ಶಿವಮೊಗ್ಗ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ, ಅವರ ನಿಸ್ವಾರ್ಥ ಸೇವೆಯ ಪರಂಪರೆಯನ್ನು ಗೌರವಿಸಲು ಯಂಗ್ ಬ್ರಿಗೇಡ್ ಸೇವಾದಳ ಶಿವಮೊಗ್ಗ ವತಿಯಿಂದ ಆಯೋಜಿಸಲಾದ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆದಿದೆ.

ಭಾರತೀಯ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ. ಶ್ರೀನಿವಾಸ್ ಜೀ ಅವರ ಉದಾತ್ತ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದಲ್ಲಿ ಪಾಲ್ಗೊಂಡು, ರಕ್ತದಾನ ಮಾಡಿದ ಪ್ರತಿಯೊಬ್ಬ ದಾನಿಗಳಿಗೆ ಹಾಗೂ ಸಹಕರಿಸಿದ ಸರ್ವರಿಗೂ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ನೀವು ನೀಡಿದ ಪ್ರತಿ ಹನಿ ರಕ್ತವೂ ಇಂದಿರಾಜಿಯವರ ತ್ಯಾಗದ ಸ್ಮರಣೆಯೊಂದಿಗೆ ಮುಂಬರುವ ದಿನಗಳಲ್ಲಿ ಹಲವು ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ. ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ ಶಿವಮೊಗ್ಗದ ಎಲ್ಲಾ ಯುವಜನರು ಮತ್ತು ನಾಗರಿಕರ ಈ ಅಭೂತಪೂರ್ವ ಬೆಂಬಲಕ್ಕೆ ನಮ್ಮ ಯಂಗ್ ಬ್ರಿಗೇಡ್ ಸೇವಾದಳ ತಂಡವು ಚಿರಋಣಿಯಾಗಿದೆ ಎಂದು ,ಅನಿಲ್ ಕುಮಾರ್ ಸಿ. ಪಾಟೀಲ್ (ಉರ್ಸ್ ಸೇವಕಾಂಕ್ಷಿ)ಯಂಗ್ ಬ್ರಿಗೇಡ್ ಸೇವಾದಳ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
