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ. ನಿಯಮಗಳ ಪ್ರಕಾರ ಸಿಲಿಂಡರ್ ಅನ್ನು […]

Continue Reading

ಬೃಹತ್ ಕಾಳಿಂಗನ ಯಶಸ್ವಿ ಸೆರೆ

ಕಳೆದ 5 ದಿನಗಳ ಹಿಂದೆ ಈ ತೋಟದಲ್ಲಿ ಎರಡು ಕಾಳಿಂಗ ಸರ್ಪಗಳು ಭೀಕರವಾಗಿ ಸೆಣಸಾಟ ನಡೆಸಿದ್ದವು. ಆ ಕಾಳಗದ ನಂತರ ದೊಡ್ಡ ಕಾಳಿಂಗ ಸರ್ಪವು ಸಣ್ಣ ಕಾಳಿಂಗವನ್ನು ಸಂಪೂರ್ಣವಾಗಿ ನುಂಗಿ ಹಾಕಿತ್ತು. ಬೇರೆ ಹಾವನ್ನು ನುಂಗಿದ್ದರಿಂದ ಜೀರ್ಣಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿದ್ದ ಕಾರಣ, ಆ ಹಾವು ಸುಮಾರು 5-6 ದಿನ ಕಳೆದರೂ ತೋಟ ಬಿಟ್ಟು ಕದಲದೆ ಅಲ್ಲೇ ಠಿಕಾಣಿ ಹೂಡಿತ್ತು. ಜನರು ತೋಟದಲ್ಲಿ ಓಡಾಡುವಾಗ ಪದೇ ಪದೆ ಹಾವಿನ ಸಮೀಪವೇ ಹೋಗಬೇಕಾಗಿ ಬರುತ್ತಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಕಚ್ಚುವ […]

Continue Reading

ಉತ್ತರ ಕನ್ನಡ | ಮಕ್ಕಳಲ್ಲಿ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಿಸಬೇಕಿದೆ : ಇಸ್ರೋ ಮಾಜಿ ಅಧ್ಯಕ್ಷ ಡಾ.‌ಕಿರಣ್ ಕುಮಾರ್

ದೇಶ ಸ್ವತಂತ್ರಗೊಂಡ ಬಳಿಕ ವಿಜ್ಞಾನ ತಂತ್ರಜ್ಞಾನದ ಕಡೆಗೆ ಗಮನ ಹರಿಸುವುದಕ್ಕಿಂತ ದೇಶದ ಮೂಲ ಸೌಕರ್ಯಗಳ ಅಭಿವೃದ್ಧಿ, ಬಡತನ ನಿವಾರಣೆ, ಜನರ ಜೀವನ ಮಟ್ಟ ಸುಧಾರಿಸುವ ಸವಾಲುಗಳು ಹೆಚ್ಚಿದ್ದವು. ಆದರೂ ದೇಶದ ವಿಜ್ಞಾನಿಗಳ ಪ್ರಯತ್ನದಿಂದ ದೇಶವು ಅಲ್ಪಾವಧಿಯಲ್ಲಿಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿವೆ. ಇತ್ತೀಚೆಗೆ ಬಾಹ್ಯಾಕಾಶದಲ್ಲಿ ದೇಶದ ಸಾಧನೆ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಅವರು ಶ್ಲಾಘಿಸಿದರು. ಇಂದು ಪ್ರತಿಯೊಬ್ಬನ ಜೀವನ ವಿಜ್ಞಾನ ತಂತ್ರಜ್ಞಾನವನ್ನು ಅವಲಂಭಿಸಿದೆ. ವಿಜ್ಞಾನ ತಂತ್ರಜ್ಞಾನ ಹೊರತು ಜೀವನವೇ ಇಲ್ಲ ಎಂಬಂತಾಗಿದೆ. ದೇಶದಲ್ಲಿ ವಿಜ್ಞಾನ […]

Continue Reading

ಆಟವಾಡುತ್ತಾ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ ; ಪ್ರಾಣದ ಹಂಗುತೊರೆದು ಮಗುವನ್ನು ರಕ್ಷಿಸಿದ ಆಪದ್ಬಾಂಧವ

