ಸಾಗರದ ಶಾಹಿ ಗಾರ್ಮೆಂಟ್ಸ್ ಕಾರ್ಮಿಕರ PF & ESI ಸಮಸ್ಯೆಗಳಿಗೆ ಶೀಘ್ರ ಪರಿಹಾರ! : ಸಂಸದ ರಾಘವೇಂದ್ರ

ಶಿವಮೊಗ್ಗ

​ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶ್ರಮಜೀವಿಗಳ ಹಿತರಕ್ಷಣೆಗೆ ನಾವು ಸದಾ ಬದ್ಧ. ಶಿಕಾರಿಪುರದ ಭೇಟಿಯ ನಂತರ, ಇಂದು ಸಾಗರದ ಶಾಹಿ ಗಾರ್ಮೆಂಟ್ಸ್‌ಗೆ ಖುದ್ದು ಭೇಟಿ ನೀಡಿ, ಅಲ್ಲಿನ ಕಾರ್ಮಿಕ ಸಹೋದರಿಯರು ಮತ್ತು ನೌಕರರೊಂದಿಗೆ ನೇರ ಸಂವಾದ ನಡೆಸಿದರು ಮಾನ್ಯ ಸಂಸದ ರಾಘವೇಂದ್ರ.

ಕಾರ್ಮಿಕರಲ್ಲಿದ್ದ ಪಿ.ಎಫ್. (PF) ಮತ್ತು ಇ.ಎಸ್.ಐ (ESI) ಕುರಿತಾದ ಗೊಂದಲಗಳು ಹಾಗೂ ಆತಂಕಗಳನ್ನು ಆಲಿಸಿ, ಕಾರ್ಮಿಕ ಇಲಾಖೆ ಹಾಗೂ PF–ESI ಉನ್ನತಾಧಿಕಾರಿಗಳ ಉಪಸ್ಥಿತಿಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಹೆಣ್ಣುಮಕ್ಕಳ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸ್ಥಳದಲ್ಲೇ ನೇರ ಸ್ಪಷ್ಟನೆ ಮತ್ತು ಸೂಕ್ತ ಮಾರ್ಗದರ್ಶನ ಕೊಡಿಸಲಾಯಿತು.​ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರ ಸಾಮಾಜಿಕ ಭದ್ರತೆ, ವೇತನ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಹಲವು ಐತಿಹಾಸಿಕ ಸುಧಾರಣೆಗಳನ್ನು ತಂದಿದೆ. ಕ್ಷೇತ್ರಮಟ್ಟದಲ್ಲಿ ಈ ಕಲ್ಯಾಣ ಯೋಜನೆಗಳು ಪಾರದರ್ಶಕವಾಗಿ ಪ್ರತಿಯೊಬ್ಬ ಶ್ರಮಿಕನಿಗೂ ತಲುಪುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ.​ನಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗಾರ್ಮೆಂಟ್ಸ್ ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಅವರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಲು ನಾವು ಸದಾ ನಿಮ್ಮೊಂದಿಗಿರುತ್ತೇವೆ ಎಂದು ಮಾನ್ಯ ಸಂಸದ ರಾಘವೇಂದ್ರ ತಿಳಿಸಿದ್ದಾರೆ .

​ಸಭೆಯಲ್ಲಿ ಭಾಗವಹಿಸಿ, ಕಾರ್ಮಿಕರ ಆತಂಕಗಳನ್ನು ಆಲಿಸಿ ಸ್ಪಂದಿಸಿದ PF, ESI ಮತ್ತು ಕಾರ್ಮಿಕ ಇಲಾಖೆಯ ಉನ್ನತಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

Author