ಗಾಬರಿಯಿಂದ ಮನೆಯೊಳಗೆಲ್ಲಾ ಹುಡುಕಿದರೂ ಮಗು ಸಿಗಲಿಲ್ಲ. ಕೊನೆಗೆ ಅನುಮಾನಗೊಂಡು ಮನೆಯ ಹಿಂದಿನ ಬಾವಿಯ ಬಳಿ ಹೋಗಿ ಇಣುಕಿ ನೋಡಿದಾಗ, ಬಾವಿಯೊಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ಪುಟ್ಟ ಭುವಿ ಬಾವಿಯಲ್ಲಿದ್ದ ನೀರಿನ ಪಂಪ್‌ನ ಪೈಪ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀರಿನ ಮೇಲೆ ಒದ್ದಾಡುತ್ತಾ ಅಳುತ್ತಿದ್ದಳು.ಅಜ್ಜಿಯ ಕೂಗಾಟ ಕೇಳಿ ತಕ್ಷಣವೇ ಅಕ್ಕಪಕ್ಕದವರು ಓಡಿಬಂದಿದ್ದಾರೆ. ಈ ಆತಂಕದ ಸುದ್ದಿ ಹತ್ತಿರದಲ್ಲೇ ವಾಸವಿದ್ದ ಪಯ್ಯು ಚೌಟಿ ಅವರಿಗೂ ತಲುಪಿದೆ. ಆಗಷ್ಟೇ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಅವರು, ವಿಷಯ ತಿಳಿದ ಕೂಡಲೇ ಒಂದು […]

Continue Reading

ಮಗನ ಬೈಕ್ ಕ್ರೇಜ್, ಪಾಲಕರಿಗೆ ಶಾಕ್ ; ₹54 ಸಾವಿರ ದಂಡದ ಬಿಸಿ

“ನಮಗೆ ಲೈಸೆನ್ಸ್ ಇಲ್ಲ ಸರ್” ಎಂಬ ಆ ಬಾಲಕರ ಮುಗ್ಧ ಮಾತುಗಳು ಅವರ ಪೋಷಕರ ಪಾಲಿಗೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದವು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬೈಕ್ ಮಾಲೀಕರನ್ನು ನ್ಯಾಯಾಲಯದ ಕಟಕಟೆಗೆ ಎಳೆದು ತಂದರು. ನ್ಯಾಯಾಲಯದ ವಿಚಾರಣೆಯ ವೇಳೆ ಪೋಷಕರ ವಾದಗಳು ಫಲ ನೀಡಲಿಲ್ಲ. ಅಪ್ರಾಪ್ತರಿಗೆ ವಾಹನ ನೀಡಿದ ಇಬ್ಬರು ಪೋಷಕರಿಗೆ ಕ್ರಮವಾಗಿ 25,500 ರೂ. ಹಾಗೂ 28,500 ರೂ. ದಂಡ ವಿಧಿಸಿ ಜೆ.ಎಂ.ಎಫ್.ಸಿ ನ್ಯಾಯಾಲಯ ಕಠಿಣ ಆದೇಶ […]

Continue Reading

ವೈದ್ಯಕೀಯ ಸ್ನಾತಕೋತ್ತರ ಪದವಿ ; ಡಾ. ವಿಶಾಖ ಹೆಗಡೆಗೆ 6ನೇ ರ‌್ಯಾಂಕ್

ಸದ್ಯ ಡಾ. ವಿಶಾಖ ಅವರು ಬೆಳಗಾವಿಯ ಜವಾಹರ್‌ಲಾಲ್ ನೆಹರು ವೈದ್ಯಕೀಯ ಕಾಲೇಜು ಹಾಗೂ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೀನಿಯರ್ ರೆಸಿಡೆಂಟ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನೆಲೆಸಿರುವ ಶಿರಸಿಯ ಗಾಳಿಮನೆ ಗ್ರಾಮದ ಡಾ. ಜಿ.ಎಸ್. ಮಂಜುನಾಥ್ ಹೆಗಡೆ ಹಾಗೂ ನಿರುಪಮ ಮಂಜುನಾಥ್ ದಂಪತಿಯ ಪುತ್ರಿ .

Continue Reading

ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್

ಒಟ್ಟು 20 ಬೋಗಿಗಳು (1 ಪ್ರಥಮ ದರ್ಜೆ/AC 2-ಟೈರ್, 2 AC 3-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದರ್ಜೆ ಮತ್ತು 2 ಎಸ್‌ಎಲ್‌ಆರ್) ಇರಲಿದೆ. ಈಗಾಗಲೇ ಇರುವ ಇರುವ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ಇನ್ನು ಮಾರ್ಚ್​​ ಒಂದರಿಂದ ರೈಲು ಸಂಖ್ಯೆ 16581 ಮಧ್ಯರಾತ್ರಿ 12:15ಕ್ಕೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 09:00ಕ್ಕೆ ತಾಳಗುಪ್ಪ ತಲುಪಲಿದೆ. ಇನ್ನು ಅದೇ ದಿನ ಅಂದರೆ ಮಾರ್ಚ್ 1 ರಂದು ರೈಲು ಸಂಖ್ಯೆ 16582 ( ರಾತ್ರಿ 10:00ಕ್ಕೆ ತಾಳಗುಪ್ಪದಿಂದ ಹೊರಟು […]

Continue Reading